»   » ಬೇವು-ಬೆಲ್ಲ ಹಂಚಲು ಬರುತ್ತಿದ್ದಾನೆ 'ರಣವಿಕ್ರಮ'

ಬೇವು-ಬೆಲ್ಲ ಹಂಚಲು ಬರುತ್ತಿದ್ದಾನೆ 'ರಣವಿಕ್ರಮ'

Posted By:
Subscribe to Filmibeat Kannada

ಈ ಬಾರಿಯ ಯುಗಾದಿ ಹಬ್ಬ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಬಂಪರ್. ಯಾಕಂದ್ರೆ, ಅಪ್ಪು ಅಭಿನಯದ 'ರಣವಿಕ್ರಮ' ಚಿತ್ರದ ಆಡಿಯೋ ಯುಗಾದಿ ಹಬ್ಬದಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹೌದು, 'ರಣವಿಕ್ರಮ' ಅಡ್ಡದಿಂದ ಬಂದಿರುವ ಖಾಸ್ ಖಬರ್ ಪ್ರಕಾರ, ಚಿತ್ರದ ಆಡಿಯೋ ಯುಗಾದಿ ಹಬ್ಬದ ಪ್ರಯುಕ್ತ ಅಂದ್ರೆ, ಮಾರ್ಚ್ 21ಕ್ಕೆ ರಿಲೀಸ್ ಆಗ್ತಿದೆ. ಆ ಮೂಲಕ ಹೊಸ ವರ್ಷದಂದು ಕನ್ನಡಿಗರಿಗೆ ಉಡುಗೊರೆ ನೀಡುತ್ತಿದ್ದಾರೆ ಅಪ್ಪು.


Puneeth Rajkumar's 'Ranavikrama' Audio to release on Ugadi

ವಿಶೇಷ ಅಂದ್ರೆ, 'ರಣವಿಕ್ರಮ' ಚಿತ್ರದಲ್ಲಿ ಎರಡು ಹಾಡುಗಳಿಗೆ ಅಪ್ಪು ದನಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಗಾನ ಸುಧೆ ಹರಿಸಿರುವ ರೋಮ್ಯಾಂಟಿಕ್ ಮೇಕಿಂಗ್ ಸಾಂಗ್ ಈಗಾಗಲೇ ಔಟ್ ಆಗಿದ್ದು, ಎಲ್ಲಾ ಕಡೆ ಸೌಂಡ್ ಮಾಡುತ್ತಿದೆ. [ಪುನೀತ್ ಕೋಗಿಲೆ ಕಂಠದಲ್ಲಿ 'ರಣವಿಕ್ರಮ' ಪ್ರೇಮಗೀತೆ]


ವಿ.ಹರಿಕೃಷ್ಣ ಸಂಗೀತ ನೀಡಿರುವ 'ರಣವಿಕ್ರಮ' ಚಿತ್ರದ ಸಾರಥಿ ಪವನ್ ಒಡೆಯರ್. ಪುನೀತ್ ಗೆ ಮೊದಲ ಬಾರಿ ಆಕ್ಷನ್ ಕಟ್ ಹೇಳಿರುವ ಪವನ್ ಒಡೆಯರ್, 'ರಣವಿಕ್ರಮ' ಚಿತ್ರದಲ್ಲಿ ಅಪ್ಪುಗೆ ಮೂರು ವಿಭಿನ್ನ ಶೇಡ್ ಗಳಿರುವ ಪಾತ್ರವನ್ನ ನೀಡಿದ್ದಾರೆ. ['ಫಿಲ್ಮಿಬೀಟ್' ಜೊತೆ ಪವನ್ 'ರಣವಿಕ್ರಮ' ವಿಶೇಷಗಳು]


ಬಾಲಿವುಡ್ ಬ್ಯೂಟಿ ಅದಾ ಶರ್ಮಾ, ತೆಲುಗು ಸಿನಿ ಅಂಗಳದ ಚೆಲುವೆ ಅಂಜಲಿ ಪುನೀತ್ ರಾಜ್ ಕುಮಾರ್ ಗೆ ಜೋಡಿಯಾಗಿದ್ದಾರೆ. ಸೆಟ್ಟೇರಿದಾಗಿನಿಂದಲೂ 'ರಣವಿಕ್ರಮ' ಚಿತ್ರದ ಬಗ್ಗೆ ಅಪ್ಪು ಅಭಿಮಾನಿಗಳಿಗೆ ಕುತೂಹಲ ಇದ್ದೇ ಇದೆ. ಅದಕ್ಕೆ ಯುಗಾದಿ ಹಬ್ಬದಂದು 'ರಣವಿಕ್ರಮ'ನ ಗಾನಬಜಾನದ ಮೂಲಕ ತೆರೆ ಬೀಳುತ್ತಾ, ನೋಡ್ಬೇಕು.

English summary
According to the reports, Power Star Puneeth Rajkumar starrer 'Ranavikrama' Audio release is scheduled on Ugadi festival (March 21st). V.Harikrishna has composed the music for 'Ranavikrama', which is directed by Pawan Wadeyar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada