ಜೋಶ್ ಆಪ್‌ನ ಅತಿ ದೊಡ್ಡ ಚಾಲೆಂಜ್‌ನಲ್ಲಿ ಭಾಗವಹಿಸಿ: ರೀಲ್ಸ್ ಮಾಡಿ, ಭಾರಿ ಅವಕಾಶ ಗೆಲ್ಲಿ!

By ಫಿಲ್ಮಿಬೀಟ್ ಡೆಸ್ಕ್

'ಜೋಶ್' ಡೈಲಿಹಂಟ್‌ನ ಅತಿ ಜನಪ್ರಿಯ ಕಿರು ವಿಡಿಯೋ ಫ್ಲಾಟ್‌ಫಾರ್ಮ್. ಜೋಶ್ ತನ್ನ ವೈವಿಧ್ಯಮಯ ವಿಡಿಯೋಗಳಿಂದ, ಹೊಸ ಮಾದರಿಯ ಕಂಟೆಂಟ್‌ನಿಂದ ವಿವಿಧ ಭಾಷೆಗಳ ಜೋಶ್ ಬಳಕೆದಾರರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಸಂಪಾದಿಸಿದೆ. ದೇಸಿ ಉತ್ಪನ್ನವಾದ 'ಜೋಶ್‌'ನಲ್ಲಿ ಸ್ಟಾರ್‌ಡಮ್, ಜನಪ್ರಿಯತೆ ಎನ್ನುವುದು ಚಿಟಿಕೆ ಹೊಡೆದಷ್ಟು ಸುಲಭ.

ಪ್ರತಿಭಾವಂತರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಜೋಶ್ ಅಪ್ಲಿಕೇಶನ್ ಅವಕಾಶವನ್ನು, ವೇದಿಕೆಯನ್ನು ಒದಗಿಸುತ್ತಿದೆ. ಆ ಮೂಲಕ ಅವರ ಕನಸು ನನಸಾಗುವಂತೆ ಮಾಡುತ್ತಿದೆ. ತನ್ನ ಜನಸ್ನೇಹಿ, ಬಳಕೆದಾರ ಸ್ನೇಹಿ ನೀತಿಯಿಂದ ಜೋಶ್ ವೇಗವಾಗಿ ಬೆಳೆಯುತ್ತಿದೆ. ಇದು ಮಾತ್ರವೇ ಅಲ್ಲದೆ, ಜೋಶ್, ಅತ್ಯದ್ಭುತ ಮೀಟಪ್‌ಗಳನ್ನು ಆಯೋಜಿಸುವುದರಲ್ಲೂ ಬಹಳ ಖ್ಯಾತಿ ಗಳಿಸಿದೆ. ಮೀಟಪ್‌ಗಳ ಮೂಲಕ ತನ್ನ ಬಳಕೆದಾರರಿಗೆ ಭಿನ್ನ ಅನುಭೂತಿಯನ್ನು, ಮನೊರಂಜನೆಯನ್ನು ಹಾಗೂ ಸಾವಿರಾರು ನೆನಪುಗಳನ್ನು ಸಿಹಿಯಾದ ನೆನಪುಗಳನ್ನು ನೀಡುತ್ತಿದೆ.

ಇತರೆ ಕಿರು ವಿಡಿಯೋಗಳಿಗಿಂತ 'ಜೋಶ್' ಅಪ್ಲಿಕೇಶನ್ ಭಿನ್ನವಾಗಿರುವುದಕ್ಕೆ ಮುಖ್ಯ ಕಾರಣವೆಂದರೆ 'ಜೋಶ್‌'ನ ಭಿನ್ನ, ಮಜವಾದ ಆನ್‌ಲೈನ್ ಚಾಲೆಂಜ್‌ಗಳು. ಸಾಮಾಜಿಕ ಜಾಲತಾಣದಲ್ಲಿ ಈಗ ಬಹುತೇಕ ಫಿಲ್ಟರ್‌ಗಳದ್ದೇ ಜಮಾನ? ಫಿಲ್ಟರ್‌ಗಳು, ವಿವಿಧ ಎಫೆಕ್ಟ್ಸ್‌ಗಳನ್ನು ಬಳಸಿಕೊಂಡು ವಿಡಿಯೋಗಳನ್ನು ಮಾಡಲಾಗುತ್ತದೆ. ಫಿಲ್ಟರ್‌-ಎಫೆಕ್ಟ್‌ಗಳ ನಡುವೆ ನೈಜತೆ ಕಣ್ಣಿಗೆ ಕಾಣುತ್ತಿಲ್ಲ. ಹಾಗಾಗಿ 'ಜೋಶ್' ಹೊಸದೊಂದು ಚಾಲೆಂಜ್ ಅಥವಾ ಅಭಿಯಾನವನ್ನು ಹೊತ್ತು ತಂದಿದೆ.

