twitter
    For Quick Alerts
    ALLOW NOTIFICATIONS  
    For Daily Alerts

    'ಮಹಿಳೆಯರ ಏಳಿಗೆಗೆ ಏಂಜೆಲ್ ಐಸ್ ದುಡಿಮೆ'

    By ಜೇಮ್ಸ್ ಮಾರ್ಟಿನ್
    |

    ಏಂಜಲ್ ಐಸ್ ಮಿಲ್ ತೋ ಕಭಿ ಎಂಬ ಆಡಿಯೋ ಸಿಡಿ ಬಿಡುಗಡೆ ಮಾಡಿದ ಮಿಸ್ಟಿಕ್ ಮ್ಯೂಸಿಕ್ ಆಫ್ ಲವ್ ಖ್ಯಾತಿಯ ಬೆಂಗಳೂರಿನ ಗಾಯಕ, ಸಂಗೀತ ಸಂಯೋಜಕ ನಿಖಿಲ್ ಕುಮಾರ್ ಅವರು ಈ ಆಲ್ಬಂನಿಂದ ಬರುವ ಅಷ್ಟೂ ಮೊತ್ತವನ್ನು ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ದುಡಿಯುತ್ತಿರುವ ಸಂಸ್ಥೆಗೆ ಧಾರೆ ಎರೆಯುವುದಾಗಿ ಘೋಷಿಸಿದರು.

    ಭಾರತೀಯ ಇಂಡಿ ಪಾಪ್ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿಖಿಲ್ ಅವರ ಹೊಸ ಆಲ್ಬಂ ಅನ್ನು ಮಹಿಳಾ ದಿನಾಚರಣೆ ಅಂಗವಾಗಿ ನಗರದ ಯುಬಿ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಸಂಗೀತಗಾರ ಗುರುಕಿರಣ್ ಅವರು ಲೋಕಾರ್ಪಣೆ ಮಾಡಿದರು. ಈ ಸಮಾರಂಭದಲ್ಲಿ ಗಾಯಕಿ ಮಿಲ್ಲಿಮರ್ಸಿಡೀಸ್, ಖ್ಯಾತ ಗಿಟಾರಿಸ್ಟ್ ಸೆಡ್ರಿಕ್ ಡಿಸಾ ಮತ್ತಿತ್ತರರು ಉಪಸ್ಥಿತರಿದ್ದರು.

    ಇದು ಮಹಿಳಾ ಪ್ರಧಾನ ಪಾಪ್, ಫನ್ ರಾಕ್ ಟ್ರಾಕ್ ಆಗಿದ್ದು, ನಿಖಿಲ್ ಅವರು ಹಿಂದಿ-ಇಂಗ್ಲೀಷ್ ನಲ್ಲಿ ಗೀತೆ ರಚಿಸಿ ರಾಗ ಸಂಯೋಜಿಸಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ನಿಖಿಲ್ ಈ ಆಲ್ಬಂ ಅನ್ನು ಮಹಿಳೆಯರಿಗೆ ಅರ್ಪಿಸಿರುವುದು ಸಂತೋಷದ ಸಂಗತಿ ಎಂದು ಗುರುಕಿರಣ್ ಹೊಗಳಿದರು.

    ಸಾಮಾಜಿಕ ಕಳಕಳಿಗಾಗಿ ಏಂಜಲ್ ಐಸ್ ಗೀತೆ

    ಸಾಮಾಜಿಕ ಕಳಕಳಿಗಾಗಿ ಏಂಜಲ್ ಐಸ್ ಗೀತೆ

    ದೇಶದ ಪಾಪ್ ರಂಗದ ಭರವಸೆಯ ಹೆಸರುಗಳಲ್ಲಿ ನಿಖಿಲ್ ಅವರದ್ದೂ ಒಂದು. ಇವರು ಏಂಜಲ್ ಐಸ್.. ಮಿಲ್ ತೋ ಕಭಿ ಟ್ರ್ಯಾಕ್ ಅನ್ನು ಸಾಮಾಜಿಕ ಕಾಳಜಿ ಹಾಗೂ ಕಳಕಳಿಯನ್ನು ದೃಷ್ಟಿಯಲ್ಲಿರಿಸಿಕೊಂಡು ರೂಪಿಸಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವದಾದ್ಯಂತ ಮಾರ್ಚ್ 8ರಂದು ಬಿಡುಗಡೆ ಮಾಡಿದ್ದಾರೆ. ಏಂಜಲ್ ಐಸ್ ಮಿಲ್ ತೋ ಕಭಿ ಟ್ರ್ಯಾಕ್ ‌ನಿಂದ ಬರುವ ಗಳಿಕೆಯನ್ನು ಮಹಿಳಾಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಘ ಸಂಸ್ಥೆಗಳಿಗೆ ನೀಡಲಾಗುವುದು ಎಂದು ನಿಖಿಲ್ ಮತ್ತೊಮ್ಮೆ ಘೋಷಿಸಿದ್ದಾರೆ.

    ಪಾಪ್ ಗಾಯಕ, ಸಂಗೀತಗಾರ ನಿಖಿಲ್ ಬಗ್ಗೆ

    ಪಾಪ್ ಗಾಯಕ, ಸಂಗೀತಗಾರ ನಿಖಿಲ್ ಬಗ್ಗೆ

    ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸು ಸಾಧ್ಯ ಎನ್ನುವ ನಿಖಿಲ್, 2003 ರಲ್ಲಿ ಮಿಸ್ಟಿಕ್ ದ ಮ್ಯಾಜಿಕ್ ಆಫ್ ಮ್ಯೂಸಿಕ್ ಸಿಡಿ ಬಿಡುಗಡೆ ಮಾಡುವ ಮೂಲಕ ರಾಷ್ಟಮಟ್ಟದಲ್ಲಿ ಸುದ್ದಿಯಾಗಿದ್ದರು. ನಿಖಿಲ್ ತಮ್ಮ ಆರು ಮಿತ್ರರೊಡಗೂಡಿ ಮಿಸ್ಟಿಕ್, ದ ಮ್ಯಾಜಿಕ್ ಆಫ್ ಮ್ಯೂಸಿಕ್ ಹೊರತಂದಿದ್ದರು. ಮಿಸ್ಟಿಕ್ ದ ಮ್ಯಾಜಿಕ್ ಆಫ್ ಮ್ಯೂಸಿಕ್ ಮಾಧ್ಯಮ ಮತ್ತು ಭಾರತೀಯ ಪಾಪ್ ಪ್ರೇಮಿಗಳ ಅಪಾರ ಮೆಚ್ಚುಗೆಗೂ ಪಾತ್ರವಾಗಿತ್ತು.

    ಪಾಪ್ ಗಾಯಕ, ಸಂಗೀತಗಾರ ನಿಖಿಲ್ ಬಗ್ಗೆ

    ಪಾಪ್ ಗಾಯಕ, ಸಂಗೀತಗಾರ ನಿಖಿಲ್ ಬಗ್ಗೆ

    ಕಠಿಣ ಪರಿಶ್ರಮದಿಂದ ಮಾತ್ರವೇ ಯಶಸ್ಸು ಸಾಧ್ಯ ಎನ್ನುವ ನಿಖಿಲ್, 2003 ರಲ್ಲಿ ಮಿಸ್ಟಿಕ್ ದ ಮ್ಯಾಜಿಕ್ ಆಫ್ ಮ್ಯೂಸಿಕ್ ಸಿಡಿ ಬಿಡುಗಡೆ ಮಾಡುವ ಮೂಲಕ ರಾಷ್ಟಮಟ್ಟದಲ್ಲಿ ಸುದ್ದಿಯಾಗಿದ್ದರು. ನಿಖಿಲ್ ತಮ್ಮ ಆರು ಮಿತ್ರರೊಡಗೂಡಿ ಮಿಸ್ಟಿಕ್, ದ ಮ್ಯಾಜಿಕ್ ಆಫ್ ಮ್ಯೂಸಿಕ್ ಹೊರತಂದಿದ್ದರು. ಮಿಸ್ಟಿಕ್ ದ ಮ್ಯಾಜಿಕ್ ಆಫ್ ಮ್ಯೂಸಿಕ್ ಮಾಧ್ಯಮ ಮತ್ತು ಭಾರತೀಯ ಪಾಪ್ ಪ್ರೇಮಿಗಳ ಅಪಾರ ಮೆಚ್ಚುಗೆಗೂ ಪಾತ್ರವಾಗಿತ್ತು.

