'ಪವರ್ ಆಫ್ ಯೂತ್': ಯುವರತ್ನ ಸಿನಿಮಾದ ಪವರ್‌ಫುಲ್ ಹಾಡು ಬಿಡುಗಡೆ
ನಟ ಪುನೀತ್ ರಾಜ್‌ಕುಮಾರ್ ನಟನೆಯ 'ಯುವರತ್ನ' ಸಿನಿಮಾದ 'ಪವರ್ ಆಫ್ ಯುತ್' ಹಾಡು ಇಂದು ಬಿಡುಗಡೆ ಆಗಿದೆ.
ವಿಡಿಯೋ ಹಾಡನ್ನು ಚಿತ್ರತಂಡ ಇಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು, ಪವರ್ ಆಫ್ ಯೂತ್ ಹಾಡಿಗೆ ಪುನೀತ್ ಸಖತ್ ಯೂತ್‌ಫುಲ್ ಆಗಿ ಹೆಜ್ಜೆ ಹಾಕಿದ್ದಾರೆ. ಸಿನಿಮಾದಲ್ಲಿ ಇಂಟ್ರೊಡಕ್ಷನ್ ಹಾಡು ಇದಾಗಿರಲಿದೆ ಎಂಬುದರಲ್ಲಿ ಅನುಮಾನವಿಲ್ಲ.
ಪವರ್ ಆಫ್ ಯೂತ್ ಹಾಡು ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲಿ ಸಹ ಬಿಡುಗಡೆ ಆಗಿದೆ. ಯುವರತ್ನ ಸಿನಿಮಾ ಸಹ ಕನ್ನಡದ ಜೊತೆಗೆ ತೆಲುಗು ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ.

ಯುವರತ್ನ ಸಿನಿಮಾಕ್ಕೆ ಎಸ್.ತಮನ್ ಸಂಗೀತ ನೀಡಿದ್ದು, 'ಪವರ್ ಆಫ್ ಯೂತ್' ಹಾಡನ್ನು ನಕಶ್ ಅಜೀಜ್ ಹಾಡಿದ್ದಾರೆ. ಹಾಡಿನ ಸಾಹಿತ್ಯ ಕನ್ನಡದಲ್ಲಿ ಸಂತೋಶ್ ಆನಂದ್ ರಾಮ್ ಬರೆದಿದ್ದರೆ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರಿ ಬರೆದಿದ್ದಾರೆ.
ಹಾಡು ಬಿಡುಗಡೆ ಆದ 30 ನಿಮಿಷದಲ್ಲಿ ಹಾಡನ್ನು ಒಂದು ಲಕ್ಷ ಬಾರಿ ವೀಕ್ಷಿಸಲಾಗಿದೆ. ತೆಲುಗಿನ ಹಾಡನ್ನು ಸಹ 30 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಸಿನಿಮಾವನ್ನು ಸಂತೋಶ್ ಆನಂದ್‌ರಾಮ್ ನಿರ್ದೇಶಿಸಿದ್ದು, ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ಸಿನಿಮಾವು ಜನವರಿಯಲ್ಲಿ ಬಿಡುಗಡೆ ಆಗುವ ಸಂಭವ ಇದೆ.


Click it and Unblock the Notifications











