ನಾಳೆ ರಿಲೀಸ್ ಆಗುತ್ತೆ ದರ್ಶನ್ ಕುಣಿತದ ವಿಶೇಷ ಹಾಡು
ನಟ ದರ್ಶನ್ 'ಪ್ರೇಮ ಬರಹ' ಸಿನಿಮಾದ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಈ ಹಾಡು ನೋಡುವುದಕ್ಕೆ ಡಿ ಬಾಸ್ ಅಭಿಮಾನಿಗಳು ಕಾಯುತ್ತಿದ್ದರು. ಅದೇ ರೀತಿ ಈ ಹಾಡು ನಾಳೆ ಅಂದರೆ ಫೆಬ್ರವರಿ 1ಕ್ಕೆ ಬಿಡುಗಡೆಯಾಗುತ್ತಿದೆ.
'ಪ್ರೇಮ ಬರಹ' ಸಿನಿಮಾದ ವಿಶೇಷ ಹಾಡು ಇದಾಗಿದೆ. ಹಾಡಿನಲ್ಲಿ ದರ್ಶನ್ ಮಾತ್ರವಲ್ಲದೆ ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ನಟಿಸಿದ್ದಾರೆ. ಆಂಜನೇಯನ ಪರಮಭಕ್ತರಾಗಿರುವ ಸರ್ಜಾ ಕುಟುಂಬ ಈ ಹಾಡನ್ನು ಆಂಜನೇಯನ ಕುರಿತು ಚಿತ್ರೀಕರಣ ಮಾಡಿತ್ತು. ಹಾಡಿನ ರಿಲೀಸ್ ವಿಷಯವನ್ನು ಅರ್ಜುನ್ ಸರ್ಜಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ಪ್ರೇಮ ಬರಹ' ಸಿನಿಮಾದ ಮೂಲಕ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಐಶ್ವರ್ಯ ಜೊತೆಗೆ ಚಂದನ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮಗಳ ಸಿನಿಮಾಗೆ ಅರ್ಜುನ್ ಸರ್ಜಾ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಫೆಬ್ರವರಿ 9ಕ್ಕೆ ರಿಲೀಸ್ ಆಗಲಿದೆ. ವಿಶೇಷ ಅಂದರೆ ಅದೇ ದಿನ ಚಿರಂಜೀವಿ ಸರ್ಜಾ ಅವರ 'ಸಂಹಾರ' ಚಿತ್ರ ಕೂಡ ಬಿಡುಗಡೆಯಾಗುತ್ತಿದೆ.


Click it and Unblock the Notifications