    ಬಹುಮುಖ ಪ್ರತಿಭೆ ನಿಖಿಲ್ ಕುಮಾರ್

    ಬಹುಮುಖ ಪ್ರತಿಭೆ ನಿಖಿಲ್ ಕುಮಾರ್

    ಮೂಲತಃ ಬೆಂಗಳೂರಿನವರಾದ ನಿಖಿಲ್ ಬಹುಮುಖ ಪ್ರತಿಭೆ-ವ್ಯಕ್ತಿತ್ವವುಳ್ಳವರು. ಎಳವೆಯಿಂದಲೇ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡ ನಿಖಿಲ್, 1999 ರಲ್ಲಿಯೇ ಸ್ನೇಹಿತರೊಡಗೂಡಿ ಇಂಡಿಯನ್ ಮ್ಯೂಸಿಕ್ ಬ್ಯಾಂಡ್ ಸ್ಥಾಪಿಸಿದ್ದರು. 1999 ರಿಂದ 2003ರ ವರೆಗೂ ಅನೇಕ ಪ್ರಸಿದ್ಧ ಟ್ರ್ಯಾಕ್ ‌ಗಳನ್ನು ಪಾಪ್ ಕ್ಷೇತ್ರಕ್ಕೆ ಕೊಟ್ಟ ಕೀರ್ತಿ ಇವರದ್ದು. ನಿಖಿಲ್ ಅವರ ಗೀವ್ ಅಸ್ ಸಾಲ್ವೇಷನ್ ಮತ್ತು ತು ಮೇರಾ ಥಾ ಯುವಜನರ ಮನಕದ್ದಿದ್ದವು.

    ರೇಡಿಯೋ ಜಾಕಿ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್

    ರೇಡಿಯೋ ಜಾಕಿ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್

    ನಿಖಿಲ್ ಅವರು ನಾಡಿನ ಖ್ಯಾತ ರೇಡಿಯೋ ಜಾಕಿ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್ ಗಳಲ್ಲಿ ಒಬ್ಬರು. ಅಲ್ಲದೆ ದಶಕಗಳ ಕಾಲ ವೃತ್ತಿಪರ ನೃತ್ಯಗಾರರೂ ಆಗಿದ್ದರು. ರೇಡಿಯೋ ಮತ್ತು ಟೆಲಿವಿಷನ್ ವಾಹಿನಿಗಳು ಹಾಗೂ ವಿವಿಧ ಪ್ರೊಡಕ್ಷನ್ ಸಂಸ್ಥೆಗಳ ಸಿಬ್ಬಂದಿಗಳಿಗಾಗಿ ಧ್ವನಿ ತರಬೇತಿ ಕಾರ್ಯಾಗಾರಗಳನ್ನೂ ನಡೆಸಿಕೊಡುತ್ತಾರೆ.

    ರೇಡಿಯೋ ಪ್ರೊಡಕ್ಷನ್ ವಿಭಾಗಗಳ ಮುಖ್ಯಸ್ಥರಾಗಿದ್ದರು

    ರೇಡಿಯೋ ಪ್ರೊಡಕ್ಷನ್ ವಿಭಾಗಗಳ ಮುಖ್ಯಸ್ಥರಾಗಿದ್ದರು

    ನಿಖಿಲ್ ಅವರು ದ ಟೈಂಸ್ ಆಫ್ ಇಂಡಿಯಾ (ರೇಡಿಯೋ ಮಿರ್ಚಿ), ಟಿವಿ 9 ನ್ಯೂಸ್ ನೆಟ್ ‌ವರ್ಕ್ (ನ್ಯೂಸ್ 9) ಮತ್ತು ಚಾನಲ್ 4 ರೇಡಿಯೋ ನೆಟವರ್ಕ್ (ರೇಡಿಯೋ 4 ಎಫ್ ಎಂ, ದುಬೈ) ನ ಪ್ರೊಡಕ್ಷನ್ ವಿಭಾಗಗಳ ಮುಖ್ಯಸ್ಥರಾಗಿದ್ದರು. ಅಲ್ಲದೆ ಖ್ಯಾತ ಬಾಲಿವುಡ್ ತಾರೆಯರೂ ಸೇರಿದಂತೆ ಅನೇಕ ಖ್ಯಾತನಾಮರ ಜೊತೆ ಪ್ರಶಸ್ತಿ ಪ್ರಧಾನ ಸಮಾರಂಭಗಳಲ್ಲಿ ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ. ಅಲ್ಲದೆ, ಕಲರ್ಸ್ ವಾಹಿನಿ ಪ್ರಸಾರ ಮಾಡಿದ್ದ ಝಲಕ್ ದಿಕ್ ಲಾ ಜಾ ಕಾರ್ಯಕ್ರಮದಲ್ಲಿ ಮೊದಲ ಮೂರು ಸ್ಪರ್ಧಿಗಳಲ್ಲಿ ಇವರು ಗಮನ ಸೆಳೆದಿದ್ದರು.

    ಎಫ್ ‌ಎಂ ಕೇಂದ್ರಗಳ ಸ್ಥಾಪನೆಯ ಹಿಂದಿನ ಶಕ್ತಿ

    ಎಫ್ ‌ಎಂ ಕೇಂದ್ರಗಳ ಸ್ಥಾಪನೆಯ ಹಿಂದಿನ ಶಕ್ತಿ

    ನಿಖಿಲ್ 2000ರಲ್ಲಿ ಆರಂಭವಾದ ಬೆಂಗಳೂರಿನ ಪ್ರಪ್ರಥಮ ಎಫ್ ‌ಎಂ ಕೇಂದ್ರ ರೇಡಿಯೋ ಸಿಟಿ ಯ ಆರಂಭದ ವಾಯ್ಸ್ ಓವರ್ ಆರ್ಟಿಸ್ಟ್ ಗಳಲ್ಲಿ ಒಬ್ಬರು. 2005ರಲ್ಲಿ ಆರಂಭವಾದ ರೇಡಿಯೋ ಮಿರ್ಚಿ ಯ ಪ್ರೋಮೊ ಪ್ರೊಡ್ಯೂಸರ್ ಆಗಿದ್ದರು. ಭಾರತದಲ್ಲಿ ಅನೇಕ ರೇಡಿಯೋ ಕೇಂದ್ರ ಮತ್ತು ಟಿವಿ ಚಾನಲ್ ಗಳ ಸ್ಥಾಪನೆ ಹಿಂದೆ ಇವರ ಶ್ರಮ ಇದೆ.

    ವೆಬ್ ‌ಸೈಟ್ ಕೂಡಾ ಬಿಡುಗಡೆ

    ವೆಬ್ ‌ಸೈಟ್ ಕೂಡಾ ಬಿಡುಗಡೆ

    ಏಂಜಲ್ ಐಸ್ ಮಿಲ್ ತೋ ಕಭಿ ಟ್ರ್ಯಾಕ್ ಬಿಡುಗಡೆ ಸಮಾರಂಭ ಬೆಂಗಳೂರಿನ ಸಂತ ಮಾರ್ಕ್ಸ್ ರಸ್ತೆಯಲ್ಲಿರುವ ಯುಬಿ ಸಿಟಿಯಲ್ಲಿ ನಡೆಯಿತು ಅಲ್ಲದೆ, ಇದೇ ಸಂದರ್ಭದಲ್ಲಿ ನಿಖಿಲ್ ನಿರ್ದೇಶಕರಾಗಿರುವ ಸಂಸ್ಥೆ ಶ್ರಿಯಾ ಮೀಡಿಯಾದ ವೆಬ್ ಸೈಟ್ ಗೆ ಕೂಡಾ www.shriyamedia.com ಗೂ ಚಾಲನೆ ನೀಡಲಾಯಿತು.

    ನಿಖಿಲ್ ಪಾಪ್ ಆಲ್ಬಂ

    ಬೆಂಗಳೂರಿನ ಗಾಯಕ ನಿಖಿಲ್ ಪಾಪ್ ಆಲ್ಬಂ...ಏಂಜಲ್ ಐಸ್ ಮಿಲ್ ತೋ ಕಭಿ ಟ್ರೇಲರ್

    English summary
    Bangalore Indi pop Singer set to rock again with his single Women centric as its female lead vocals 'Angel Eyes...Mil Tho Kabhi' which released on the occasion of International Women's Day at Soul City restaurant, UB City in Bangalore on March 8th. Nikhil said the earing from the number will be spend on organisations who work to uplift women and children community
    Monday, March 10, 2014, 14:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X