MM Keeravani : ಕೀರವಾಣಿ ಸಂಗೀತದ ಕನ್ನಡ ಹಿಟ್ ಸಾಂಗ್ಸ್ ಯಾವ್ದು? ಹಂಸಲೇಖ ಸಂಗೀತದಲ್ಲೂ ಗಾಯನ

By ಫಿಲ್ಮಿಬೀಟ್ ಡೆಸ್ಕ್

ಎಂ. ಎಂ ಕೀರವಾಣಿ ಆಸ್ಕರ್ ಪ್ರಶಸ್ತಿ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ 'RRR' ಚಿತ್ರದ 'ನಾಟು ನಾಟು' ಗೀತೆಗೆ ಆಸ್ಕರ್ ಒಲಿದಿದೆ. ಈ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರ್ತಿದೆ. ಸುದೀಪ್, ಉಪೇಂದ್ರ, ಯಶ್ ಸೇರಿದಂತೆ ಕನ್ನಡ ತಾರೆಯರು ಕೂಡ ಈ ಸಾಧನೆಯನ್ನು ಕೊಂಡಾಡಿದ್ದಾರೆ.

ಕಳೆದ ವರ್ಷ ಮಾರ್ಚ್‌ನಲ್ಲಿ 'RRR' ಸಿನಿಮಾ ರಿಲೀಸ್ ಆಗಿತ್ತು. 'ನಾಟು ನಾಟು' ಹಾಡಿಗೆ ಚಂದ್ರ ಬೋಸ್ ಸಾಹಿತ್ಯ ಬರೆದಿದ್ದಾರೆ. ಕೀರವಾಣಿ ಜೊತೆಗೆ ಚಂದ್ರಬೋಸ್ ಕೂಡ ಆಸ್ಕರ್ ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಇನ್ನು ಎಂ. ಎಂ ಕೀರವಾಣಿ ಕನ್ನಡ ಸಿನಿಮಾಗಳಿಗೂ ಸಂಗೀತ ನೀಡಿ ಗೆದ್ದಿದ್ದಾರೆ. ಇನ್ನು ಅವರ ಸಂಗೀತದ ತೆಲುಗು ಸಿನಿಮಾಗಳು ಕನ್ನಡಕ್ಕೆ ರೀಮೆಕ್ ಆದಾಗ ಅದೇ ಸಂಗೀತವನ್ನು ಬಳಸಿಕೊಳ್ಳಲಾಗಿದೆ.

Oscar winner mm keeravani: best Kannada tracks of the musician

1993ರಲ್ಲಿ ಬಂದ 'ಅಳಿಮಯ್ಯ' ಚಿತ್ರದ ಮೂಲಕ ಕೀರವಾಣಿ ಕನ್ನಡಕ್ಕೆ ಬಂದರು. ಅರ್ಜುನ್ ಸರ್ಜಾ- ಶ್ರುತಿ ಈ ಚಿತ್ರದಲ್ಲಿ ನಟಿಸಿದ್ದರು. ಮುಂದೆ 'ಸ್ವಾತಿ', 'ಭೈರವ', 'ಕರ್ನಾಟಕ ಸುಪುತ್ರ', 'ಅಪ್ಪಾಜಿ', 'ದೀಪಾವಳಿ', 'ಸುಂದರಕಾಂಡ', 'ಅಮ್ಮ', 'ಜಮೀನ್ದಾರು' ಸೇರಿದಂತೆ ಹಲವು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇನ್ನು 'ವಿಕ್ರಮಾರ್ಕುಡು', 'ಮರ್ಯಾದ ರಾಮನ್ನ' ಸಿನಿಮಾಗಳು ರೀಮೆಕ್ ಆಗಿ ಕೀರವಾಣಿ ಟ್ಯೂನ್‌ಗಳನ್ನೇ ಕನ್ನಡದಲ್ಲೂ ಬಳಸಿಕೊಳ್ಳಲಾಗಿತ್ತು.

Oscar winner mm keeravani: best Kannada tracks of the musician

ಸಂಗೀತ ನಿರ್ದೇಶನದ ಜೊತೆಗೆ ಗಾಯಕರಾಗಿ, ಗೀತ ಸಾಹಿತಿಯಾಗಿಯೂ ಕೀರವಾಣಿ ಗುರ್ತಿಸಿಕೊಂಡಿದ್ದಾರೆ. ಹಂಸಲೇಖ ಸಂಗೀತದ 'ಕಲ್ಲರಳಿ ಹೂವಾಗಿ' ಚಿತ್ರದಲ್ಲಿ 'ದಯವಿಲ್ಲದ ಧರ್ಮ ಆವುದಯ್ಯ' ಹಾಡನ್ನು ಕೀರವಾಣಿ ಹಾಡಿದ್ದರು. 'ಅಪ್ಪಾಜಿ' ಚಿತ್ರದ ಏನೇ ಕನ್ನಡತಿ ಹಾಡು ಇವತ್ತಿಗೂ ಕನ್ನಡ ಸಿನಿರಸಿಕರು ನೆಚ್ಚಿನ ಗೀತೆಯಾಗಿದೆ.

More from Filmibeat

English summary
Oscar winner mm keeravani: best Kannada tracks of the musician. He also Sung Dayavillada Dharmavu song in Kallarali Hoovagi movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X