"ಅಪ್ಪು ಜೊತೆ ಕುಣಿದಿದ್ದಕ್ಕೆ ಶಾರುಖ್ ಸಿನ್ಮಾ ಛಾನ್ಸ್ ಸಿಕ್ತು": ಪ್ರಿಯಾಮಣಿ ಹೇಳಿದ ಸಾಂಗ್ ಯಾವ್ದು?

ಶಾರುಖ್ ಖಾನ್ ನಟನೆಯ 'ಜವಾನ್' ಚಿತ್ರದಲ್ಲಿ ನಟಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸ್ತಿದ್ದಾರೆ. ಈ ಹಿಂದೆ 'ಚೆನ್ನೈ ಎಕ್ಸ್‌ಪ್ರೆಸ್' ಚಿತ್ರದಲ್ಲಿ ಕಿಂಗ್ ಖಾನ್ ಜೊತೆ ಪ್ರಿಯಾ ಬಿಂದಾಸ್ ಹೆಜ್ಜೆ ಹಾಕಿ ಗೆದ್ದಿದ್ದರು. ಆ ಅವಕಾಶ ಸಿಕ್ಕಿದ್ದು ಹೇಗೆ ಎನ್ನುವುದನ್ನು ಆಕೆ ಈಗ ವಿವರಿಸಿದ್ದಾರೆ. ಅದಕ್ಕೆ ಅಪ್ಪು ಜೊತೆಗಿನ ಸಿನಿಮಾ ಸಾಂಗ್ ಕಾರಣ ಎಂದಿದ್ದಾರೆ.

ಬಹುಭಾಷಾ ನಟಿ ಪ್ರಿಯಾಮಣಿ ಒಳ್ಳೆ ಡ್ಯಾನ್ಸರ್ ಕೂಡ ಹೌದು. ಬಿಂದಾಸ್ ಡ್ಯಾನ್ಸ್‌ನಿಂದ ಅಭಿಮಾನಿಗಳನ್ನು ರಂಜಿಸುತ್ತಾ ಬರ್ತಿದ್ದಾರೆ. ಮದುವೆ ನಂತರ ಕೂಡ ಆಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿರುತೆರೆ ಡ್ಯಾನ್ಸ್ ಶೋಗಳಲ್ಲಿ ತೀರ್ಪುಗಾರ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕನ್ನಡದ 'ಕೈಮರ', ಬಾಲಿವುಡ್‌ನ 'ಮೈದಾನ್, 'ಜವಾನ್', ತಮಿಳಿನ 'ಕ್ವಾಂಟಿನೇಷನ್ ಗ್ಯಾಂಗ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.

Priyamani Got Shahrukh khan movie because of Puneeth Rajkumar Song

'ಚೆನ್ನೈ ಎಕ್ಸ್‌ಪ್ರೆಸ್‌' ಚಿತ್ರದಲ್ಲಿ ಶಾರುಖ್‌ ಖಾನ್ ಜೊತೆ 'ವನ್ ಟು ತ್ರಿ ಫೋರ್' ಸಾಂಗ್‌ನಲ್ಲಿ ಪ್ರಿಯಾಮಣಿ ಹೆಜ್ಜೆ ಹಾಕಿದ್ದನ್ನು ಯಾರು ಮರೆತ್ತಿಲ್ಲ. ಇತ್ತೀಚೆಗೆ ಬಾಲಿವುಡ್ ಯೂಟ್ಯೂಬ್ ಸಂದರ್ಶನದಲ್ಲಿ ಆ ಅವಕಾಶ ಅರಸಿ ಬಂದಿದ್ದು ಹೇಗೆ ಎನ್ನುವುದನ್ನು ಆಕೆ ಹೇಳಿದ್ದಾರೆ. ಮೊದಲ ಬಾರಿಗೆ ನಿರ್ದೇಶಕ ರೋಹಿತ್ ಶೆಟ್ಟಿ ಆಫೀಸ್‌ನಿಂದ ಕರೆ ಬಂತು. ನಾನು ನಂಬಲೇ ಇಲ್ಲ, ಯಾರೋ ಪ್ರಾಂಕ್ ಕಾಲ್ ಮಾಡಿದ್ದಾರೆ ಎಂದುಕೊಂಡೆ. ನಂತರ ಮ್ಯಾನೇಜರ್‌ನ ಕೇಳಿ ಖಚಿತಪಡಿಸಿಕೊಂಡೆ ಎಂದಿದ್ದಾರೆ.

"ಮೊದಲಿಗೆ ಸಿನಿಮಾ ಅಲ್ಲ, ಒಂದು ಸಾಂಗ್‌ನಲ್ಲಿ ಹೆಜ್ಜೆ ಹಾಕಬೇಕು ಎಂದರು. ಸರಿ ಎಂದೆ. ನಂತರ ಶಾರುಖ್ ಖಾನ್ ಜೊತೆ ಹೇಳುತ್ತಿದ್ದಂತೆ ನಾನು ಶಾಕ್ ಆಗಿದ್ದೆ. ಕಿಂಗ್‌ ಖಾನ್ ಜೊತೆ ನಟಿಸೋದು ನನ್ನ ಕನಸು. ಅಂತಹ ವ್ಯಕ್ತಿ ಜೊತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಅವಕಾಶ ಎಂದಾಗ ಬಹಳ ಖುಷಿಯಾಗಿತ್ತು. ಕೊನೆಗೆ ಮುಂಬೈಗೆ ಹೋಗಿ ರೋಹಿತ್ ಶೆಟ್ಟಿ ಕಛೇರಿಯಲ್ಲಿ ಅವರನ್ನು ಭೇಟಿಯಾಗಿದ್ದೆ"