Participate In Joshs Biggest Challenge Real Hai Stand A Chance To Go To IIFA-2022

'ಜೋಶ್' ಅಪ್ಲಿಕೇಶನ್‌ನಲ್ಲಿ 'ರಿಯಲ್ ಹೈ' #realhai ಹ್ಯಾಷ್‌ಟ್ಯಾಗ್ ಅಡಿಯಲ್ಲಿ ವಿಡಿಯೋ ಮಾಡಿ ಹಾಕಬೇಕು. ಯಾವುದೇ ಫಿಲ್ಟರ್, ಎಫೆಕ್ಟ್ಸ್‌ ಬಳಸದೆ, ನೀವು ಹೇಗಿದ್ದೀರೊ ಹಾಗೆಯೇ, ನಿಮ್ಮ ತನ, ನಿಮ್ಮ ದೇಸಿ ತನ ಕಾಣುವಂತೆ ಆ ವಿಡಿಯೋಗಳು ಇರಬೇಕು. ಇದು ನಿಮ್ಮತನವನ್ನು ಹೊರಗೆ ತರುವ ಸಮಯ, ನಿಮ್ಮ ದೇಸಿತನವನ್ನು ಜಗತ್ತಿಗೆ ತೋರಿಸುವ ಸಮಯ.

ಈ 'ರಿಯಲ್ ಹೈ' ಚಾಲೆಂಜ್ ಅನ್ನು ಇನ್ನಷ್ಟು ಉತ್ಸಾಹದಾಯಕ ಹಾಗೂ ಕುತೂಹಲಕಾರಿಗೊಳಿಸಲು ಬಾಲಿವುಡ್‌ ಸ್ಟಾರ್ ಸಿದ್ಧಾರ್ಥ್ ಮಲ್ಹೋತ್ರಾ ಹಾಗೂ ನಟಿ ಹನ್ಸಿಕಾ ಮೊಟ್ವಾನಿ ಅವರುಗಳು 'ಜೋಶ್' ಜೊತೆ ಕೈಜೋಡಿಸಿದ್ದು, 'ಜೋಶ್‌'ನ ವಿಡಿಯೋ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸಿದ್ಧಾರ್ಥ್-ಹನ್ಸಿಕಾ ಹೆಜ್ಜೆ ಹಾಕಿರುವ ಹಾಡನ್ನು ಕಂಪೋಸ್ ಮಾಡಿರುವುದು ಸಾಜಿದ್.

Participate In Joshs Biggest Challenge Real Hai Stand A Chance To Go To IIFA-2022

#realhai ಚಾಲೆಂಜ್ ಎಲ್ಲ ರೀತಿಯ ವಿಡಿಯೋ ಮೇಕರ್‌ಗಳನ್ನು ಉತ್ಸುಕಗೊಳಿಸುತ್ತಿದೆ. ಡ್ಯಾನ್ಸ್, ಆಹಾರ, ಫಿಟ್‌ನೆಸ್, ಫ್ಯಾಷನ್, ಹಾಸ್ಯ, ಮನೊರಂಜನೆ ಯಾವುದೇ ರೀತಿಯ ವಿಡಿಯೋವನ್ನು #realhai ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಹಾಕಬಹುದಾಗಿದೆ. ಚಾಲೆಂಜ್‌ ಈಗಾಗಲೇ ಆರಂಭವಾಗಿದ್ದು, ಕಂಟೆಂಟ್ ಕ್ರಿಯೇಟರ್‌ಗಳು ಈಗಾಗಲೇ ವಿಡಿಯೋಗಳನ್ನು ಜೋಶ್‌ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡುತ್ತಿದ್ದಾರೆ.

Participate In Joshs Biggest Challenge Real Hai Stand A Chance To Go To IIFA-2022

'ಜೋಶ್' ಪರಿಚಯಿಸಿರುವ ಈ ಚಾಲೆಂಜ್‌ನಿಂದ ಕಂಟೆಂಟ್ ಕ್ರಿಯೇಟರ್‌ಗಳ ಜೋಶ್ ಹೆಚ್ಚಾಗಿದೆ. ಇದಕ್ಕೆ ಕಾರಣ ವಿಜೇತರಿಗೆ ನೀಡಲಾಗುವ ಬಹುಮಾನಗಳು. ಅತ್ಯುತ್ತಮ ವಿಡಿಯೋ ಮಾಡಿ ಅಪ್‌ಲೋಡ್ ಮಾಡಿದವರು ಅಬು ದಾಬಿಯಲ್ಲಿ ನಡೆಯುವ ಪ್ರತಿಷ್ಟಿತ ಐಫಾ 2022 ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸುವ ಅವಕಾಶವನ್ನು ಸಹ ಪಡೆಯಲಿದ್ದಾರೆ.

