For Quick Alerts
  ALLOW NOTIFICATIONS  
  For Daily Alerts

  ಪುನೀತ್ ರಾಜ್ ಕುಮಾರ್-ಪ್ರಭುದೇವ ಕಡೆಯಿಂದ ಭರ್ಜರಿ ಸುದ್ದಿ

  |

  ಡ್ಯಾನ್ಸ್ ಅಂದ್ರೆ ಮೈಕಲ್ ಜಾಕ್ಸನ್, ಮೈಕಲ್ ಜಾಕ್ಸನ್ ಅಂದ್ರೆ ಡ್ಯಾನ್ಸ್. ಭಾರತಕ್ಕೆ ಪ್ರಭುದೇವ ಅವರೇ ಮೈಕಲ್ ಜಾಕ್ಸನ್. ಇಂದಿನ ಡ್ಯಾನ್ಸರ್‌ಗಳಿಗೆ ಪ್ರಭುದೇವ ಅವರೇ ಸ್ಫೂರ್ತಿ. ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನ ಬಹುತೇಕ ಸ್ಟಾರ್ ನಟರ ಚಿತ್ರಗಳಿಗೆ ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ.

  ಕನ್ನಡದ ಮಟ್ಟಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಡ್ಯಾನ್ಸ ಕಿಂಗ್. ಅಪ್ಪು ಡ್ಯಾನ್ಸ್ ಗೆ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸಹನಟರು ಸಹ ಪುನೀತ್ ಡ್ಯಾನ್ಸ್ ಬಗ್ಗೆ ಬಗ್ಗೆ ಖುಷಿ ಹಂಚಿಕೊಳ್ಳುತ್ತಾರೆ. ಇದೀಗ, ಇಂಡಿಯನ್ ಮೈಕಲ್ ಜಾಕ್ಸನ್ ಹಾಗೂ ಕನ್ನಡದ ಪವರ್ ಸ್ಟಾರ್ ಒಟ್ಟಿಗೆ ಡ್ಯಾನ್ಸ್ ಮಾಡುವ ಸಂದರ್ಭವೊಂದು ಒದಗಿಬಂದಿದೆ.

  ಅಲ್ಲು ಕುಟುಂಬಕ್ಕೆ ಸಾಥ್ ಕೊಡುತ್ತಾ ಸ್ಯಾಂಡಲ್‌ವುಡ್ ದೊಡ್ಮನೆ?ಅಲ್ಲು ಕುಟುಂಬಕ್ಕೆ ಸಾಥ್ ಕೊಡುತ್ತಾ ಸ್ಯಾಂಡಲ್‌ವುಡ್ ದೊಡ್ಮನೆ?

  ಹೌದು, ಪ್ರಭುದೇವರ ಅವರ ಕಿರಿಯ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಲಕ್ಕಿ ಮ್ಯಾನ್' ಸಿನಿಮಾದಲ್ಲಿ ಪ್ರಭುದೇವ ಮತ್ತು ಪುನೀತ್ ರಾಜ್ ಕುಮಾರ್ ಒಟ್ಟಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ನಟ-ನೃತ್ಯ ಸಂಯೋಜಕ ನಾಗೇಂದ್ರ ಪ್ರಸಾದ್ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ಸಿನಿಮಾ ಲಕ್ಕಿ ಮ್ಯಾನ್. ಕೃಷ್ಣ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಅತಿಥಿ ಪಾತ್ರದಲ್ಲಿ ಪುನೀತ್ ರಾಜ್ ಕುಮಾರ್ ಸಹ ಕಾಣಿಸಿಕೊಳ್ಳಲಿದ್ದಾರಂತೆ.

  ಪುನೀತ್ ರಾಜ್‌ಕುಮಾರ್ ಸರಳತೆಗೆ ಈ ಚಿತ್ರಕ್ಕಿಂತಲೂ ಸಾಕ್ಷಿ ಬೇಕೆಪುನೀತ್ ರಾಜ್‌ಕುಮಾರ್ ಸರಳತೆಗೆ ಈ ಚಿತ್ರಕ್ಕಿಂತಲೂ ಸಾಕ್ಷಿ ಬೇಕೆ

  ತಮಿಳಿನ 'ಓ ಮೈ ಕಡುವಲೇ' ಸಿನಿಮಾದಿಂದ ಪ್ರೇರಣೆ ಪಡೆದು ಕನ್ನಡದಲ್ಲಿ 'ಲಕ್ಕಿ ಮ್ಯಾನ್' ಸಿನಿಮಾ ಮಾಡಲಾಗುತ್ತಿದೆ. ಈ ಚಿತ್ರದ ವಿಶೇಷ ಹಾಡೊಂದರಲ್ಲಿ ಪ್ರಭುದೇವ ಮತ್ತು ಪುನೀತ್ ಡ್ಯಾನ್ಸ್ ಮಾಡುತ್ತಿದ್ದಾರೆ. ಜಾನಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡ್ತಿದ್ದು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ.

  Puneeth Rajkumar and Prabhu Deva will dance Together in first time

  ಕೃಷ್ಣ ಜೊತೆ ಸಂಗೀತ ಶೃಂಗೇರಿ, ರೋಷನಿ ಪ್ರಕಾಶ್ ಇಬ್ಬರು ನಾಯಕಿಯರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಹಾಡಿನೊಂದಿಗೆ ಕುಂಬಳಕಾಯಿ ಹೊಡೆಯುವ ಯೋಜನೆ ಇದೆ.

  ಅಂದ್ಹಾಗೆ, ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಇದಕ್ಕೂ ಮುಂಚೆ ಕನ್ನಡದಲ್ಲಿ 'ಮನಸೆಲ್ಲಾ ನೀನೇ' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಪ್ರಭುದೇವ ನಿರ್ದೇಶನದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು.

  ಉಪೇಂದ್ರ ನಟಿಸಿದ್ದ ಎಚ್‌2ಓ ಚಿತ್ರದೊಂದಿಗೆ ಕನ್ನಡಕ್ಕೆ ಬಂದಿದ್ದ ಪ್ರಭುದೇವ ನಂತರ ಮನಸೆಲ್ಲಾ ನೀನೆ, ಪ್ರಾರಂಭ, 1 2 3 ಅಂತಹ ಚಿತ್ರಗಳಲ್ಲಿ ನಟಿಸಿದ್ದರು. ಈಗ ಬಹಳ ವರ್ಷದ ನಂತರ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Puneeth Rajkumar and Prabhu Deva will be sharing screen space for the first time for a dance number in the film, directed by the latter’s younger brother Nagendra Prasad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X