ಪುನೀತ್-ಸಯೇಶಾ ಮಸ್ತ್ ಸ್ಟೆಪ್: ಊರಿಗೊಬ್ಬ ರಾಜ 'ಯುವರತ್ನ'ನಿಗೆ ಅಭಿಮಾನಿಗಳು ಫಿದಾ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷೆಯ ಯುವರತ್ನ ಸಿನಿಮಾದ ಮೋಸ್ಟ್ ಎಕ್ಸ್ ಪೆಕ್ಟೆಡ್ ಹಾಡು ರಿಲೀಸ್ ಆಗಿದೆ. ಊರಿಗೊಬ್ಬ ರಾಜ.. ಎನ್ನುವ ಸಾಲುಗಳಿಂದ ಪ್ರಾರಂಭವಾಗುವ ಹಾಡಿಗೆ ಪವರ್ ಸ್ಟಾರ್ ಮತ್ತು ಸಯೇಶಾ ಸೈಗಲ್ ಸಖತ್ ಸ್ಟೆಪ್ ಹಾಕಿದ್ದಾರೆ.

ಸದ್ಯ ಯುವರತ್ನ ಸಿನಿಮಾದಿಂದ ರಿಲೀಸ್ ಆಗಿರುವ ಹಾಡಿನಲ್ಲಿ ಡಾನ್ಸ್ ಸ್ಟೆಪ್ ಗಳೇ ಹೈಲೆಟ್. ಪವರ್ ಸ್ಟಾರ್ ಜೊತೆ ನಟಿ ಸಯೇಶಾ ಕೂಡ ಮಸ್ತ್ ಸ್ಟೆಪ್ ಹಾಕಿದ್ದಾರೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಮೂಡಿಬಂದಿರುವ ಊರಿಗೊಬ್ಬ ರಾಜ ಹಾಡು ಪವರ್ ಸ್ಟಾರ್ ಅಭಿಮಾನಿಗಳಿಗೆ ಕಿಕ್ಕೇರಿಸಿದೆ.

ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಮ್ಯಾ ಬೆಹರಾ ಧ್ವನಿ ನೀಡಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

Puneeth Rajkumar and Sayeshas Yuvaratnaa oorigobba Raja song release

ಅಂದಹಾಗೆ ಊರಿಗೊಬ್ಬ ರಾಜ ಹಾಡು ಕನ್ನಡದ ಜೊತೆಗೆ ತೆಲುಗಿನಲ್ಲೂ ತೆರೆ ಕಂಡಿದೆ. ತೆಲುಗು ವರ್ಷನ್ ಹಾಡಿಗೆ ಗಾಯಕಿ ರಮ್ಯಾ ಜೊತೆ ದಿನಕರ್ ಧ್ವನಿ ಗೂಡಿಸಿದ್ದಾರೆ. ಸೋಲ್ ಆಫ್ ಯುವರತ್ನ್ ಹಾಡನ್ನು ರಿಲೀಸ್ ಮಾಡುವುದಾಗಿ ಹೇಳಿ ಬಳಿಕ ತಾಂತ್ರಿಕ ಸಮಸ್ಯೆಯಿಂದ ಮುಂದಕ್ಕೆ ಹೋಗಿದೆ ಎಂದು ಹೇಳುವ ಮೂಲಕ ನಿರಾಸೆ ಮೂಡಿಸಿದ್ದ 'ಯುವರತ್ನ' ಟೀಂ ಕೊನೆಗೂ ಸಾಂಗ್ ಬಿಡುಗಡೆ ಮಾಡಿ ಅಭಿಮಾನಿಗಳ ಮನತಣಿಸಿದ್ದಾರೆ.

ಪುನೀತ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದಹಾಗೆ ಚಿತ್ರದಲ್ಲಿ ನಟಿ ಸೋನು ಗೌಡ, ರಾಧಿಕಾ ಶರತ್ ಕುಮಾರ್, ಕಾವ್ಯಾ ಶೆಟ್ಟಿ, ಧನಂಜಯ್, ಪ್ರಕಾಶ್ರೈ ಸೇರಿದಂತೆ ಕಲಾವಿದರ ಬಳಗವೇ ಇದೆ.

More from Filmibeat

English summary
Puneeth Rajkumar and Sayesha Saigal starrer Yuvaratnaa movie oorigobba Raja song released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X