Participate In Joshs Biggest Challenge Real Hai Stand A Chance To Go To IIFA-2022

ಐಫಾನಲ್ಲಿ ಬಾಲಿವುಡ್‌ ಮಾತ್ರವೇ ಅಲ್ಲದೆ ವಿವಿಧ ಚಿತ್ರರಂಗದ ತಾರೆಯರು ಆಗಮಿಸಿರುತ್ತಾರೆ. ಐಫಾ ಭಾರತ ಚಿತ್ರರಂಗದ ಪ್ರಶಸ್ತಿ ವಿತರಣಾ ಸಮಾರಂಭ. ಕೇವಲ ತಾರೆಯರೇ ತುಂಬಿರುವ ಆ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವುದನ್ನು ಅವರೊಟ್ಟಿಗೆ ಕೂತು ಕಾರ್ಯಕ್ರಮ ವೀಕ್ಷಿಸುವುದನ್ನೊಮ್ಮೆ ಊಹಿಸಿಕೊಳ್ಳಿ. ಕನಸಿನಂತೆ ಭಾಸವಾಗುತ್ತದೆ ಅಲ್ಲವೆ? ಆದರೆ ಇದು ಕನಸು ಮಾತ್ರವೇ ಅಲ್ಲ, ಇದು ನನಸಾಗಲಿದೆ 'ಜೋಶ್‌' ಅಪ್ಲಿಕೇಶನ್‌ನಿಂದಾಗಿ.

#realhai ಚಾಲೆಂಜ್‌ನಲ್ಲಿ ಭಾಗವಹಿಸಿ ಸ್ಟಾರ್‌ಗಳೇ ತುಂಬಿರುವ ಐಫಾ ಅವಾರ್ಡ್ ಫಂಕ್ಷನ್‌ನಲ್ಲಿ ಭಾಗವಹಿಸುವ ಅವಕಾಶ ನಿಮ್ಮದಾಗಿಸಿಕೊಳ್ಳಿ. ನೀವು ಮಾಡಬೇಕಾಗಿರುವುದು ಇಷ್ಟೆ. 'ಜೋಶ್' ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಸಾಧ್ಯವಾದಷ್ಟು ವಿಡಿಯೋ ಮಾಡಿ #realhai ಹ್ಯಾಷ್‌ಟ್ಯಾಗ್ ಬಳಸಿ ಅಪ್‌ಲೋಡ್ ಮಾಡಿ.

https://share.myjosh.in/video/124e8eb7-c983-4ac8-aa9d-8d0326fbeae2

https://share.myjosh.in/video/df356caa-3c93-48fc-99bf-06d419174be1?u=0x12ca91d8b5e71da9

https://share.myjosh.in/video/a3cf706d-0130-43dc-b0c7-e29f434aba0a?u=0x12ca91d8b5e71da9

https://share.myjosh.in/video/03dff2a0-0470-4c08-b2bd-1eea0cbe4f36?u=0x12ca91d8b5e71da9

ಅಬು ದಬಿಯಲ್ಲಿ ನಡೆವ ಐಫಾಗೆ ಗೋಲ್ಡನ್ ಟಿಕೆಟ್ ನೀಡುವುದು ಪಾತ್ರವೇ ಅಲ್ಲದೆ, ಇನ್ನೂ ಹಲವು ಬಹುಮಾನಗಳು ನಿಮಗಾಗಿ ಕಾಯುತ್ತಿವೆ. ನಿಮ್ಮೆ ಮೆಚ್ಚಿನ ಐಪಿಎಲ್ ತಂಡದ ಆಟವನ್ನು ಲೈವ್‌ ಆಗಿ ನೋಡುವ ಅವಕಾಶವನ್ನೂ ನೀವು ಪಡೆಯಬಹುದಾಗಿದೆ. ಹಾಗಾಗಿ ಹಿಂಜರಿಯಬೇಡಿ, 'ಹೇಗಾದರೂ ಇರಿ 'ರಿಯಲ್ ಆಗಿರಿ' #realhai.

More from Filmibeat

English summary
Participate in Josh's biggest challenge real hai stand a chance to go to IIFA-2022.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X