'ರುದ್ರತಾಂಡವ'ದಲ್ಲಿ ಪವರ್ ಸ್ಟಾರ್ ಪುನೀತ್ ಗಾನಸುಧೆ

By Harshitha

ತೆರೆ ಮೇಲೆ 'ಪವರ್' ತೋರಿಸಿ ಬಾಕ್ಸಾಫೀಸ್ ಲೂಟಿ ಹೊಡೆಯೋದು ಮಾತ್ರ ಅಲ್ಲ, ತೆರೆ ಹಿಂದೆ ಕೂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಂಚಿನ ಕಂಠಕ್ಕೆ, ಸ್ಯಾಂಡಲ್ ವುಡ್ ನಲ್ಲಿ ಡಿಮಾಂಡೋ ಡಿಮಾಂಡು.

ಪುನೀತ್ ವಾಯ್ಸ್ ನಲ್ಲಿರುವ ಕಿಕ್ ಗೆ ಈಗಾಗ್ಲೇ ಅದೆಷ್ಟೋ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಅದಕ್ಕೆ 'ಅಧ್ಯಕ್ಷ' ಚಿತ್ರದ ಟೈಟಲ್ ಸಾಂಗ್, 'ಕೃಷ್ಣಲೀಲಾ' ಚಿತ್ರದ 'ಪೆಸಲ್ ಮ್ಯಾನ್', ತಿರುಪತಿ ಎಕ್ಸ್ ಪ್ರೆಸ್ ಚಿತ್ರದ 'ನಾನು ರೈಟಾ', 'ಪವರ್ ***' ಚಿತ್ರದ 'ಗುರುವಾರ ಸಂಜೆ' ಹಾಡುಗಳೇ ಉತ್ತಮ ಉದಾಹರಣೆ. [ನಿರ್ಮಾಪಕ ಅಜೇಯ್ ರಾವ್ ಜೇಬು ಖಾಲಿ ಖಾಲಿ!]

Puneeth Rajkumar1

ನಟನಾಗಿ ಮಾತ್ರವಲ್ಲದೇ, ಗಾಯಕನಾಗಿಯೂ ಲೀಡಿಂಗ್ ನಲ್ಲಿರುವ ಅಪ್ಪು, ಇದೀಗ ಮತ್ತೊಂದು ಹಾಡಿಗೆ ದನಿಯಾಗಿದ್ದಾರೆ. ಚಿರಂಜೀವಿ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ ನಟಿಸುತ್ತಿರುವ 'ರುದ್ರತಾಂಡವ' ಚಿತ್ರಕ್ಕೆ ಅಪ್ಪು ಗಾನಸುಧೆ ಹರಿಸಿದ್ದಾರೆ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ? ]

ಟೀಚರ್ ರಾಧಿಕಾ ಮೇಡಂ ಗೆ ಕ್ಲೀನ್ ಬೌಲ್ಡ್ ಆಗುವ ಚಿರು, ಪ್ರೇಮದ ಅಮಲಿನಲ್ಲಿ ತೇಲುವ ವೇಳೆ ಬರುವ ಹಾಡಿಗೆ ಪುನೀತ್ ದನಿಯಾಗಿದ್ದಾರೆ. ''ಒಂದೂರಲ್ಲಿ ಒಬ್ಬ ಹುಡುಗ ಇದ್ದ, ಅವನು ಮಿಡ್ಲ್ ಕ್ಲಾಸ್ ಸ್ಕೂಲ್ ಮೇಡಂ ಹಿಂದೆ ಬಿದ್ದ'' ಅನ್ನುವ ಹಾಡಿಗೆ ಅಪ್ಪು ಹಾಡಿದ್ದಾರೆ.

