twitter
    For Quick Alerts
    ALLOW NOTIFICATIONS  
    For Daily Alerts

    'ಪೊಗರು' ಸಂಗೀತದ ಕುರಿತಾದ ಆರೋಪಕ್ಕೆ ನಿರ್ದೇಶಕ ನಂದಕಿಶೋರ್ ನೀಡಿದ ಉತ್ತರ

    By ಫಿಲ್ಮಿ ಬೀಟ್ ಡೆಸ್ಕ್
    |

    'ಪೊಗರು' ಚಿತ್ರದ 'ಖರಾಬು' ಹಾಡಿನ ಬೀಟ್ಸ್‌ಗಳು ಒರಿಜಿನಲ್ ಅಲ್ಲ. ಅವು ತೆಲುಗು ಚಿತ್ರದ ಹಾಡೊಂದರಲ್ಲಿ ಎರಡು ದಶಕಗಳ ಹಿಂದಷ್ಟೇ ಬಳಕೆಯಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಅದನ್ನು 'ಪೊಗರು' ಚಿತ್ರದ ನಿರ್ದೇಶಕ ನಂದಕಿಶೋರ್ ನಿರಾಕರಿಸಿದ್ದಾರೆ.

    ಇತ್ತೀಚೆಗೆ ಟಿಕ್ ಟಾಕ್ ಬಳಕೆದಾರರೊಬ್ಬರು 'ಖರಾಬು' ಹಾಡಿನ ಬೀಟ್ಸ್ ಒಂದನ್ನು ಬಳಸಿ, ಅದೇ ಬಗೆಯ ಸಂಗೀತ 1997ರಲ್ಲಿ ಬಿಡುಗಡೆಯಾದ ತೆಲುಗು ಚಿತ್ರ 'ಪೆಲ್ಲಿ'ಯಲ್ಲಿ ಬಳಕೆಯಾಗಿತ್ತು, ಬಳಿಕ 1998ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ಅವಳ್ ವರುವಳಾ'ದಲ್ಲಿಯೂ ಬಳಕೆಯಾಗಿತ್ತು. 2000ರಲ್ಲಿ ಕನ್ನಡ ಚಿತ್ರ 'ಮದುವೆ'ಯಲ್ಲಿಯೂ ಈ ಟ್ಯೂನ್ ಇತ್ತು. ಈ ಮೂರೂ ಚಿತ್ರಗಳಿಗೆ ಎಸ್ ಎ ರಾಜ್ ಕುಮಾರ್ ಅವರೇ ಸಂಗೀತ ನೀಡಿದ್ದರು. ಅದನ್ನೇ 'ಖರಾಬು' ಹಾಡಿನಲ್ಲಿಯೂ ಬಳಸಿಕೊಳ್ಳಲಾಗಿದೆ ಎನ್ನಲಾಗಿತ್ತು. ಮುಂದೆ ಓದಿ...

    ಹೋಲಿಕೆ ಇಲ್ಲ ಎಂದ ನಂದಕಿಶೋರ್

    ಹೋಲಿಕೆ ಇಲ್ಲ ಎಂದ ನಂದಕಿಶೋರ್

    'ಖರಾಬು' ಹಾಡಿನ ಟ್ಯೂನ್‌ಗೂ ತೆಲುಗು ಮತ್ತು ತಮಿಳಿನಲ್ಲಿ ಬಂದ ಎಸ್‌ಎ ರಾಜ್ ಕುಮಾರ್ ಸಂಗೀತ ಹಾಡಿನ ಟ್ಯೂನ್‌ಗೂ ಸಾಮ್ಯತೆ ಇಲ್ಲ. ಎರಡರ ನಡುವೆಯೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಚಿತ್ರದ ನಿರ್ದೇಶಕ ನಂದಕಿಶೋರ್ 'ಫಿಲ್ಮಿ ಬೀಟ್‌'ಗೆ ತಿಳಿಸಿದ್ದಾರೆ.

    'ಪೊಗರು' ಚಿತ್ರದ 'ಖರಾಬು...' ಹಾಡಿನ ಸಂಗೀತ ಒರಿಜಿನಲ್ ಅಲ್ಲವೇ?'ಪೊಗರು' ಚಿತ್ರದ 'ಖರಾಬು...' ಹಾಡಿನ ಸಂಗೀತ ಒರಿಜಿನಲ್ ಅಲ್ಲವೇ?

    ಕಾಪಿ ರೈಟ್ಸ್ ಕಾಯ್ದೆ ಕಠಿಣವಾಗಿದೆ

    ಇಂದು ಕಾಪಿರೈಟ್ಸ್ ಕಾಯ್ದೆ ಬಹಳ ಕಠಿಣವಾಗಿದೆ. ಎರಡು ಹಾಡುಗಳನ್ನು ಅಕ್ಕಪಕ್ಕದಲ್ಲಿಟ್ಟು ಕೇಳಿಸಿದಾಗ ಇಂದು ಯಾವುದೇ ಹಾಡಿನಲ್ಲಿ ಒಂದೇ ಒಂದು ಸಣ್ಣ ನೋಟ್ ಹೋಲಿಕೆ ಇದ್ದರೂ ಅವರು ನಮ್ಮ ಮೇಲೆ ಕೇಸ್ ಹಾಕುವಷ್ಟು ಕಾಯ್ದೆ ಕಠಿಣವಾಗಿದೆ ಎಂದು ನಂದಕಿಶೋರ್ ವಿವರಿಸಿದ್ದಾರೆ.

