ಅಪ್ಪು vs ದರ್ಶನ್ vs ಸುದೀಪ್ vs ಯಶ್; ಹಾಡುಗಳ ಗೆಲುವಿನ ವಿಷಯದಲ್ಲಿ ಈ ನಟನನ್ನು ಟಚ್ ಮಾಡೋಕಾಗಲ್ಲ!

ಚಿತ್ರವೊಂದರ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆದರೆ ಆ ಚಿತ್ರ ಅರ್ಧ ಗೆದ್ದಂತೆ ಎಂದೇ ಹೇಳಬಹುದು. ಏಕೆಂದರೆ ಹಾಡುಗಳು ಹಿಟ್ ಆಗುವುದರಿಂದ ಆ ಚಿತ್ರಕ್ಕೆ ಅಗತ್ಯವಿದ್ದ ಪ್ರಚಾರ ಸುಲಭವಾಗಿ ಲಭಿಸಿಬಿಡುತ್ತದೆ. ಕೋಟಿ ಕೋಟಿ ಸುರಿದರೂ ಸಿಗದ ರೀಚ್ ಹಾಡುಗಳು ಹಿಟ್ ಆಗುವುದರಿಂದ ಸುಲಭವಾಗಿ ಲಭಿಸಿಬಿಡುತ್ತದೆ.

ಹೀಗೆ ಹಾಡುಗಳು ಚಿತ್ರವೊಂದರ ಪ್ರಚಾರದಲ್ಲಿ ಬಹುದೊಡ್ಡ ಪಾತ್ರವನ್ನು ನಿರ್ಧರಿಸುತ್ತವೆ. ಹೀಗಾಗಿಯೇ ಚಿತ್ರತಂಡಗಳೂ ಸಹ ಹಾಡುಗಳನ್ನು ಅಚ್ಚುಕಟ್ಟಾದ ಲಿರಿಕ್ಸ್, ಮ್ಯೂಸಿಕ್, ಮೇಕಿಂಗ್ ಇರುವ ಹಾಗೆ ಬಂಡವಾಳ ಹೂಡಿ ತಯಾರಿಸುತ್ತವೆ.

Puneeth Rajkumar has the most number of listeners on online music apps than other Kannada actors

ಇನ್ನು ಈಗಿನ ಡಿಜಿಟಲ್ ಯುಗದಲ್ಲಿ ಹಾಡುಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್ ಪಟ್ಟಿ ಸೇರಲು ಅವಕಾಶವಿದ್ದು, ಬಿಡುಗಡೆಯಾಗುವ ಹಲವಾರು ಒಳ್ಳೆಯ ಹಾಡುಗಳು ಈ ಪಟ್ಟಿಯನ್ನು ಸೇರಿದರೂ ಅತ್ಯುತ್ತಮ ಹಾಡುಗಳು ಮಾತ್ರ ದಾಖಲೆಯನ್ನು ಬರೆಯಲು ಸಾಧ್ಯ.

ಅದರಲ್ಲಿಯೂ ಯುಟ್ಯೂಬ್ ದಾಖಲೆ ಸಹ ಈಗಿನ ಡಿಜಿಟಲ್ ಯುಗದಲ್ಲಿ ಒಂದು ರೀತಿಯ ಪ್ರತಿಷ್ಠೆಯಾಗಿಬಿಟ್ಟಿದೆ. ಹೀಗಾಗಿ ಯುಟ್ಯೂಬ್ ದಾಖಲೆಯಲ್ಲಿಯೂ ಸಹ ಅಭಿಮಾನಿಗಳ ವಾರ್ ಶುರುವಾಗಿಬಿಟ್ಟಿದೆ.

ಇನ್ನು ಯುಟ್ಯೂಬ್ ಮಾತ್ರವಲ್ಲದೇ ಆಡಿಯೊ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಗಳಲ್ಲಿಯೂ ಹಾಡುಗಳು ಎಷ್ಟು ಬಾರಿ ಪ್ಲೇ ಆದ್ವು, ಯಾವ ನಟನ ಹಾಡುಗಳಿಗೆ ಹೆಚ್ಚು ಕೇಳುಗರಿದ್ದಾರೆ ಎಂಬ ವಿಷಯಗಳಿಗೆ ಫ್ಯಾನ್ ವಾರ್ ನಡೆಯುತ್ತಲೇ ಇರುತ್ತವೆ.

ಕನ್ನಡ ಚಿತ್ರರಂಗದ ಸ್ಟಾರ್ ನಟರ ಅಭಿಮಾನಿಗಳ‌ ನಡುವೆ ಸಹ ಈ ವಿಷಯದ ಕುರಿತಾಗಿ ಫ್ಯಾನ್ ವಾರ್ ನಡೆದಿದೆ, ನಡೆಯುತ್ತಾ ಇದೆ. ಇನ್ನು ಕನ್ನಡ ಚಿತ್ರರಂಗದ ಸ್ಟಾರ್ ನಟರ ಪೈಕಿ ಯಾವ ನಟರ ಹಾಡುಗಳನ್ನು ಎಷ್ಟು ಕೇಳುಗರು ಜಿಯೊ ಸಾವ್ನ್ ಹಾಗೂ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಕೇಳಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ಜಿಯೊ ಸಾವ್ನ್ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ ನಟರ ಪಟ್ಟಿ:

1. ಪುನೀತ್ ರಾಜ್‌ಕುಮಾರ್ ಜಿಯೊ ಸಾವ್ನ್ ಅಪ್ಲಿಕೇಶನ್‌ನಲ್ಲಿ 372034 ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ ನಟ ಎನಿಸಿಕೊಂಡಿದ್ದಾರೆ.

2. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಿಯೊ ಸಾವ್ನ್ ಅಪ್ಲಿಕೇಶನ್‌ನಲ್ಲಿ 242333 ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ ಎರಡನೇ ನಟ ಎನಿಸಿಕೊಂಡಿದ್ದಾರೆ.

3. ಶಿವ ರಾಜ್‌ಕುಮಾರ್ ಜಿಯೊ ಸಾವ್ನ್ ಅಪ್ಲಿಕೇಶನ್‌ನಲ್ಲಿ 72302 ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ 3ನೇ ನಟ ಎನಿಸಿಕೊಂಡಿದ್ದಾರೆ.

4. ಕಿಚ್ಚ ಸುದೀಪ್ ಜಿಯೊ ಸಾವ್ನ್ ಅಪ್ಲಿಕೇಶನ್‌ನಲ್ಲಿ 45907 ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ 4ನೇ ನಟ ಎನಿಸಿಕೊಂಡಿದ್ದಾರೆ.

5. ಯಶ್ ಜಿಯೊ ಸಾವ್ನ್ ಅಪ್ಲಿಕೇಶನ್‌ನಲ್ಲಿ 32235 ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ 5ನೇ ನಟ ಎನಿಸಿಕೊಂಡಿದ್ದಾರೆ.

ಜಿಯೊ ಸಾವ್ನ್ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ ನಟರ ಪಟ್ಟಿ

1. ಪುನೀತ್ ರಾಜ್‌ಕುಮಾರ್ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಮಾಸಿಕ 11 ಲಕ್ಷ ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ ನಟ ಎನಿಸಿಕೊಂಡಿದ್ದಾರೆ.

2. ದರ್ಶನ್ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಮಾಸಿಕ 8.5 ಲಕ್ಷ ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ ಎರಡನೇ ನಟ ಎನಿಸಿಕೊಂಡಿದ್ದಾರೆ.

3. ರಾಕಿಂಗ್ ಸ್ಟಾರ್ ಯಶ್ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಮಾಸಿಕ 6.5 ಲಕ್ಷ ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ 3ನೇ ನಟ ಎನಿಸಿಕೊಂಡಿದ್ದಾರೆ.

4. ಕಿಚ್ಚ ಸುದೀಪ್ ವಿಂಕ್ ಮ್ಯೂಸಿಕ್ ಅಪ್ಲಿಕೇಶನ್‌ನಲ್ಲಿ ಮಾಸಿಕ 3.5 ಲಕ್ಷ ಕೇಳುಗರನ್ನು ಹೊಂದಿದ್ದು, ಈ ಅಪ್ಲಿಕೇಶನ್‌ನಲ್ಲಿ ಅತಿಹೆಚ್ಚು ಕೇಳುಗರನ್ನು ಹೊಂದಿರುವ ಕನ್ನಡದ 4ನೇ ನಟ ಎನಿಸಿಕೊಂಡಿದ್ದಾರೆ.

ಈ ಮೂಲಕ ಹೆಚ್ಚು ಕೇಳುಗರನ್ನು ಹೊಂದಿರುವ ನಟರ ಪಟ್ಟಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗ್ರಸ್ಥಾನದಲ್ಲಿದ್ದು, ಅವರ ಚಿತ್ರಗಳ ಹಿಟ್ ಗೀತೆಗಳು ಈ ಮೈಲಿಗಲ್ಲನ್ನು ನಿರ್ಮಿಸಲು ಪ್ರಮುಖ ಕಾರಣವಾಗಿದೆ.

More from Filmibeat

English summary
Puneeth Rajkumar has the most number of listeners on online music apps than other Kannada actors. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X