ಸಖತ್ ಸದ್ದು ಮಾಡ್ತಿದೆ ಯುವರತ್ನ ಚಿತ್ರದ 'ಫೀಲ್ ದಿ ಪವರ್' ಲಿರಿಕಲ್ ವಿಡಿಯೋ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಏಪ್ರಿಲ್ 1 ರಂದು ಬಿಡುಗಡೆಯಾಗಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದ್ದು, ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ, ಮಾರ್ಚ್ 20 ರಂದು ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕೆ ಎಲ್ಲರೂ ಆಹ್ವಾನಿಸಿ ಎಂದು ಕರೆ ನೀಡಿದ್ದಾರೆ.

ಇಂದು ಯುವರತ್ನ ಸಿನಿಮಾದ ಐದನೇ ಹಾಡು ತೆರೆಕಂಡಿದೆ. ಬೆಳಗ್ಗೆ 10 ಗಂಟೆ ಹೊಂಬಾಳೆ ಯೂಟ್ಯೂಬ್‌ನಲ್ಲಿ ''ಫೀಲ್ ದಿ ಪವರ್'' ಲಿರಿಕಲ್ ಸಾಂಗ್ ಸಖತ್ ಸದ್ದು ಮಾಡ್ತಿದೆ. ಯುವರತ್ನ ಆಲ್ಬಂ ಇಷ್ಟ ಆಗಿಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು.

ಮತ್ತೊಂದೆಡೆ ಯುವರತ್ನ ಚಿತ್ರದ ಆಲ್ಬಂ ಬಗ್ಗೆ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಕೆಲವು ಅಭಿಮಾನಿಗಳಿಗಂತು ಯುವರತ್ನ ಹಾಡು ಸಂಪೂರ್ಣವಾಗಿ ಇಷ್ಟಪಟ್ಟಿಲ್ಲ. ಎಸ್ ತಮನ್ ಅವರ ಸಂಗೀತ ಬಗ್ಗೆ ದನಿ ಎತ್ತಿದ್ದಾರೆ. ಒಂದು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದ ಟ್ರೈಲರ್‌‌ಗಳ ಪೈಕಿ ರಾಬರ್ಟ್ ಸಿನಿಮಾ ಅತ್ಯಂತ ದೊಡ್ಡಮಟ್ಟದ್ದಲ್ಲಿ ಸಕ್ಸಸ್ ಕಂಡಿದೆ.

Puneeth Rajkumars Yuvarathnaa Movie Feel The Power Lyrical Video Song Released

ಯುವರತ್ನ ಸಿನಿಮಾದ ಎಲ್ಲಾ ಹಾಡುಗಳು ಬಿಡುಗಡೆಯಾಗಿದೆ. ಆದರೆ, ಎಸ್ ತಮನ್ ಅವರ ಮ್ಯೂಸಿಕ್‌ಗೆ ಖಂಡನೆ ವ್ಯಕ್ತವಾಗಿದೆ. ಹರಿಕೃಷ್ಣ ಅವರ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿದೆ. ಹಾಡುಗಳು ಇಷ್ಟ ಆಗಿಲ್ಲ ಎಂದು ನೇರವಾಗಿ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಹೊಂಬಾಳೆ ಫಿಲಂಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ಎಸ್ ತಮನ್ ಸಂಗೀತ ನೀಡಿದ್ದಾರೆ. ಪುನೀತ್ ಜೊತೆ ಧನಂಜಯ್, ವಸಿಷ್ಠ ಸಿಂಹ, ಸಯೇಶಾ ಸೈಗಲ್, ಶರತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ.

ರಾಜಕುಮಾರ, ಯುವರತ್ನ ಸಿನಿಮಾಗಳ ನಂತರ ಮತ್ತೊಂದು ಮೆಗಾ ಚಿತ್ರದಲ್ಲಿ ಪುನೀತ್ ನಟಿಸಿದ್ದಾರೆ. ಸಂತೋಷ್ ಆನಂದ್ ರಾಮ್‌ ಈ ಚಿತ್ರ ನಿರ್ದೇಶಿಸಿದ್ದು, ವಿಜಯ್ ಕಿರಂದೂರ್ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Power star Puneeth Rajkumar's Yuvarathnaa Movie Feel The Power Lyrical Video Song Released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X