    ವ್ಯತ್ಯಾಸ ವಿವರಿಸಿದ ನಂದಕಿಶೋರ್

    'ಎಸ್ ಎ ರಾಜ್ ಕುಮಾರ್ ತಮಿಳಿನಲ್ಲಿ ಮಾಡಿರುವ ಹಾಡಿಗೂ ಈ ಹಾಡಿಗೂ ಯಾವುದೇ ಹೋಲಿಕೆ ಇಲ್ಲ. ಸಣ್ಣ ನೋಟ್ ಕೂಡ ಹೋಲಿಕೆ ಇಲ್ಲ. ಎರಡರ ನಡುವೆಯೂ ಬಹಳ ವ್ಯತ್ಯಾಸ ಇದೆ' ಎಂದಿರುವ ನಂದಕಿಶೋರ್, ಈ ಎರಡೂ ಹಾಡುಗಳ ನೋಟ್‌ಗಳ ಕೀಬೋರ್ಡ್ ಸಂಗೀತದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ವ್ಯತ್ಯಾಸವನ್ನು ತಿಳಿಸಿದ್ದಾರೆ.

    ಕದ್ದ ಟ್ಯೂನ್ ಎಂಬ ಅಪಖ್ಯಾತಿ ಪಡೆದ ಸೂಪರ್ ಹಿಟ್ ಹಾಡುಗಳಿವುಕದ್ದ ಟ್ಯೂನ್ ಎಂಬ ಅಪಖ್ಯಾತಿ ಪಡೆದ ಸೂಪರ್ ಹಿಟ್ ಹಾಡುಗಳಿವು

    ಉತ್ತರ ನೀಡುವುದು ನನ್ನ ಕರ್ತವ್ಯ

    ಉತ್ತರ ನೀಡುವುದು ನನ್ನ ಕರ್ತವ್ಯ

    ನಾವು ಇಂದು ಒಂದು ಸಿನಿಮಾ ಕುರಿತಾದ ಜನರ ಕುತೂಹಲ ಮತ್ತು ಆಸಕ್ತಿಯನ್ನು ಉಳಿಸಿಕೊಂಡು ಹೋಗುವುದೇ ಕಷ್ಟವಿದೆ. ಒಬ್ಬ ಹೀರೋ ಒಂದು ಚಿತ್ರಕ್ಕೆ ಮೂರು ವರ್ಷ ಕೊಡುತ್ತಾರೆ ಎಂದಾಗ ಅದನ್ನು ಉಳಿಸಿಕೊಂಡು ಹೋಗುವಾಗ ಒಬ್ಬ ನಿರ್ದೇಶಕನಿಗೆ ಕೂಡ ಹೆಚ್ಚಿನ ಸವಾಲುಗಳಿರುತ್ತವೆ. ಹೀಗಾಗಿ ಈ ರೀತಿಯ ಪ್ರಶ್ನೆಗಳು ಉದ್ಭವವಾದಾಗ ಜನರಿಗೆ ಉತ್ತರ ನೀಡುವುದು ನಿರ್ದೇಶಕನಾಗಿ ನನ್ನ ಕರ್ತವ್ಯ ಎಂದು ನಂದಕಿಶೋರ್ ಹೇಳಿದ್ದಾರೆ.

    ಹಾಡಿನ ಟ್ಯೂನ್ ವೈರಲ್

    ಹಾಡಿನ ಟ್ಯೂನ್ ವೈರಲ್

    ಚಂದನ್ ಶೆಟ್ಟಿ ಸಂಗೀತ ನೀಡಿರುವ 'ಖರಾಬು' ಹಾಡಿನ ಟ್ಯೂನ್ ಎಸ್ ಎ ರಾಜ್ ಕುಮಾರ್ ಅವರ ಸಂಗೀತ ನಿರ್ದೇಶನದ ಹಾಡಿನಂತೆಯೇ ಇದೆ ಎಂದು ಕೆಲವರು ಆರೋಪಿಸಿದ್ದರು. ಅದಕ್ಕೆ ಒಂದೇ ರೀತಿಯ ಮೂರು ಹಾಡುಗಳ ಬೀಟ್ಸ್‌ಗಳಿರುವ ವಿಡಿಯೋ ಜೋಡಿಸಲಾಗಿತ್ತು.

    'ದಾಖಲೆ ಇರುವುದು ಡಿ ಬಾಸ್ ಹೆಸರಲ್ಲಿ': ಆಡಿಯೋ ಕಂಪೆನಿ ವಿರುದ್ಧ ದರ್ಶನ್ ಅಭಿಮಾನಿಗಳ ಆಕ್ರೋಶ'ದಾಖಲೆ ಇರುವುದು ಡಿ ಬಾಸ್ ಹೆಸರಲ್ಲಿ': ಆಡಿಯೋ ಕಂಪೆನಿ ವಿರುದ್ಧ ದರ್ಶನ್ ಅಭಿಮಾನಿಗಳ ಆಕ್ರೋಶ

    English summary
    Director Nanda Kishore has denied the allegation over the Kharabuu song of his Pogaru movie and said there is no similarity between those songs.
    Sunday, May 24, 2020, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X