»   » 'ಸಂಹಾರ'ಕ್ಕೆ ಹೊರಟ ಪವರ್ ಸ್ಟಾರ್ 'ಪುನೀತ್ ರಾಜ್ ಕುಮಾರ್'

'ಸಂಹಾರ'ಕ್ಕೆ ಹೊರಟ ಪವರ್ ಸ್ಟಾರ್ 'ಪುನೀತ್ ರಾಜ್ ಕುಮಾರ್'

Posted By:
Subscribe to Filmibeat Kannada
ಸಂಹಾರ'ಕ್ಕೆ ಹೊರಟ ಪವರ್ ಸ್ಟಾರ್ 'ಪುನೀತ್ ರಾಜ್ ಕುಮಾರ್ | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 'ಸಂಹಾರ'ಕ್ಕೆ ಹೊರಟಿದ್ದಾರೆ, ಅರೇ.... ಇದೇನಪ್ಪಾ, ಪುನೀತ್ ಯಾರ 'ಸಂಹಾರ' ಮಾಡ್ತಾರೆ ಅಂತ ಆಶ್ಚರ್ಯ ಪಡಬೇಡಿ. ನಾವು ಹೇಳುತ್ತಿರುವ ವಿಷಯ ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಸಿನಿಮಾದ ಬಗ್ಗೆ. ಗುರು ದೇಶಪಾಂಡೆ ನಿರ್ದೇಶನದ 'ಸಂಹಾರ' ಸಿನಿಮಾದ ಆಡಿಯೋ ರಿಲೀಸ್ ಆಗಿದೆ. ಸಿನಿಮಾದ ಒಂದು ಹಾಡನ್ನ ನಟ 'ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್' ಹಾಡಿದ್ದಾರೆ.

''ಏನ್ ಅಚ್ಚರಿಯೂ ಹಾಡುತಿದೆ ಹೃದಯ'' ಎನ್ನುವ ಹಾಡನ್ನ ಪವರ್ ಸ್ಟಾರ್ ಹಾಡಿದ್ದು, ಸಿನಿಮಾ ತಂಡ ಹಾಡಿನ ಟೀಸರ್ ನ ಬಿಡುಗಡೆ ಮಾಡಿದೆ. 'ಸಂಹಾರ' ಸಿನಿಮಾದಲ್ಲಿ 'ಚಿರಂಜೀವಿ' ಸರ್ಜಾ ಹಾಗೂ 'ಹರಿಪ್ರಿಯ' ಕಾಂಬಿನೇಷನ್ ನಲ್ಲಿ ಬರುವ ಸಾಂಗ್ ಇದಾಗಿದ್ದು, ಸಂಗೀತ ನಿರ್ದೇಶಕ 'ರವಿ ಬಸ್ರೂರ್' ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

 Puneeth Rajkumar sings for Kannada Movie Samhara

'ಸಂಹಾರ' ಸಿನಿಮಾದ ಟೀಸರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು ಚಿತ್ರದಲ್ಲಿ 'ಕಾವ್ಯಾಶೆಟ್ಟಿ' ಕೂಡ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣ ಮುಗಿಸಿ ಆಡಿಯೋ ಬಿಡುಗಡೆ ಮಾಡಿರುವ ನಿರ್ದೇಶಕ ಗುರು ಸಿನಿಮಾವನ್ನ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ತರುವ ಪ್ರಯತ್ನದಲ್ಲಿದ್ದಾರೆ.

English summary
Puneeth Rajkumar sings for Kannada Movie Samhara.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada