For Quick Alerts
  ALLOW NOTIFICATIONS  
  For Daily Alerts

  'ಪ್ರೀತಿ ಕಿತಾಬು' ಪಠಣ ಮಾಡಿದ ಪವರ್ ಸ್ಟಾರ್

  By Harshitha
  |

  ''ಗುರುವಾರ ಸಂಜೆ..'', ''ಒಂದೂರಲ್ಲಿ ಒಬ್ಬ ಹುಡುಗ ಇದ್ದ..'', ''ಅಧ್ಯಕ್ಷ ಅಧ್ಯಕ್ಷ..'', ''ಪೆಸಲು ಮ್ಯಾನ್...'' ಇಂತಹ ಅನೇಕ ಹಾಡುಗಳು ಸೂಪರ್ ಹಿಟ್ ಆಗಿರುವುದರ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಠ ಪ್ರಮುಖ ಪಾತ್ರ ವಹಿಸಿದೆ.

  ನಟನೆ ಜೊತೆ ಗಾಯನದಲ್ಲೂ ಜನಪ್ರಿಯತೆ ಪಡೆದಿರುವ ಅಪ್ಪು, ಇದೀಗ 'ಪ್ರೀತಿ ಕಿತಾಬು' ಚಿತ್ರದ ಹಾಡೊಂದಕ್ಕೆ ದನಿಯಾಗಿದ್ದಾರೆ.

  ''ಕೇಳಿ ಮಾರಾಯ್ರೆ.. ಸ್ವಾಮಿ ಕೇಳಿ ಯಜ್ಮಾನ್ರೆ.. ನೋಡಿ ಸಾವ್ಕಾರ್ರೆ.. ಎಲ್ಲ ಸೂಪರ್ ಅಂತಾರೆ.. ಪ್ರೀತಿ ಕಿತಾಬು ಅಹಾ ಪ್ರೀತಿ ಕಿತಾಬು.. ಛಲೋ ಐತ್ರಿ ಈ ಪ್ರೀತಿ ಕಿತಾಬು.. ಸರ್ರಾ..'' ಅಂತ 'ಪ್ರೀತಿ ಕಿತಾಬು' ಚಿತ್ರದ ಟೈಟಲ್ ಹಾಡನ್ನ ಪುನೀತ್ ರಾಜ್ ಕುಮಾರ್ ಹಾಡಿದ್ದಾರೆ. [ಪುನೀತ್ ಕೋಗಿಲೆ ಕಂಠದಲ್ಲಿ 'ರಣವಿಕ್ರಮ' ಪ್ರೇಮಗೀತೆ]

  ವಿ.ಮನೋಹರ್ ಅವರ ಸಾಹಿತ್ಯ, ಸಂಗೀತ ಇರುವ ಈ ಹಾಡಿಗೆ ಅಪ್ಪು ವಾಯ್ಸ್ ಮತ್ತಷ್ಟು ಕಿಕ್ ನೀಡಿದೆ. ಈಗಾಗಲೇ 'ಪ್ರೀತಿ ಕಿತಾಬು' ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಈ ಹಾಡನ್ನ ಟೈಟಲ್ ಕಮ್ ಪ್ರಮೋಷನಲ್ ಸಾಂಗ್ ಆಗಿ ಬಳಸಿಕೊಳ್ಳುತ್ತಾರಂತೆ.

  Puneeth Rajkumar sings for Kannada Movie 'Preethi Kitabu'

  ನಾಯಕ ನಿಹಾಲ್, ದುನಿಯಾ ರಶ್ಮಿ ಜೋಡಿಯಾಗಿ ನಟಿಸಿರುವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ವಿಠಲ್ ಭಟ್. ಹೊಸಬರ ಹೊಸ ತಂಡವಾಗಿರುವ 'ಪ್ರೀತಿ ಕಿತಾಬು' ಚಿತ್ರಕ್ಕೆ ಪವರ್ ಸ್ಟಾರ್ ದನಿ ನೀಡಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ. ಸದ್ಯದಲ್ಲೇ 'ಪ್ರೀತಿ ಕಿತಾಬು' ಹಾಡುಗಳು ಹೊರ ಬರಲಿವೆ.

  English summary
  Power Star Puneeth Rajkumar has sung a song for Duniya Rashmi and Nihal starrer 'Preethi Kitabu'. V.Manohar has composed the music for 'Preethi Kitabu', which is directed by Vittal Bhat.
  Wednesday, July 15, 2015, 10:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X