'ಅಡಚಣೆಗಾಗಿ ಕ್ಷಮಿಸಿ' ಚಿತ್ರಕ್ಕೆ ದನಿಯಾದ ನಿರ್ಮಾಪಕ ಸದ್ಗುಣ ಮೂರ್ತಿ.!

'ಅಡಚಣೆಗಾಗಿ ಕ್ಷಮಿಸಿ' ಚಿತ್ರಕ್ಕಾಗಿ ಭರತ್ ನಾವುಂದ ಅವರು ಬರೆದಿರುವ 'ಇದು ಬ್ರಹ್ಮನ ಹಿಡಿ ಶಾಪಾನ...' ಈ ಹಾಡನ್ನು ಹಿರಿಯ ಸಂಗೀತ ನಿರ್ದೇಶಕರು ಹಾಗೂ ಈ ಚಿತ್ರದ ನಿರ್ಮಾಪಕರೂ ಆದ ಸದ್ಗುಣ ಮೂರ್ತಿ ಹಾಡಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರದೀಪ್ ವರ್ಮ ಅವರ ತಂದೆಯಾದ ಸದ್ಗುಣ ಮೂರ್ತಿ ಕನ್ನಡದ ಸಾಕಷ್ಟು ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಈ ಹಿಂದೆ ನವರಸ ನಾಯಕ ಜಗ್ಗೇಶ್ ಅಭಿನಯದ 'ವೀರಣ್ಣ' ಚಿತ್ರಕ್ಕೆ ಹಾಡಿದ ಬಳಿಕ ಇದೀಗ ತಮ್ಮ ಮಗ ಪ್ರದೀಪ್ ವರ್ಮ ಅಭಿನಯಿಸಿರುವ 'ಅಡಚಣೆಗಾಗಿ ಕ್ಷಮಿಸಿ' ಚಿತ್ರಕ್ಕಾಗಿ ಸದ್ಗುಣ ಮೂರ್ತಿ ಹಾಡಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಮಾರ್ಚ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಕಳೆದ ಹನ್ನೆರಡು ವರ್ಷಗಳಿಂದ ಎಸ್.ಮಹೇಂದರ್, ಪಿ.ಎನ್.ಸತ್ಯ ಮುಂತಾದವರ ಜೊತೆ ಕೆಲಸ ಮಾಡಿ ಅನುಭವವಿರುವ ಭರತ್ ನಾವುಂದ್ ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ಗೀತರಚನೆ ಮಾಡಿರುವ ಭರತ್ ಸಾಹಸ ನಿರ್ದೇಶನವನ್ನೂ ಮಾಡಿದ್ದಾರೆ.

Producer Sadguna Murthy sings for Kannada Film Adachanegagi Kshamisi

ಸೈಕಲಾಜಿಕಲ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರಕ್ಕೆ ಮಡಿಕೇರಿಯಲ್ಲಿ 22 ದಿನಗಳು ಹಾಗೂ ಬೆಂಗಳೂರಿನಲ್ಲಿ 10 ದಿನಗಳ ಚಿತ್ರೀಕರಣ ನಡೆದಿದೆ.

ಐದು ಹಾಡುಗಳಿರುವ ಈ ಚಿತ್ರಕ್ಕೆ ಎಸ್.ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ಕಳೆದ 20ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೀಬೋರ್ಡ್ ವಾದಕರಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರದೀಪ್ ವರ್ಮ, ಕಾವೇರಿ ನಗರ, ಸ್ಟೈಲ್ ಕಿಂಗ್, ದಿ ಟೆರರಿಸ್ಟ್ ಮುಂತಾದ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ರವಿವರ್ಮ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನ ಈ ಚಿತ್ರಕ್ಕಿದೆ.

ಸಂಗೀತ ನಿರ್ದೇಶಕ ಎಸ್.ಪ್ರದೀಪ್ ವರ್ಮ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಶಿವಮಂಜು, ಕೆ.ಎಸ್.ಶ್ರೀಧರ್, ಶ್ರೀನಿವಾಸಪ್ರಭು, ಅರ್ಪಿತಾ ಗೌಡ, ಮೇಘ, ವಿದ್ಯಾ ಕುಲಕರ್ಣಿ, ಶ್ರೀನಿವಾಸ್, ಸುಶೀಲ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಮಧುಸೂಧನ್, ಶ್ರೀನಿವಾಸ್, ಭಾರ್ಗವಿ ಕಿಶೋರ್, ನಾಗೇಶ್ ಕುಮಾರ್ ಈ ಚಿತ್ರದ ಸಹ ನಿರ್ಮಾಪಕರು.

More from Filmibeat

English summary
Producer Sadguna Murthy sings for Kannada Film Adachanegagi Kshamisi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X