For Quick Alerts
  ALLOW NOTIFICATIONS  
  For Daily Alerts

  ರಾತ್ರೋರಾತ್ರಿ ಸ್ಟಾರ್ ಆಗಿ ಸಂಚಲನ ಸೃಷ್ಟಿ ಮಾಡಿದ್ದ ರಾನು ಮೊಂಡಲ್ ಸ್ಥಿತಿ ಈಗ ಏನಾಗಿದೆ?

  |

  ರೈಲ್ವೇ ಸ್ಟೇಷನ್ ನಲ್ಲಿ ಲತಾ ಮಂಗೇಶ್ಕರ್ ಅವರ ಹಾಡು ಹಾಡುತ್ತಿದ್ದ ರಾನು ಮೊಂಡಲ್ ರಾತ್ರೋರಾತ್ರಿ ಸ್ಟಾರ್ ಆಗಿ ಸಂಚಲನ ಸೃಷ್ಟಿ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಕಳೆದ ವರ್ಷ ಕೆಲವು ತಿಂಗಳು ಸಾಮಾಜಿಕ ಜಾಲತಾಣದಲ್ಲಿ ರಾನು ಮೊಂಡಲ್ ಅವರದ್ದೆ ಸದ್ದು-ಸುದ್ದಿ.

  ಹಿಮೇಶ್ ರೇಶಮಿಯಾ ಅವರ 'ಹ್ಯಾಪಿ ಹಾರ್ಡಿ ಮತ್ತು ಹೀರ್' ಚಿತ್ರಕ್ಕಾಗಿ ರಾನು ಮೊಂಡಲ್ ತೇರಿ ಮೇರಿ ಕಹಾನಿ...ಹಾಡು ಹಾಡಿದ್ದರು. ಈ ಹಾಡಿನ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು, ಬಳಿಕ ರಾನು ಮೊಂಡಲ್ ಸಿಕ್ಕಾಪಟ್ಟೆ ಫೇಮಸ್ ಆದರು. ರೈಲ್ವೇ ಸ್ಟೇಷನ್ ನಿಂದ ರಾನು ದೊಡ್ಡ ಮನೆಗೆ ಶಿಫ್ಟ್ ಆದರು. ಒಮ್ಮೆಗೆ ಖ್ಯಾತಿಗಳಿಸಿ ಮೆರೆದ ಗಾಯಕಿ ರಾನು ಮತ್ತೆ ಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿದ್ದಾರಂತೆ. ಮುಂದೆ ಓದಿ..

  ರೈಲ್ವೆ ನಿಲ್ದಾಣದಿಂದ ಬಾಲಿವುಡ್ ಪ್ರವೇಶ ಮಾಡಿದ ಬಡ ಗಾಯಕಿ

  ಬಾಲಿವುಡ್ ಸಿನಿಮಾದಲ್ಲಿ ಹಾಡಿದ್ದ ರಾನು ಮೊಂಡಲ್

  ಬಾಲಿವುಡ್ ಸಿನಿಮಾದಲ್ಲಿ ಹಾಡಿದ್ದ ರಾನು ಮೊಂಡಲ್

  ಒಂದು ಹಾಡು ರಾನು ಮೊಂಡಲ್ ಜೀವನವನ್ನೆ ಬದಲಾಯಿಸಿ ಬಿಟ್ಟಿತ್ತು. ಬಾಲಿವುಡ್ ಸಿನಿಮಾಗೆ ರಾನು ಹಾಡುವುದನ್ನು ನೋಡಿ ಇಡೀ ದೇಶವೇ ನಿಬ್ಬೆರಗಾಗಿತ್ತು. ಬಾಲಿವುಡ್ ಸಿನಿಮಾಗೆ ರಾನು ಹಾಡಿದ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಳಿಕ ರಾನುಗೆ ಬೇಡಿಕೆ ಹೆಚ್ಚಾಯಿತು. ಸಂಗೀತ ಕಾರ್ಯಕ್ರಮ, ಬಾಲಿವುಡ್ ನ ದೊಡ್ಡ ದೊಡ್ಡ ಈವೆಂಟ್, ರ್ಯಾಂಪ್ ವಾಕ್ ಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದರು.

  ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು

  ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು

  ಖ್ಯಾತಿ ಗಳಿಸುತ್ತಿದ್ದಂತೆ ರಾನು ಸಂಗೀತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು, ಹಲವು ರಾಜ್ಯಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಳಿಕ ರಾನು ಮೊಂಡಲ್ ಸಿಕ್ಕಾಪಟ್ಟೆ ಹಣ ಮಾಡಿದ್ದಾರೆ, ಅವರಿಗೆ ಬಂಗಲೆಯನ್ನು ಗಿಫ್ಟ್ ಆಗಿ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಲು ಪ್ರಾರಂಭವಾಗಿತ್ತು. ಆದರೀಗ ರಾನು ಬದುಕು ಮತ್ತೆ ಕತ್ತಲಲ್ಲಿ ಮುಳಗಿದೆ ಎನ್ನುವ ಶಾಕಿಂಗ್ ಸುದ್ದಿ ಕೇಳಿ ಬರುತ್ತಿದೆ.

  ರಾನು ಮೊಂಡಲ್ಗೆ ಹಿಮೇಶ್ ಕಡೆಯಿಂದ ಮತ್ತೊಂದು ಮೆಗಾ ಆಫರ್

  ಆರ್ಥಿಕ ಕಷ್ಟದಲ್ಲಿ ರಾನು

  ಆರ್ಥಿಕ ಕಷ್ಟದಲ್ಲಿ ರಾನು

  ರಾನು ಮೊದಲು ಎಲ್ಲಿದ್ದರೊ ಈಗ ಅಲ್ಲಿಗೆ ಹೋಗಿ ತಲುಪಿದ್ದಾರೆ ಎನ್ನಲಾಗುತ್ತಿದೆ. ಕೊರೊನಾ ಲಾಕ್ ಡೌನ್ ಬಳಿಕ ರಾನು ಮೊಂಡಲ್ ಆರ್ಥಿಕವಾಗಿ ಪರದಾಡುತ್ತಿದ್ದಾರಂತೆ. ಅವಕಾಶಗಳಿಲ್ಲದೆ ಮನೆಯಲ್ಲೇ ಇರಬೇಕಾಗಿದೆ. ರಾನು ಮೊಂಡಲ್ ಜನಪ್ರಿಯತೆಯೂ ಕಡಿಮೆಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಕೆಲವರು ಮೂಲಭೂತ ಅವಶ್ಯಕ ವಸ್ತುಗಳನ್ನು ನೀಡಿದ್ದಾರೆ. ಸಹಾಯದ ಅವಶ್ಯಕತೆ ಇದೆಯಂತೆ. ಒಮ್ಮೆಗೆ ದೇಶವ್ಯಾಪಿ ಸದ್ದು ಮಾಡಿದ ರಾನು ಅವರನ್ನು ಈಗ ಯಾರು ಕೇಳೋರೆ ಇಲ್ಲವಾಗಿದೆ.

  ರಾನು ಮೊಂಡಲ್ ವಿವಾದಗಳು

  ರಾನು ಮೊಂಡಲ್ ವಿವಾದಗಳು

  ಸ್ಟಾರ್ ಆದ ಬಳಿಕ ರಾನು ಮೊಂಡಲ್ ವರ್ತನೆಯೇ ಬದಲಾಗಿದೆ ಎಂದು ಅನೇಕರು ದೂರಿದ್ದರು. ಖ್ಯಾತಿ ಜೊತೆಗೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಸೆಲ್ಫಿ ಕೇಳಲು ಬಂದ ಅಭಿಮಾನಿ ಜೊತೆ ರಾನು ನಡೆದುಕೊಂಡ ರೀತಿಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ರ್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ರಾನು ಮೊಂಡಲ್ ಅತಿಯಾದ ಮೇಕಪ್ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಇದೆಲ್ಲವನ್ನು ಎದುರಿಸಿ ಕಾರ್ಯಕ್ರಮಗಳಲ್ಲಿ ಹಾಡಲು ಅವಕಾಶ ಪಡೆಯುತ್ತಿದ್ದರು. ಆದರೀಗ ತೀರ ಕಷ್ಟದಲ್ಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ರಾನು ಸ್ಥಿತಿಯನ್ನು ನೋಡಿ ಬಾಲಿವುಡ್ ನಲ್ಲಿ ಅಥವಾ ಕಾರ್ಯಕ್ರಮಗಳಲ್ಲಿ ಮತ್ತೆ ಹಾಡಲು ಅವಕಾಶ ಕೊಡುತ್ತಾರಾ, ರಾನು ಮತ್ತೆ ಸ್ಟಾರ್ ಆಗಿ ಮೆರೆಯುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

  English summary
  Overnight star Ranu Mondal facing financial problems after corona lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X