»   » ಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..

ಪುನೀತ್ 'ರಾಜಕುಮಾರ' ಹುಟ್ಟುಹಬ್ಬಕ್ಕೆ ಟಪ್ಪಾಂಗುಚ್ಚಿ ಗಿಫ್ಟ್: ಕುಣಿದು ಕುಪ್ಪಳಿಸಿ..

Posted By:
Subscribe to Filmibeat Kannada

ಕಳೆದ ವರ್ಷ.. ಇದೇ ದಿನ.. ಇದೇ ಸುಸಮಯ.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 41ನೇ ಜನ್ಮದಿನದ ಸಂಭ್ರಮದಂದು 'ಪವರ್'ಫುಲ್ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡ್ಬೇಕು ಅಂತ ಕಾದು ಕುಳಿತಿದ್ದ ನಿರ್ದೇಶಕ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಅಂದು 'ರಾಜಕುಮಾರ' ಪೋಸ್ಟರ್ ಟಾಪ್ ಟ್ರೆಂಡಿಂಗ್ ನಲ್ಲಿತ್ತು.[ಅಪ್ಪು ಹುಟ್ಟುಹಬ್ಬಕ್ಕೆ ಇದಕ್ಕಿಂತ ಉಡುಗೊರೆ ಬೇಕಾ?]

ಇಂದು ಅದೇ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ 'ರಾಜಕುಮಾರ' ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕುಣಿದು ಕುಪ್ಪಳಿಸಿರುವ ಟಪ್ಪಾಂಗುಚ್ಚಿ ಹಾಡೊಂದನ್ನ ಅಪ್ಪು ರವರ 42ನೇ ಬರ್ತಡೇ ಪ್ರಯುಕ್ತ ಬಿಡುಗಡೆ ಮಾಡಿದ್ದಾರೆ.

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜನ್ಮದಿನ

ಸ್ಯಾಂಡಲ್ ವುಡ್ ನ 'ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಇಂದು ತಮ್ಮ 42ನೇ ವರ್ಷದ ಹುಟ್ಟುಹಬ್ಬವನ್ನ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದಾರೆ. ಅಪ್ಪು ಜನ್ಮದಿನ ಸಡಗರಕ್ಕೆ ಇನ್ನಷ್ಟು ಮೆರಗು ನೀಡಲು 'ರಾಜಕುಮಾರ' ಚಿತ್ರದ ಸಾಂಗ್ ಟೀಸರ್ ಬಿಡುಗಡೆ ಮಾಡಲಾಗಿದೆ.

ಬೊಂಬಾಟ್ ಸ್ಟೆಪ್ ಹಾಕಿದ್ದಾರೆ ಅಪ್ಪು

ಪಕ್ಕಾ ಲೋಕಲ್ ಬೀಟ್ ಗೆ ಪುನೀತ್ ಟಪ್ಪಾಂಗುಚ್ಚಿ ಸ್ಟೆಪ್ ಹಾಕಿರುವ 'ರಾಜಕುಮಾರ' ಚಿತ್ರದ 'ಅಪ್ಪು ಡ್ಯಾನ್ಸ್..' ಹಾಡಿನ ವಿಡಿಯೋ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಜಿಲೇಬಿಯಂತೆ ಸೇಲ್ ಆಗುತ್ತಿದೆ.

ಹಾಡು ನೋಡಿದ್ರಾ.?

ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ 'ಅಪ್ಪು ಡ್ಯಾನ್ಸ್...' ಹಾಡಿನ ವಿಡಿಯೋ ನೀವಿನ್ನೂ ನೋಡಿಲ್ಲ ಅಂದ್ರೆ, ಈ ಲಿಂಕ್ ಕ್ಲಿಕ್ ಮಾಡಿ... ನೋಡಿ... ಹಂಗೆ ಒಂದ್ ಸ್ಟೆಪ್ ಹಾಕಿಬಿಡಿ...

ಇದಕ್ಕಿಂತ ಉಡುಗೊರೆ ಬೇಕಾ.?

ಹೇಳಿಕೇಳಿ, ಅಪ್ಪು ಡ್ಯಾನ್ಸ್ ನಲ್ಲಿ 'ಮಿಸ್ಟರ್ ಪರ್ಫೆಕ್ಟ್'. ಹೀಗಿರುವಾಗ, ಅಪ್ಪು ಸೂಪರ್ ಆಗಿ ಸ್ಟೆಪ್ ಹಾಕಿರುವ ಹಾಡು ಹುಟ್ಟುಹಬ್ಬದಂದೇ ಔಟ್ ಆಗಿರುವಾಗ ಅಭಿಮಾನಿಗಳಿಗೆ ಬಂಪರ್ ಬಹುಮಾನ ಸಿಕ್ಕ ಹಾಗಾಗಿದೆ.

English summary
Power Star Puneeth Rajkumar is celebrating his 42nd Birthday today (March 17th). On this occasion, Appu's upcoming movie 'Raajakumara' song 'Appu Dance.. Dance' is out.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada