twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್ 2' ಮುಂದೆ ಮಂಕಾದ ಪವನ್ ಸಿನಿಮಾ: ಆಡಿಯೋ ಹಕ್ಕು ಮಾರಾಟವಾಗಿದ್ದು ಎಷ್ಟಕ್ಕೆ?

    By ಫಿಲ್ಮಿಬೀಟ್ ಡೆಸ್ಕ್
    |

    ಪವನ್ ಕಲ್ಯಾಣ್ ಸಿನಿಮಾಗಳು ಪಕ್ಕಾ ಲಾಭ ಬಂದೇ ತೀರುತ್ತವೆಂಬ ನಂಬಿಕೆ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಹಾಕಿರುವ ಬಂಡವಾಳ ವಾಪಸ್ಸಾಗಿಬಿಡುತ್ತದೆ. ಕೆಲವು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿದ್ದ 'ವಕೀಲ್ ಸಾಬ್' ಸಿನಿಮಾ ಇದಕ್ಕೆ ಒಳ್ಳೆಯ ಉದಾಹರಣೆ.

    ಇದೀಗ ಪವನ್ ಕಲ್ಯಾಣ್ ಹೊಸ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಹೆಸರು 'ಭೀಮ್ಲ ನಾಯಕ್' ಸಿನಿಮಾವು ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್. ಈ ಸಿನಿಮಾದ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದ್ದು ಸಿನಿಮಾದ ಪ್ರೀ ರಿಲೀಸ್ ಬ್ಯುಸಿನೆಸ್ ಆರಂಭವಾಗಿದೆ.

    ಪವನ್ ಕಲ್ಯಾಣ್ ಸಿನಿಮಾಕ್ಕೆ ದೊಡ್ಡ ಮಾರುಕಟ್ಟೆ ಇದೆ. ಸಿನಿಮಾದ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆಯೂ ಎಲ್ಲರಿಗೂ ಇದ್ದದ್ದೆ. ಆದರೆ ಪವನ್ ನಟಿಸುತ್ತಿರುವ ಹೊಸ ಸಿನಿಮಾ ಭೀಮ್ಲ ನಾಯಕ'ದ ಆಡಿಯೋ ಹಕ್ಕುಗಳು ಬಹಳ ದೊಡ್ಡ ಮೊತ್ತಕ್ಕೇನೂ ಮಾರಾಟವಾಗಿಲ್ಲ. ಅದರಲ್ಲಿಯೂ ಕನ್ನಡದ 'ಕೆಜಿಎಫ್ 2'ಗೆ ಹೋಲಿಸಿದರೆ 'ಭೀಮ್ಲ ನಾಯಕ್' ಸಿನಿಮಾದ ಆಡಿಯೋ ಹಕ್ಕುಗಳು ಕಡಿಮೆ ಮೊತ್ತಕ್ಕೆ ಮಾರಾಟವಾಗಿದೆ ಎಂದೇ ಹೇಳಬೇಕಾಗುತ್ತದೆ.

    'ಕೆಜಿಎಫ್ 2'ಗೆ ಕೊಟ್ಟಿರುವುದೆಷ್ಟು?

    'ಕೆಜಿಎಫ್ 2'ಗೆ ಕೊಟ್ಟಿರುವುದೆಷ್ಟು?

    'ಕೆಜಿಎಫ್ 2' ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ಖರೀದಿಸಿದೆ. ಸಿನಿಮಾದ ಐದೂ ಭಾಷೆಯ ಆಡಿಯೋ ಹಕ್ಕುಗಳು ಲಹರಿ ಸಂಸ್ಥೆ ಬಳಿಯೇ ಇದ್ದು, ಆಡಿಯೋ ಹಕ್ಕಿದೆ ಬರೋಬ್ಬರಿ 7.20 ಕೋಟಿ ರುಪಾಯಿ ಮೊತ್ತವನ್ನು ಲಹರಿ ಆಡಿಯೋ ನೀಡಿದೆ. 'ಬಾಹುಬಲಿ'ಯ ಎರಡೂ ಭಾಗಗಳ ಆಡಿಯೋ ಹಕ್ಕಿಗೂ ಇಷ್ಟು ದೊಡ್ಡ ಮೊತ್ತವನ್ನು ಲಹರಿ ನೀಡಿರಲಿಲ್ಲ.

    'ಭೀಮ್ಲ ನಾಯಕ್' ಆಡಿಯೋ ಹಕ್ಕು ಎಷ್ಟಕ್ಕೆ ಮಾರಾಟ?

    'ಭೀಮ್ಲ ನಾಯಕ್' ಆಡಿಯೋ ಹಕ್ಕು ಎಷ್ಟಕ್ಕೆ ಮಾರಾಟ?

