For Quick Alerts
  ALLOW NOTIFICATIONS  
  For Daily Alerts

  ಪಬ್‌ಗಳಲ್ಲಿ ಕನ್ನಡ ಹಾಡು ಏಕಿಲ್ಲ? ಚಂದನ್ ಶೆಟ್ಟಿ ಆಕ್ರೋಶ

  |

  Rapper ಚಂದನ್ ಶೆಟ್ಟಿ ಸಿಟ್ಟಾಗಿದ್ದಾರೆ. ಪಬ್‌ಗಳ ಕನ್ನಡ ವಿರೋಧಿ ಧೋರಣೆಯೇ ಅವರ ಸಿಟ್ಟಿಗೆ ಕಾರಣ. ರಾಜ್ಯದ ಪ್ರಮುಖ ನಗರಗಳ ಪಬ್‌ಗಳಲ್ಲಿ ಕನ್ನಡ ಹಾಡುಗಳನ್ನು ಏಕೆ ಹಾಕುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ ಚಂದನ್ ಶೆಟ್ಟಿ.

  ಕೆಲವು ದಿನಗಳ ಹಿಂದಷ್ಟೆ ಚಂದನ್ ಶೆಟ್ಟಿ ಪಬ್ ಒಂದಕ್ಕೆ ಹೋಗಿದ್ದರಂತೆ, ಅಲ್ಲಿ ಕನ್ನಡ ಹಾಡನ್ನು ಪ್ಲೇ ಮಾಡಿರಲಿಲ್ಲ. ಇದನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಮೊದಲಿಗೆ ಕನ್ನಡ ಹಾಡು ಹಾಕಲು ಸಾಧ್ಯವಿಲ್ಲ ಎಂದ ಪಬ್‌ನವರು ಕೊನೆಗೆ ಕನ್ನಡ ಹಾಡನ್ನು ಹಾಕಿದ್ದಾರೆ. ಇದರ ವಿಡಿಯೋವನ್ನು ಸಹ ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಂ ನಲ್ಲಿ ಹಾಕಿಕೊಂಡಿದ್ದಾರೆ.

  'ಕನ್ನಡ ಹಾಡುಗಳನ್ನು ಪ್ಲೇ ಮಾಡಿದರೆ ತಮ್ಮ ಪಬ್‌ನ ಮೌಲ್ಯ ಕಡಿಮೆ ಆಗುತ್ತದೆ ಎಂಬುದು ಕೆಲವು ಪಬ್‌ಗಳ ಧೋರಣೆ, ಇವರಿಗೆ ಪಬ್ ಕಟ್ಟಲು ಕನ್ನಡದ ಜನ ಬೇಕು, ಕನ್ನಡಿಗರ ದುಡ್ಡು ಬೇಕು ಆದರೆ ಕನ್ನಡದ ಹಾಡು ಹಾಕಲು ಇವರಿಗೆ ಅವಮಾನ' ಎಂದಿದ್ದಾರೆ ಚಂದನ್ ಶೆಟ್ಟಿ.

  'ಬೇರೆ ಭಾಷೆ ಹಾಡುಗಳ ಜೊತೆ ಕನ್ನಡ ಹಾಡನ್ನೂ ಹಾಕಿ'

  'ಬೇರೆ ಭಾಷೆ ಹಾಡುಗಳ ಜೊತೆ ಕನ್ನಡ ಹಾಡನ್ನೂ ಹಾಕಿ'

  'ಬೆಂಗಳೂರು ಮೆಟ್ರೋ ಪಾಲಿಟಿನ್ ಸಿಟಿ ಆಗಿದೆ. ಹೌದು, ಇಲ್ಲಿಗೆ ಬೇರೆ ಬೇರೆ ರಾಜ್ಯದ, ದೇಶದ ಜನ ಬಂದಿದ್ದಾರೆ. ಬೇರೆ ಭಾಷೆಗಳ ಹಾಡನ್ನೂ ಪಬ್‌ಗಳಲ್ಲಿ ಪ್ರಸಾರ ಮಾಡಿ ಆದರೆ ಜೊತೆಗೆ ಕನ್ನಡದ ಹಾಡುಗಳನ್ನು ಸಹ ಪ್ರಸಾರ ಮಾಡಿ, ಕನ್ನಡ ಹಾಡಿನಿಂದ ಪಬ್‌ನ ಮೌಲ್ಯಕ್ಕೆ ಧಕ್ಕೆ ಎಂಬ ಮನಸ್ಥಿತಿಯಿಂದ ಪಬ್‌ಗಳ ವ್ಯವಸ್ಥಾಪಕರು ಹೊರಬನ್ನಿ' ಎಂದಿದ್ದಾರೆ ಚಂದನ್ ಶೆಟ್ಟಿ.

