ಮತ್ತೆ 'ಕಾಣದಂತೆ ಮಾಯವಾದನು' ಎಂದ ಪುನೀತ್ ರಾಜ್ ಕುಮಾರ್
'ಕಾಣದಂತೆ ಮಾಯವಾದನು ನಮ್ಮ ಶಿವ ಕೈಲಾಸ ಸೇರಿಕೊಂಡನು..' ಎಂದು ಪುನೀತ್ ಬಾಲನಟನಾಗಿ ಹಾಡಿ ಕುಣಿದಿದ್ದರು. ಇದೀಗ ಮತ್ತೆ ಅಪ್ಪು 'ಕಾಣದಂತೆ ಮಾಯವಾದನು' ಎಂದಿದ್ದಾರೆ.
'ಕಾಣದಂತೆ ಮಾಯವಾದನು' ಸಿನಿಮಾದ ಒಂದು ಮೆಲೋಡಿ ಹಾಡನ್ನು ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. 'ಕಳೆದೊಂದಾ ಕಾಳಿದಾಸ...' ಎಂಬ ಈ ಹಾಡನ್ನು ಡಾ. ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಗುಮ್ಮಿನೇನಿ ವಿಜಯ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

''ಸುಮಾರು ದಿನದ ನಂತರ ಒಂದು ಮೆಲೋಡಿ ಹಾಡನ್ನು ಹಾಡುವ ಅವಕಾಶ ನನಗೆ ಸಿಕ್ಕಿದೆ. ಹಾಡು ತುಂಬ ಚೆನ್ನಾಗಿದೆ.'' ಎಂದು ಪುನೀತ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

ಇಂದು (ಸಪ್ಟೆಂಬರ್ 24) ಯೂ ಟ್ಯೂಬ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಸದ್ಯಕ್ಕೆ, 9 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದಿದೆ. ರಾಜ ಪಥಿಪತಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ವಿಕಾಸ್ ಹಾಗೂ ಸಿಂದು ಲೋಕನಾಥ್ ಚಿತ್ರದಲ್ಲಿ ನಟಿಸಿದ್ದಾರೆ. 'ಜಯಮ್ಮನ ಮಗ' ಚಿತ್ರದ ನಿರ್ದೇಶಕ ವಿಕಾಸ್ ಈಗ ಹೀರೋ ಆಗಿದ್ದಾರೆ.
English summary
Actor Puneeth Rajkumar sings for 'Kanadanthe Mayavadanu' kannada movie song.


Click it and Unblock the Notifications