Puneeth Rajkumar2

''ಇದೊಂಥರ ಚುಡಾಯಿಸುವಂತಹ ಹಾಡು. ರಾಧಿಕಾ ಹಿಂದೆ ಚಿರು ಬಿದ್ದಾಗ 'ಮದರಂಗಿ' ಕೃಷ್ಣ ಮತ್ತು ಚಿಕ್ಕಣ್ಣ ಚಿರುಗೆ ಕೆಣಕುವಾಗ ಬರುವ ಹಾಡಿದು. ಲಿರಿಕ್ಸ್ ತುಂಬಾನೇ ಸಿಂಪಲ್ ಆಗಿದೆ. ವಾಯ್ಸ್ ಕೂಡ ಅಷ್ಟೇ ಸಿಂಪಲ್ಲಾಗಿರ್ಬೇಕು. ಜನಕ್ಕೆ ರೀಚ್ ಆಗ್ಬೇಕು ಅಂತ ಅಪ್ಪು ಸರ್ ಕೈಲಿ ಹಾಡಿಸಿದ್ವಿ. ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ'' ಅಂತ 'ರುದ್ರತಾಂಡವ' ಚಿತ್ರದ ನಿರ್ದೇಶಕ ಗುರುದೇಶ್ ಪಾಂಡೆ 'ಫಿಲ್ಮಿಬೀಟ್ ಕನ್ನಡ'ಗೆ ಹೇಳಿದ್ದಾರೆ.

ಯುವ ಪ್ರತಿಭೆ ಪುನೀತ್ ಬರೆದಿರುವ ಸಾಹಿತ್ಯಕ್ಕೆ ಪುನೀತ್ ರಾಜ್ ಕುಮಾರ್ ಗಾಯನ ವಿ.ಹರಿಕೃಷ್ಣ ಸಂಗೀತದಲ್ಲಿ ಸೊಗಸಾಗಿ ಮೂಡಿಬಂದಿದೆ. ಮೊನ್ನೆಯಷ್ಟೇ ಅಶ್ವಿನಿ ಸ್ಟುಡಿಯೋದಲ್ಲಿ ರೆಕಾರ್ಡಿಂಗ್ ನಡೆದಿದ್ದು, ಜನವರಿಯಲ್ಲಿ ಚಿತ್ರದ ಆಡಿಯೋ ರಿಲೀಸ್ ಆಗಲಿದೆ. [ಚಿರು, ರಾಧಿಕಾ 'ರುದ್ರ ತಾಂಡವ' ಭರ್ಜರಿ ಕ್ಲೈಮಾಕ್ಸ್]

Puneeth Rajkumar3

ಈಗಾಗ್ಲೇ 'ರುದ್ರತಾಂಡವ' ಚಿತ್ರದ ಟ್ರೇಲರ್ ಗಾಂಧಿನಗರದ ಮೂಲೆಮೂಲೆಯಲ್ಲೂ ಸದ್ದು ಮಾಡಿದೆ. ರಾಧಿಕಾ ವನಪು, ವಯ್ಯಾರ, ಚಿರಂಜೀವಿ ಸರ್ಜಾ ಅಬ್ಬರ, ರವಿಶಂಕರ್ ಘರ್ಜನೆ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಅದರೊಂದಿಗೆ 'ಪುನೀತ್ ಗಾಯನ' ಇದೀಗ ಚಿತ್ರಕ್ಕೆ ಎಕ್ಸ್ ಟ್ರಾ ಮೈಲೇಜ್. ಅದನ್ನ ನೀವು ಕಿವಿಯಾರೆ ಕೇಳೋಕೆ ಕೆಲವೇ ದಿನಗಳು ಬಾಕಿ. (ಫಿಲ್ಮಿಬೀಟ್ ಕನ್ನಡ)

More from Filmibeat

English summary
Power Star Puneeth Rajkumar, who is known as Lucky singer of Sandalwood, he has crooned a song for Chiranjeevi Sarja starrer 'Rudrathandava'. V.Harikrishna has composed the music for Rudrathandava, which is directed bu Guru Deshpande.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X