    ಇದೀಗ ಪವನ್ ಕಲ್ಯಾಣ್ ನಟನೆಯ 'ಭೀಮ್ಲ ನಾಯಕ್' ಸಿನಿಮಾದ ಆಡಿಯೋ ಹಕ್ಕನ್ನು 5.20 ಕೋಟಿಗೆ ಖರೀದಿಸಲಾಗಿದೆ. ಇದು ತೆಲುಗಿನ ಇತ್ತೀಚಿನ ಸಿನಿಮಾಗಳ ಮಟ್ಟಿಗೆ ದಾಖಲೆಯೇ ಆದರೆ 'ಕೆಜಿಎಫ್ 2' ಸಿನಿಮಾಕ್ಕೆ ಹೋಲಿಸಿದರೆ ಇದು ಕಡಿಮೆ ಮೊತ್ತ. ಪವನ್ ಕಲ್ಯಾಣ್ ಸಿನಿಮಾಗಳಲ್ಲಿ ಹಾಡುಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆಯಾದರೂ 'ಭೀಮ್ಲ ನಾಯಕ್' ತುಸು ಭಿನ್ನವಾದ ಕತೆ ಹೊಂದಿರುವ ಕಾರಣ ಆಡಿಯೋ ಹಕ್ಕುಗಳು ಬಹಳ ದೊಡ್ಡ ಮೊತ್ತಕ್ಕೆ ಸೇಲ್ ಆಗಿಲ್ಲ.

    'ಆಚಾರ್ಯ', 'ಸರ್ಕಾರು ವಾರಿ ಪಾಠ'ಗಿಂಗಲೂ ಹೆಚ್ಚು ಹಣ

    'ಆಚಾರ್ಯ', 'ಸರ್ಕಾರು ವಾರಿ ಪಾಠ'ಗಿಂಗಲೂ ಹೆಚ್ಚು ಹಣ

    'ಕೆಜಿಎಫ್ 2' ಸಿನಿಮಾದ ಪ್ರೀ ಬ್ಯುಸಿನೆಸ್‌ಗೆ ಹೋಲಿಸಿದರೆ 'ಭೀಮ್ಲ ನಾಯಕ್' ದೊಡ್ಡ ಮಟ್ಟದ ಬ್ಯುಸಿನೆಸ್ ಮಾಡಿಲ್ಲವಾದರೂ. ತೆಲುಗಿನ ಪ್ರಸ್ತುತ ಇತರೆ ಸ್ಟಾರ್ ನಟರ ಸಿನಿಮಾಗಳಿಗೆ ಹೋಲಿಸಿದರೆ 'ಭೀಮ್ಲ ನಾಯಕ್' ಆಡಿಯೋಕ್ಕೆ ದೊಡ್ಡ ಮೊತ್ತವೇ ದೊರೆತಿದೆ. ಪವನ್ ಸಹೋದರ ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಆಚಾರ್ಯ' ಸಿನಿಮಾದ ಆಡಿಯೋ ಹಕ್ಕಿಗೆ 4 ಕೋಟಿ, ಮತ್ತು ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಠ' ಸಿನಿಮಾದ ಆಡಿಯೋ ಹಕ್ಕಿದೆ 4.50 ಕೋಟಿ ಹಣ ನೀಡಲಾಗಿದೆ.

    'ಭೀಮ್ಲ ನಾಯಕ್' ಬಿಡುಗಡೆ ಯಾವಾಗ?

    'ಭೀಮ್ಲ ನಾಯಕ್' ಬಿಡುಗಡೆ ಯಾವಾಗ?

    'ಭೀಮ್ಲ ನಾಯಕ್' ಸಿನಿಮಾವು ಮಲಯಾಳಂನ ಸೂಪರ್ ಹಿಟ್ ಸಿನಿಮಾ 'ಅಯ್ಯಪ್ಪನುಂ ಕೋಶಿಯುಂ' ರೀಮೇಕ್ ಆಗಿದೆ. ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆ 'ಬಾಹುಬಲಿ'ಯ ಬಲ್ಲಾಳ ದೇವ ರಾಣಾ ದಗ್ಗುಬಾಟಿ ಸಹ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಚಿತ್ರಕತೆ ಮತ್ತು ಸಂಭಾಷಣೆ ಒದಗಿಸಿದ್ದಾರೆ. ಸಿನಿಮಾವನ್ನು ಸಾಗರ್ ಕೆ ಚಂದ್ರ ಎಂಬ ಹೊಸಬರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸೂರ್ಯ ದೇವರ ನಾಗವಂಶಿ ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ನಿತ್ಯಾ ಮೆನನ್ ಹಾಗೂ ಐಶ್ವರ್ಯಾ ರಾಜೇಶ್ ನಾಯಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಟೀಸರ್ ಹಾಗೂ ಕೆಲವು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಗಿದ್ದು ಅವು ವೈರಲ್ ಆಗಿವೆ. ಸಿನಿಮಾವು ಜನವರಿ 12 ಕ್ಕೆ ಬಿಡುಗಡೆ ಆಗುವ ಸಾಧ್ಯತೆ ಇದೆ.

    English summary
    Pawan Kalyan's new movie Bheemla Nayak's audio rights sold for whooping amount. But fails to beat 'KGF 2' movie audio rights record.
    Tuesday, August 31, 2021, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X