  'ಪಬ್‌ ವಾತಾವರಣಕ್ಕೆ ಹೊಂದಿಕೆ ಆಗುವ ಹಾಡುಗಳು ಕನ್ನಡದಲ್ಲಿವೆ'

  'ಪಬ್‌ ವಾತಾವರಣಕ್ಕೆ ಹೊಂದಿಕೆ ಆಗುವ ಹಾಡುಗಳು ಕನ್ನಡದಲ್ಲಿವೆ'

  ಕನ್ನಡದಲ್ಲಿ ಮಿಲಿಯನ್‌ ಗಟ್ಟಲೆ ವೀವ್ಸ್ ಪಡೆದಿರುವ ಹಾಡುಗಳಿವೆ, ಪಬ್‌ ಆಂಬಿಯನ್ಸ್‌ ಗೆ ಹೊಂದುವ ಹಲವಾರು ಹಾಡುಗಳಿವೆ, ಆಲ್‌ ಓಕೆ ಸೇರಿ ಹಲವಾರು ರ್ಯಾಪರ್‌ಗಳು ಕನ್ನಡದಲ್ಲಿದ್ದಾರೆ ಅವರ ಹಾಡುಗಳನ್ನು ಹಾಕಿ ಎಂದು ಮನವಿ ಮಾಡಿದ್ದಾರೆ ಚಂದನ್ ಶೆಟ್ಟಿ.

  ಕನ್ನಡದ ಹಾಡುಗಳಿಗೆ ವೇದಿಕೆ ಸಿಗಬೇಕು: ಚಂದನ್ ಶೆಟ್ಟಿ

  ಕನ್ನಡದ ಹಾಡುಗಳಿಗೆ ವೇದಿಕೆ ಸಿಗಬೇಕು: ಚಂದನ್ ಶೆಟ್ಟಿ

  ನಾನು ಕಲಾವಿದರ ಪರವಾಗಿ ಮಾತನಾಡುತ್ತಿದ್ದೇನೆ. ಕನ್ನಡದ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗಲಿ ಎಂಬ ಕಾರಣಕ್ಕೆ ನಾನು ಮಾತನಾಡುತ್ತಿದ್ದೇನೆ. ಕನ್ನಡದ ಹಾಡುಗಳನ್ನು ಕಡೆಗಣಿಸುವ ಪಬ್‌ಗಳ ಧೋರಣೆಯನ್ನು ಕೊನೆ ಮಾಡಬೇಕಿದೆ ಎಂದಿದ್ದಾರೆ ಚಂದನ್ ಶೆಟ್ಟಿ.

  ಅವತ್ತು Dhruva Sarja, ಇವತ್ತು Karunya Ram | Filmibeat Kannada
  ಹೊಸ ರ್ಯಾಪ್ ಹಾಡು ಮಾಡಿದ್ದಾರೆ ಚಂದನ್ ಶೆಟ್ಟಿ

  ಹೊಸ ರ್ಯಾಪ್ ಹಾಡು ಮಾಡಿದ್ದಾರೆ ಚಂದನ್ ಶೆಟ್ಟಿ

  ಚಂದನ್ ಶೆಟ್ಟಿ ಹಲವು ರ್ಯಾಪ್ ಹಾಡುಗಳನ್ನು ಮಾಡಿದ್ದಾರೆ. ಅವರ ಹಾಡುಗಳು ಕೆಲವು ಪಬ್‌ಗಳಲ್ಲಿ ಪ್ರಸಾರ ಸಹ ಆಗಿವೆ. ಇತ್ತೀಚೆಗಷ್ಟೆ ನ್ಯೂ ಇಯರ್ ಕುರಿತಾದ ಪಾರ್ಟಿ ರ್ಯಾಪ್ ಹಾಡೊಂದನ್ನು ಮಾಡಿದ್ದಾರೆ, ಅದು ಸಾಕಷ್ಟು ಮೆಚ್ಚುಗೆ ಗಳಿಸಿದೆ.

  English summary
  Rapper Chandan Shetty upset because pubs not playing Kannada songs. He said this should be end.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X