»   » ಲುಂಗಿ ಹಂಚಿ ಚೆನ್ನೈ ಎಕ್ಸ್ ಪ್ರೆಸ್ ಹಾಡು ಬಿಟ್ಟರು

ಲುಂಗಿ ಹಂಚಿ ಚೆನ್ನೈ ಎಕ್ಸ್ ಪ್ರೆಸ್ ಹಾಡು ಬಿಟ್ಟರು

Posted By:
Subscribe to Filmibeat Kannada

ನಿರ್ದೇಶಕ ರೋಹಿತ್ ಶೆಟ್ಟಿ ವಿಭಿನ್ನ ಪ್ರಚಾರ ತಂತ್ರಕ್ಕೆ ಕಿಂಗ್ ಖಾನ್ ಶಾರುಖ್ ಫಿದಾ ಆಗಿಬಿಟ್ಟಿದ್ದಾರೆ. ಎಂದಿನ ಲವಲವಿಕೆಯಿಮ್ದ ನಾಯಕಿ ದೀಪಿಕಾ ಪಡುಕೋಣೆ ಜೊತೆ ಹೆಜ್ಜೆ ಹಾಕಿದ್ದಲ್ಲದೆ, ನೆರೆದಿದ್ದ ಅಭಿಮಾನಿಗಳಿಗೆ ಲುಂಗಿ, ವಿಶಲ್ ಹಂಚಿ ಸಂಭ್ರಮಿಸಿದರು.

ದಕ್ಷಿಣ ಭಾರತದ ಹಿಟ್ ಚಿತ್ರಗಳನ್ನು, ಸಕ್ಸಸ್ ಫಾರ್ಮುಲಾಗಳನ್ನು ಹೆಕ್ಕಿ ತೆಗೆದು ಬಾಲಿವುಡ್ ಮಂದಿಗೆ ಅರ್ಥವಾಗುವಂತೆ ನೀಡುವಲ್ಲಿ ಪಳಗಿರುವ ರೋಹಿತ್ ಅವರ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ ಆಡಿಯೋ ರಿಲೀಸ್ ಭರ್ಜರಿಯಾಗಿ ಆಗಿದೆ.

ಚಿತ್ರದ ಪ್ರಚಾರಕ್ಕಾಗಿ ಚಹಾ ಹಾಗೂ ಆಟೋಮೊಬೈಲ್ ಬ್ರ್ಯಾಂಡ್ ಗಳ ಜೊತೆ ಕೈಜೋಡಿಸಲು ರೋಹಿತ್ ಶೆಟ್ಟಿಗೆ ಶಾರುಖ್ ಸಲಹೆ ನೀಡಿದ್ದಾರಂತೆ. ಸದ್ಯದಲ್ಲೇ ಲುಂಗಿ ಉಟ್ಟ ಶಾರುಖ್ ಜಾಹೀರಾತುಗಳು ಎಲ್ಲೆಡೆ ಕಿಚ್ಚು ಎಬ್ಬಿಸಿದೆ.

ಕಿಂಗ್ ಖಾನ್ ಶಾರುಖ್ ಹಾಗೂ ದೀಪಿಕಾ ಜನಪ್ರಿಯ ಜೋಡಿ ಮತ್ತೊಮ್ಮೆ ಕಮಾಲ್ ಮಾಡುತ್ತಿದೆ. ಮೆಕ್ಸಿಕೋ ನಟಿ ರೆಬೆಕಾ ಮಯೋರ್ಗಾ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ಉಳಿದಂತೆ, ಚಿತ್ರದಲ್ಲಿ ಐಟಂ ನಂಬರ್ ನಲ್ಲಿ ಕಾಣಿಸಿಕೊಂಡಿರುವ ಪ್ರಿಯಾಮಣಿ, ವಿಶಾಲ್ -ಶೇಖರ್, ನೀತಿ ಮೋಹನ್, ಅಮಿತಾಬ್ ಭಟ್ಟಾಚಾರ್ಯ, ರೋನಿ ಸ್ಕ್ರೂವಾಲ, ಟಿ ಸೀರಿಸ್ ನ ಭೂಷಣ್ ಕುಮಾರ್ ಮುಂತಾದವರು ಈ ಸಮಾರಂಭದಲ್ಲಿ ಕಳೆಕಟ್ಟಿದರು. ಆಡಿಯೋ ರಿಲೀಸ್ ನ ಚಿತ್ರಗಳು ನಿಮ್ಮ ಮುಂದಿದೆ.

ದೀಪಿಕಾ ಪಡುಕೋಣೆ

ಉದ್ದನೆ ನಿಲುವಂಗಿಯಲ್ಲಿ ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಆಕರ್ಷಕವಾಗಿ ಕಾಣಿಸಿದರು.

ಮೆಕ್ಸಿಕೋ ನಟಿ

ಚೆನ್ನೈ ಎಕ್ಸ್ ಪ್ರೆಸ್ ಧ್ವನಿಸುರಳಿ ಬಿಡುಗಡೆ ಪ್ರಚಾರದಲ್ಲಿ ಮೆಕ್ಸಿಕೋ ನಟಿ ರೆಬೆಕಾ

ಮೆಕ್ಸಿಕೋ ನಟಿ ರೆಬೆಕಾ

ಚೆನ್ನೈ ಎಕ್ಸ್ ಪ್ರೆಸ್ ಧ್ವನಿಸುರಳಿ ಬಿಡುಗಡೆ : ಪರ್ವೇಜ್ ಜೊತೆ ಮೆಕ್ಸಿಕೋ ನಟಿ ರೆಬೆಕಾ

ಕಿಂಗ್ ಖಾನ್ ಶಾರುಖ್

ಪ್ರೇಕ್ಷಕರತ್ತ ಕೈ ಬೀಸುತ್ತಿರುವ ಚಿತ್ರದ ನಾಯಕ ಶಾರುಖ್ ಖಾನ್

ಧ್ವನಿಸುರಳಿ ಬಿಡುಗಡೆ

ಚೆನ್ನೈ ಎಕ್ಸ್ ಪ್ರೆಸ್ ಧ್ವನಿಸುರಳಿ ಬಿಡುಗಡೆ ಬಿಡುಗಡೆ ಮಾಡಿದ ರೋಹಿತ್ ಶೆಟ್ಟಿ, ದೀಪಿಕಾ ಪಡುಕೋಣೆ ಹಾಗೂ ಶಾರುಖ್ ಖಾನ್

ಬೆಡಗಿಯರ ಜೊತೆ ಕಿಂಗ್ ಖಾನ್

ಚಿತ್ರದ ನಾಯಕ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಮಣಿ

ದೀಪಿಕಾ ಜೊತೆ ಕಿಂಗ್ ಖಾನ್

ಚಿತ್ರದ ನಾಯಕ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ ರಸ ನಿಮಿಷಗಳು

English summary
Superstar Shahrukh Khan recently launched the music of his upcoming film Chennai Express along with Deepika Padukone at JW Marriott. And to make the music launch of the movie more interesting, the guests were given a whistle and a lungi to get in the fun mood.
Please Wait while comments are loading...