ಪೊನ್ನಿಯಿನ್ ಸೆಲ್ವನ್: ಚೋಳರ ಶೌರ್ಯ ಸಾರುವ ಹೊಸ ಹಾಡು ಬಿಡುಗಡೆ
ಮಣಿರತ್ನಂ ನಿರ್ದೇಶನದ ಬಹು ತಾರಾಗಣದ, ಬಹು ನಿರೀಕ್ಷಿತ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಭಾಗ ಒಂದರ ಎರಡನೇ ಹಾಡು ಇಂದು ಬಿಡುಗಡೆ ಆಗಿದೆ.
ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ ಇನ್ನೂ ಹಲವಾರು ಮಂದಿ ಸ್ಟಾರ್ ನಟರು ನಟಿಸಿರುವ ಈ ಸಿನಿಮಾ ದೇಶದಾದ್ಯಂತ ಭಾರಿ ಕುತೂಹಲ ಕೆರಳಿಸಿದೆ.
ಚೋಳರ ಕಾಲದ ಕತೆಯನ್ನು ಹೊಂದಿರುವ ಈ ಸಿನಿಮಾವನ್ನು ಲೈಕಾ ಪ್ರೊಡಕ್ಷನ್‌ನವರು ಭಾರಿ ಅದ್ಧೂರಿಯಾಗಿ ನಿರ್ಮಿಸಿದ್ದು, ಸಿನಿಮಾದ ಎರಡನೇ ಹಾಡು ಇಂದು ಬಿಡುಗಡೆ ಆಗಿದೆ.

ಚೋಳರ ರಾಜ ಆದಿತ್ಯ ಕರಿಕಾಲನ್ ಅನ್ನು ಪ್ರಶಂಸಿಸುವ, ಚೋಳರ ಶೌರ್ಯ ಸಾರುವ ಹಾಡು ಇದಾಗಿದ್ದು, ಸಂಗೀತ ನಿರ್ದೇಶನ ಮಾಡಿರುವುದು ಆಸ್ಕರ್ ವಿಜೇತ ಎ.ಆರ್.ರೆಹಮಾನ್.
ಇದೀಗ ಬಿಡಗುಡೆ ಆಗಿರುವ ಹಾಡು ಗೆಲುವೊಂದನ್ನು ಸಂಭ್ರಮಿಸುವ ಹಾಡಾಗಿದ್ದು, ಹಾಡಿನ ಮುನ್ನಲೆಯಲ್ಲಿ ಬಳಸಿರುವ ದೃಶ್ಯಗಳು ವೈಭವಪೂರ್ಣವಾಗಿಯೂ, ಗತಕಾಲದ ಯುದ್ಧದ ಭೀಕರತೆ ಹಾಗೂ ವ್ಯಾಪಕತೆಯನ್ನು ಕಟ್ಟಿಕೊಡುತ್ತಿವೆ.
ಆಗಸ್ಟ್ 19 ರಂದು ಸಂಜೆ ಆರು ಗಂಟೆಗೆ ಟಿಪ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಹಾಡು ಬಿಡುಗಡೆ ಆಗಿದೆ. ಈ ಹಾಡು ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿದೆ. ಆರು ಗಂಟೆಗೆ ಬಿಡುಗಡೆ ಆದ ಹಾಡು ಕೆಲವೇ ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ವೀವ್ಸ್ ಗಳಿಸಿವೆ. ಇದು ತಮಿಳಿನ ಲೆಕ್ಕಾಚಾರ ಮಾತ್ರವೇ ಆಗಿದ್ದು, ಬೇರೆ ಭಾಷೆಗಳಲ್ಲಿ ಬಿಡುಗಡೆ ಆದ ಹಾಡು ಸಹ ಲಕ್ಷಾಂತರ ವೀವ್ಸ್ ಗಳಿಸಿವೆ.
ಸಿನಿಮಾದಲ್ಲಿ ವಿಕ್ರಂ, ಆದಿತ್ಯ ಕರಿಕಾಲನ್ ಪಾತ್ರದಲ್ಲಿ, ಐಶ್ವರ್ಯಾ ರೈ ನಂದಿನಿ ಹಾಗೂ ಪಳುವತ್ತಾರಿಯನ್ ಪಾತ್ರದಲ್ಲಿ, ಕಾರ್ತಿ ವಲ್ಲವರಿಯನ್ ವಂದಿಯದೇವನ್ ಪಾತ್ರದಲ್ಲಿ, ತ್ರಿಶಾ ಕುಂಡವಿಯರ್ ಪಿರುತ್ತಾರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರ ಹೊರತಾಗಿ ಐಶ್ವರ್ಯಾ ಲಕ್ಷ್ಮಿ, ಶೋಭೀತ ಧುಲಿಪಾಡ, ಪ್ರಭು, ಶರತ್‌ಕುಮಾರ್, ವಿಕ್ರಂ ಪ್ರಭು, ಪ್ರಕಾಶ್ ರಾಜ್, ರೆಹಮಾನ್, ಆರ್ ಪಾರ್ತಿಭನ್, ಲಾಲ್, ಕನ್ನಡಿಗ ಕಿಶೋರ್ ಇನ್ನೂ ಹಲವರು ನಟಿಸಿದ್ದಾರೆ. ಮಣಿರತ್ನಂ ನಿರ್ದೇಶಿಸಿರುವ ಈ ಸಿನಿಮಾ ಸೆಪ್ಟೆಂಬರ್ 30 ರಂದು ಬಿಡುಗಡೆ ಆಗಲಿದೆ.


Click it and Unblock the Notifications