Priyamani Got Shahrukh khan movie because of Puneeth Rajkumar Song

"ನನಗೆ ಕರೆ ಬರುವುದಕ್ಕೂ ಮುನ್ನ ನಾನು 'ಚೆನ್ನೈ ಎಕ್ಸ್‌ಪ್ರೆಸ್‌' ಸಿನಿಮಾ ಪೋಸ್ಟರ್ ನೋಡಿದ್ದೆ. ಶಾರುಖ್ ಹಾಗೂ ದೀಪಿಕಾ ಪಡುಕೋಣೆ ನಟಿಸ್ತಿದ್ದಾರೆ ಎಂದು ಗೊತ್ತಿತ್ತು. ನಂತರ ರೋಹಿತ್ ಶೆಟ್ಟಿ ಅವರು ಈ ಸಿನಿಮಾದಲ್ಲಿ ಒಂದು ಸಾಂಗ್ ಇದೆ. ನೀವು ಮಾಡಬೇಕು ಎಂದರು. ನಾನು ಮಾಡ್ಬೇಕಾ? ಎಂದು ಕೇಳಿದೆ. ಹೌದು ಎಂದರು. ನನಗೆ ಅಚ್ಚರಿ ಆಯಿತು. ನನ್ನನ್ನು ಕರೆದು ಯಾಕೆ ಈ ಅವಕಾಶ ಕೊಡ್ತಿದ್ದೀರಾ? ಎಂದು ಕೇಳಿದ್ದೆ"

"ನೀವು ಡ್ಯಾನ್ಸ್ ಮಾಡಿರುವ ವಿಡಿಯೋ ನೋಡಿದ್ವಿ, ಅದನ್ನು ನೋಡಿ ನೀವು ಈ ಸಾಂಗ್‌ನಲ್ಲಿ ಡ್ಯಾನ್ಸ್ ಮಾಡಬಹುದು ಎನಿಸಿತು ಎಂದರು. ಅದು ನಾನು ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದ ಸಿನಿಮಾ ಸಾಂಗ್. ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ. ಅವರಂದ್ರೆ ನನಗೆ ಬಹಳ ಇಷ್ಟ. ಅವರ ನಗು ಮರೆಯೋಕೆ ಸಾಧ್ಯವಿಲ್ಲ. ನೀವು, ಪುನೀತ್ ರಾಜ್‌ಕುಮಾರ್ ಹೆಜ್ಜೆ ಹಾಕಿರುವ ಸಾಂಗ್‌ ಯೂಟ್ಯೂಬ್‌ನಲ್ಲಿ ನೋಡಿದ್ವಿ. ನೀವು ನಿಜಕ್ಕೂ ಚೆನ್ನಾಗಿ ಡ್ಯಾನ್ಸ್ ಮಾಡಿದ್ದೀರ ಎಂದರು. ನಾನು ಥ್ಯಾಂಕ್ಯೂ ಎಂದೆ" ಎಂದಿದ್ದಾರೆ. ಸದ್ಯ ಪ್ರಿಯಾಮಣಿ 'ರಾಮ್‌' ಚಿತ್ರದ 'ಹೊಸ ಗಾನಬಜಾನ' ಹೇಳಿದ್ದಾರೆ ಎಂದು ಕೆಲವರು ಊಹಿಸುತ್ತಿದ್ದಾರೆ.

"ನಿಮ್ಮ ಹಾಗೂ ರಾಹುಲ್(ಶಾರುಖ್) ನಡುವಿನ ಸಾಂಗ್ ಇದು. ನೀವು ಡ್ಯಾನ್ಸ್ ಮಾಡಬೇಕು ಎಂದರು. ಶಾರುಖ್ ಜೊತೆ ಡ್ಯಾನ್ಸ್ ಎನ್ನುತ್ತಿದ್ದಂತೆ ನನಗೆ ಮತ್ತಷ್ಟು ಖುಷಿಯಾಯಿತು. ಸರಿ ಎಂದೆ. ಅವರು ಹಾಡಿನ ಬಗ್ಗೆ ಎಲ್ಲಾ ಹೇಳಿದರು. ಕೊನೆಗೆ ನಿಮಗೇನಾದರೂ ಪ್ರಶ್ನೆ ಇದ್ದರೆ ಕೇಳಿ ಎಂದರು. ನಾನು ನಾಮಕಾವಸ್ಥೆಗೆ ನಾಯಕ-ನಾಯಕಿ ಹಿಂದೆ ಡ್ಯಾನ್ಸ್ ಮಾಡುವಂತಿದ್ದರೆ ಬೇಡ ಎಂದೆ. ಕೂಡಲೇ ಅವರು ಈ ಸಾಂಗ್‌ನಲ್ಲಿ ನೀವು- ಶಾರುಖ್ ಡ್ಯಾನ್ಸ್ ಮಾಡ್ತೀರಾ. ದೀಪಿಕಾ ಇರಲ್ಲ ಎಂದರು. ಕೂಡಲೇ ನಾನು ಸರಿ ಎಂದು ಒಪ್ಪಿಕೊಂಡೆ" ಎಂದು ವಿವರಿಸಿದ್ದಾರೆ.

More from Filmibeat

English summary
Priyamani Got Shahrukh khan movie because of Puneeth Rajkumar Song. she Reveals the Truth behind Her Role in Chennai Express Connected with Puneeth Rajkumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X