For Quick Alerts
  ALLOW NOTIFICATIONS  
  For Daily Alerts

  'ಬಾರೋ ರಾಜಾ' ಹುಕ್‌ ಸ್ಟೆಪ್ ಚಾಲೆಂಜ್: ಅಪ್ಪು- ಪ್ರಭು ತರ ಕುಣಿಯೋಕೆ ನೀವು ರೆಡಿನಾ?

  |

  ಪುನೀತ್ ರಾಜ್‌ಕುಮಾರ್ ನಟನೆಯ 'ಲಕ್ಕಿಮ್ಯಾನ್' ಚಿತ್ರದ 'ಬಾರೋ ರಾಜಾ' ಸಾಂಗ್ ರಿಲೀಸ್ ಆಗಿ ಸಖತ್ ಸದ್ದು ಮಾಡುತ್ತಿದೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವಾ ಹಾಗೂ ಸ್ಯಾಂಡಲ್‌ವುಡ್ ಡ್ಯಾನ್ಸ್ ಮಷಿನ್ ಅಪ್ಪು ಬಿಂದಾಸ್ ಸ್ಟೆಪ್ಸ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. 'ಬಾರೋ ರಾಜಾ' ಹುಕ್‌ ಸ್ಟೆಪ್ ಚಾಲೆಂಜ್‌ನಲ್ಲಿ ಎಲ್ಲರೂ ಕುಣಿಯೋಣ ಬನ್ನಿ ಎಂದು ಚಿತ್ರತಂಡ ಆಹ್ವಾನಿಸಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಚಿತ್ರದ ಲೀಡ್ ರೋಲ್‌ಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೇ ಸೆಪ್ಟೆಂಬರ್ 9ಕ್ಕೆ 'ಲಕ್ಕಿಮ್ಯಾನ್' ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.

  ಇತ್ತೀಚೆಗೆ ತಮಿಳು ನಟ ವಿಜಯ್ ಆಂಟೋನಿ 'ಬಾರೋ ರಾಜಾ' ಲಿರಿಕಲ್ ಸಾಂಗ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದರು. ಅಣ್ಣಾವ್ರ ಸಿನಿಮಾ ಟೈಟಲ್‌ಗಳನ್ನು ಬಳಸಿಕೊಂಡು ಬಹಳ ವಿಭಿನ್ನವಾಗಿ ಈ ಸಾಂಗ್ ಕಂಪೋಸ್ ಮಾಡಲಾಗಿದೆ. ಪುನೀತ್ ರಾಜ್‌ಕುಮಾರ್ ಹಾಗೂ ಪ್ರಭುದೇವರನ್ನು ಒಟ್ಟಿಗೆ ಒಂದೇ ಸಾಂಗ್‌ನಲ್ಲಿ ನೋಡುವುದು ಕಣ್ಣಿಗೆ ಹಬ್ಬ. ಸದ್ಯ ಕಂಪ್ಲಿಟ್ ವಿಡಿಯೋ ಸಾಂಗ್ ಬಂದಿಲ್ಲ. ಅದನ್ನು ಸಿಲ್ವರ್‌ ಸ್ಕ್ರೀನ್ ಮೇಲೆ ನೋಡಬೇಕು. ಆದರೆ ಮೇಕಿಂಗ್ ಝಲಕ್ ಜೊತೆಗೆ ಸಾಂಗ್‌ನಲ್ಲಿ ಹುಕ್ ಸ್ಟೆಪ್ ಝಲಕ್ ತೋರಿಸಲಾಗಿದೆ. ಅಪ್ಪು- ಪ್ರಭು ಸ್ಟೆಪ್ಸ್ ಸಖತ್ ಕಿಕ್ ಕೊಡ್ತಿದೆ. ಇದೇ ರೀತಿ ನೀವು ಹುಕ್ ಸ್ಟೆಪ್ ಮಾಡಿ ವಿಡಿಯೋ ಶೇರ್ ಮಾಡಿ ಎಂದು ಚಿತ್ರತಂಡ ಕರೆ ಕೊಟ್ಟಿದೆ. ಆ ಮೂಲಕ ಅಪ್ಪುನ ಸೆಲೆಬ್ರೇಟ್ ಮಾಡೋಣ ಎಂದಿದ್ದಾರೆ.

