»   » ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಇನ್ನೊಂದು ವಿಡಿಯೋ ವೈರಲ್

ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್ ಇನ್ನೊಂದು ವಿಡಿಯೋ ವೈರಲ್

Posted By:
Subscribe to Filmibeat Kannada

ಕಣ್ಸನ್ನೆ ಮೂಲಕ ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋರಾತ್ರಿ ಸ್ಟಾರ್ ಆಗಿದ್ದರು. 'ಒರು ಆದಾರ್ ಲವ್' ಎಂಬ ಮಲಯಾಳಂ ಚಿತ್ರದ ಟೀಸರ್ ನಲ್ಲಿ ಕಣ್ಣು ಮಿಟಿಕಿಸಿ ಪಡ್ಡೆ ಹುಡುಗರ ಹೃದಯಕ್ಕೆ ಕಲ್ಲು ಹೊಡೆದಿದ್ದರು. ಈ ಒಂದು ಲುಕ್ ಗೆ ಎಲ್ಲರೂ ಫಿದಾ ಆಗಿಬಿಟ್ಟಿದ್ದರು.

ಇದೀಗ, ಪ್ರಿಯಾ ವಾರಿಯರ್ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಆದ್ರೆ, ಈ ಬಾರಿ ಕಣ್ಸನ್ನೆ ಮಾಡಿಲ್ಲ, ತಮ್ಮ ಮಧುರವಾದ ಕಂಠದಿಂದ ಒಂದೊಳ್ಳೆ ಹಾಡನ್ನ ಹಾಡಿದ್ದಾರೆ.

ಇಷ್ಟೆಲ್ಲಾ ಸಂಚಲನ ಸೃಷ್ಟಿಸಿದ ಕಣ್ಸನ್ನೆ ಹುಡುಗಿಗೆ ಇನ್ನೊಂದು ಆಸೆ ಇದೆಯಂತೆ.!

'ಕಭಿ ಅಲ್ವಿದ ನಾ ಕೆಹನಾ' ಚಿತ್ರದ ಟೈಟಲ್ ಹಾಡನ್ನು ಪ್ರಿಯಾ ಪ್ರಕಾಶ್ ಹಾಡಿದ್ದು, ತಾನೊಬ್ಬ ಉತ್ತಮ ಗಾಯಕಿ ಎಂದು ತೋರಿಸಿಕೊಂಡಿದ್ದಾರೆ. ಹೌದು, ನಟನೆಯ ಜೊತೆ ಗಾಯನದಲ್ಲೂ ಆಸಕ್ತಿ ಹೊಂದಿರುವ ಪ್ರಿಯಾ, ಕೆಲವು ಟಿವಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ.

ಪ್ರಿಯಾ ಪ್ರಕಾಶ್ ವಾರಿಯರ್ ಗೆ ರಿಲೀಫ್ ನೀಡಿದ ಸುಪ್ರೀಂಕೋರ್ಟ್

ಇತ್ತೀಚಿಗಷ್ಟೆ ತೆಲುಗು ನಟ ಅಲ್ಲು ಅರ್ಜುನ್ ಮತ್ತು ಅವರ ಮಗ ಪ್ರಿಯಾ ಪ್ರಕಾಶ್ ಅವರ ವಿಡಿಯೋಗೆ ಡಬ್ ಸ್ಮ್ಯಾಶ್ ಮಾಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿಕೊಂಡಿತ್ತು.

English summary
Internet sensation Priya Prakash Varrier Priya singing ‘Kabhi Alvida Naa Kehna’ song from Karan Johar’s film by the same name. The caption to the video shared by Priya’s fan club says ‘History never really says goodbye. History says, ‘See you later.’

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada