twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ-ತೆಲುಗಿನಲ್ಲಿ ಯುವರತ್ನ ಚಿತ್ರದ ಎರಡನೇ ಹಾಡು ಬಿಡುಗಡೆ

    |

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಹಾಡುಗಳ ಜಾತ್ರೆ ಆರಂಭವಾಗಿದೆ. ಈಗಾಗಲೇ 'ಪವರ್ ಆಫ್ ಯೂತ್' ಹಾಡು ರಿಲೀಸ್ ಆಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹವಾ ಸೃಷ್ಟಿಸಿದೆ.

    ಈಗ ಯುವರತ್ನ ಚಿತ್ರದ ಎರಡನೇ ಹಾಡು ರಿಲೀಸ್ ಆಗಿದೆ. ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ನೀನಾದೇ ನಾ ಎಂಬ ರೋಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ಕನ್ನಡ ಮತ್ತು ತೆಲುಗು ಎರಡು ಭಾಷೆಯಲ್ಲಿ ಈ ಸಾಂಗ್ ರಿಲೀಸ್ ಆಗಿದೆ.

    ಪುನೀತ್ 'ಯುವರತ್ನ' ತಂಡದಿಂದ ಕ್ರಿಸ್ಮಸ್ ಗೆ ಭರ್ಜರಿ ಉಡುಗೊರೆಪುನೀತ್ 'ಯುವರತ್ನ' ತಂಡದಿಂದ ಕ್ರಿಸ್ಮಸ್ ಗೆ ಭರ್ಜರಿ ಉಡುಗೊರೆ

    ಎಸ್ ತಮನ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಘೋಷ್ ಪೀರ್ ಸಾಹಿತ್ಯ ರಚಿಸಿದ್ದು, ಶ್ರೇಯಾ ಘೋಷಲ್, ಅರ್ಮಾನ್ ಮಲ್ಲಿಕ್ ಹಾಗೂ ಎಸ್ ತಮನ್ ದನಿಗೂಡಿಸಿದ್ದಾರೆ.

     Puneeth Rajkumar Yuvarathna movie Neenade Naa lyrical video song release

    ಹೊಂಬಾಳೆ ಫಿಲಂಸ್‌ ಯ್ಯೂಟ್ಯೂಬ್ ಚಾನಲ್‌ನಲ್ಲಿ ತೆರೆಕಂಡಿರುವ ಈ ಹಾಡು ಸಂಗೀತ ಪ್ರಿಯರ ಮನಸ್ಸು ಗೆದ್ದಿದ್ದು, ಅರ್ಧ ಗಂಟೆಯಲ್ಲಿ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.

    'ಪವರ್ ಆಫ್ ಯೂತ್ ಚಾಲೆಂಜ್' ವಿನ್ನರ್ ಯಾರೆಂದು ಘೋಷಿಸಿದ ಪುನೀತ್'ಪವರ್ ಆಫ್ ಯೂತ್ ಚಾಲೆಂಜ್' ವಿನ್ನರ್ ಯಾರೆಂದು ಘೋಷಿಸಿದ ಪುನೀತ್

    ಇನ್ನುಳಿದಂತೆ ಪುನೀತ್ ರಾಜ್ ಕುಮಾರ್ ನಟಿಸಿರುವ ಈ ಚಿತ್ರದಲ್ಲಿ ಸಯೇಶಾ ಸೈಗಲ್ ನಾಯಕಿಯಾಗಿದ್ದಾರೆ. ಸೋನು ಗೌಡ, ಧನಂಜಯ್, ಪ್ರಕಾಶ್ ರಾಜ್, ದಿಗಂತ್, ವಸಿಷ್ಠ ಸಿಂಹ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದ ಮಾಹಿತಿ ಪ್ರಕಾರ, ಜನವರಿ ಮೂರನೇ ವಾರದಲ್ಲಿ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗಿದೆ.

    Recommended Video

    ಗಾಜನೂರಿಗೆ ಭೇಟಿ ನೀಡಿ ಅಪ್ಪನನ್ನು ನೆನಪು ಮಾಡಿಕೊಂಡ ಪುನೀತ್ ರಾಜಕುಮಾರ್ | Filmibeat Kannada

    English summary
    Power Star Puneeth Rajkumar Yuvarathna movie Neenade Naa lyrical video song out now.
    Friday, December 25, 2020, 15:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X