ಅದ್ದೂರಿ 'ಪೈಲ್ವಾನ್' : ಮೂರು ಸಿಂಗರ್ಸ್.. ನೂರಾರೂ ಡ್ಯಾನ್ಸರ್ಸ್
'ಪೈಲ್ವಾನ್' ಸಿನಿಮಾದ ಮೂರನೇ ಹಾಡು ಇಂದು (ಜುಲೈ 30) ಬಿಡುಗಡೆಯಾಗಿದೆ. ಹಾಡಿನ ಅದ್ದೂರಿ ತನಕ್ಕೆ ಅಭಿಮಾನಿಗಳು ಮನ ಸೋತ್ತಿದ್ದಾರೆ. ನೂರಾರೂ ಡ್ಯಾನ್ಸರ್ಸ್ ಗಳ ನಡುವೆ 'ಪೈಲ್ವಾನ್' ಮಿಂಚಿದ್ದಾನೆ.
'ಬರೋ ಪೈಲ್ವಾನ...' ಈ ಹಾಡನ್ನು ಮೂರು ಗಾಯಕರು ಹಾಡಿದ್ದಾರೆ. ವಿಜಯ ಪ್ರಕಾಶ್, ಕೈಲಾಶ್ ಖೇರ್ ಮತ್ತು ಚಂದನ್ ಶೆಟ್ಟಿ ಧ್ವನಿ ಹಾಡಿನಲ್ಲಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.
ಮೇಕಿಂಗ್ ವಿಡಿಯೋ ಜೊತೆಗೆ ಹಾಡು ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಹಾಡಿನಲ್ಲಿ ಹಾಕಿರುವ ಸೆಟ್, ಡ್ಯಾನರ್ಸ್, ಕಾಸ್ಟೂಮ್ ಎಲ್ಲವೂ ಪೈಲ್ವಾನನ ಶ್ರೀಮಂತಿಕೆಯನ್ನು ತೋರಿಸುತ್ತಿದೆ.

ಬಾಲಿವುಡ್ ನ ಗಣೇಶ್ ಆಚಾರ್ಯ ಹಾಗೂ ರಾಜು ಸುಂದರಾಮ್ ಹಾಡಿನ ನೃತ್ಯ ನಿರ್ದೇಶನ ಮಾಡಿದ್ದಾರೆ. ಕರುಣಾಕರ್ ಎ ಕ್ಯಾಮರಾ ವರ್ಕ್ ಬೊಂಬಾಟ್ ಆಗಿದೆ. ಹಾಡಿನಲ್ಲಿ ಸುದೀಪ್ ಹಾಗೂ ಸುನೀಲ್ ಶೆಟ್ಟಿ ಕಾಂಬಿನೇಶನ್ ನೋಡಬಹುದಾಗಿದೆ.
ಕೃಷ್ಣ ಈ ಸಿನಿಮಾದ ನಿರ್ದೇಶನ ಮಾಡಿದ್ದು, ಅವರ ಪತ್ನಿ ಸ್ವಪ್ನ ಕೃಷ್ಣ ನಿರ್ಮಾಣ ಮಾಡಿದ್ದಾರೆ. ಆಕಾಂಕ್ಷ ಸಿಂಗ್ ಸಿನಿಮಾ ನಾಯಕಿ. 'ಪೈಲ್ವಾನ್' ಸಿನಿಮಾ ಸಪ್ಟೆಂಬರ್ 12 ರಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.


Click it and Unblock the Notifications