  ಮತ್ತೆ ಬೇಕು ಅಂದ್ರೆ ಸಿಗಲ್ಲ, 'ಲಕ್ಕಿಮ್ಯಾನ್' ಚಿತ್ರವನ್ನು ಅಪ್ಪಿಕೊಂಡು ಅನುಭವಿಸಿ: ಸುದೀಪ್ ಭಾವುಕಮತ್ತೆ ಬೇಕು ಅಂದ್ರೆ ಸಿಗಲ್ಲ, 'ಲಕ್ಕಿಮ್ಯಾನ್' ಚಿತ್ರವನ್ನು ಅಪ್ಪಿಕೊಂಡು ಅನುಭವಿಸಿ: ಸುದೀಪ್ ಭಾವುಕ

  ಹುಕ್ ಸ್ಟೆಪ್ ಚಾಲೆಂಜ್‌ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಇಂತಹ ಪ್ರಯತ್ನ ಮಾಡಲಾಗಿದೆ. 'ಬಾರೋ ರಾಜಾ' ಸಾಂಗ್‌ಗೆ ಜಾನಿ ಮಾಸ್ಟರ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. 'ವಿಕ್ರಾಂತ್ ರೋಣ' ಚಿತ್ರದ ರಾರಾ ರಕ್ಕಮ್ಮ ಹುಕ್ ಸ್ಟೆಪ್ ಸೂಪರ್ ಹಿಟ್ ಆಗಿತ್ತು. ಇದೀಗ ಇದೀಗ ಅಪ್ಪು- ಪ್ರಭು ಡ್ಯಾನ್ಸ್ ಮಾಡಿರೋ 'ಬಾರೋ ರಾಜಾ' ಹುಕ್ ಸ್ಟೆಪ್ ಸರದಿ.

  ವಿ2 ವಿಜಯ್ ವಿಕ್ಕಿ ಹಾಕಿರುವ ಟ್ಯೂನ್‌ಗೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಬೆನ್ನಿ ದಯಾಳ್ ವಾಯ್ಸ್‌ನಲ್ಲಿ ಸಾಂಗ್ ಕಿಕ್ ಕೊಡುತ್ತಿದೆ. ಅಭಿಮಾನಿಗಳು ಅಪ್ಪು ಡ್ಯಾನ್ಸ್ ನೋಡಿ, ಇದು ಅಪ್ಪು ಕೊನೆಯ ಸಿನಿಮಾ ಎಂದು ನೆನೆದು ಭಾವುಕರಾಗುತ್ತಿದ್ದಾರೆ.

  Puneeth Rajkumar Starrer Luckyman Team Gave Baaro Raaja Hook Step Challenge To Fans

  ತಮಿಳಿನ 'ಓ ಮೈ ಕಡವುಲೇ' ರೀಮೇಕ್ ಆಗಿರುವ 'ಲಕ್ಕಿಮ್ಯಾನ್' ಚಿತ್ರಕ್ಕೆ ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಸುಂದರ್‌ ರಾಜ್, ರಂಗಾಯಣ ರಘು, ನಾಗಭೂಷಣ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಸಾಂಗ್ಸ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ನಿರ್ಮಾಪಕ ಜಾಕ್‌ ಮಂಜು ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಬಾರದ ಲೋಕಕ್ಕೆ ಹೊರಟು ಹೋಗಿ ಅಭಿಮಾನಿಗಳ ಹೃದಯದಲ್ಲಿ ದೇವರ ಸ್ಥಾನ ಅಲಂಕರಿಸಿರುವ ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾದಲ್ಲಿ ದೇವರಾಗಿಯೇ ಕಾಣಿಸಿಕೊಂಡಿದ್ದಾರೆ. ಅಪ್ಪು ನಟಿಸಿರುವ ಕೊನೆ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ.

  English summary
  Puneeth Rajkumar Starrer Luckyman Team Gave Baaro Raaja Hook Step Challenge To Fans.
  Friday, August 26, 2022, 7:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X