ಹಾಡು ಬಿಡುಗಡೆ: ಸುಂದರಿ ಶ್ರೀವಲ್ಲಿಯ ಹಿಂದೆ ಬಿದ್ದ ಪುಷ್ಪ

ಬಹುನಿರೀಕ್ಷಿತ 'ಪುಷ್ಪ' ಸಿನಿಮಾದ ಎರಡನೇ ಹಾಡು ಬಿಡುಗಡೆ ಆಗಿದೆ. ಮೊದಲು ಬಿಡುಗಡೆ ಆಗಿದ್ದ ಹಾಡು ಅಲ್ಲು ಅರ್ಜುನ್ ಕೇಂದ್ರಿತವಾದ ಮಾಸ್ ಹಾಡಾಗಿದ್ದರೆ ಈಗ ಬಿಡುಗಡೆ ಆಗಿರುವುದು ರಶ್ಮಿಕಾ ಮಂದಣ್ಣರ ಸೌಂದರ್ಯವನ್ನು ಹೊಗಳುವ ಪ್ರೀತಿಯ ಹಾಡು.

'ಪುಷ್ಪ' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಪಾತ್ರದಲ್ಲಿ ನಟಿಸಿದ್ದು, ಶ್ರೀವಲ್ಲಿಯನ್ನು ಹೊಗಳುವ ಹಾಡು ಈಗ ಬಿಡುಗಡೆ ಆಗಿದೆ. ವಿಡಿಯೋ ಹಾಡಿನಲ್ಲಿ ರಶ್ಮಿಕಾರ ವಿವಿಧ ಚಿತ್ರಗಳನ್ನು ನೀಡಲಾಗಿದ್ದು, ಹಳ್ಳಿ ಹುಡುಗಿ ಲುಕ್‌ನಲ್ಲಿಯೂ ಮುದ್ದಾಗಿಯೇ ಕಾಣುತ್ತಿದ್ದಾರೆ ರಶ್ಮಿಕಾ.

3:44 ನಿಮಿಷ ಉದ್ದದ ಹಾಡನ್ನು ಜನಪ್ರಿಯ ಹಾಡುಗಾರ ಸಿದ್ ಶ್ರೀರಾಮ್ ಹಾಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಹಾಡು ಬಿಡುಗಡೆ ಆಗಿದ್ದು, ಎಲ್ಲ ಭಾಷೆಗಳಲ್ಲಿಯೂ ಸಿದ್ ಶ್ರೀರಾಮ್ ಅವರೇ ಧ್ವನಿ ನೀಡಿದ್ದಾರೆ. ಹಾಡಿಗೆ ಸಂಗೀತ ನಿರ್ದೇಶನ ದೇವಿಶ್ರೀಪ್ರಸಾದ್ ಅವರದ್ದು, ತೆಲುಗಿನಲ್ಲಿ ಸಾಹಿತ್ಯ ಚಂದ್ರಭೋಸ್ ಅವರದ್ದು, ಕನ್ನಡದಲ್ಲಿ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ಬರೆದಿದ್ದಾರೆ.

Pushpa Movies Second Song Released In Five languages

'ಪುಷ್ಪ' ಸಿನಿಮಾದ ಮೊದಲ ಹಾಡು ಆಗಸ್ಟ್ 13ರಂದು ಬಿಡುಗಡೆ ಆಗಿತ್ತು. 'ದಾಕ್ಕೊ ದಾಕ್ಕೊ ಮೇಕ' ಎಂಬ ಮಾಸ್ ಹಾಡು ಅದಾಗಿದ್ದು, ಅದೂ ಸಹ ಬಹಳ ವೈರಲ್ ಆಗಿತ್ತು. ಹಾಡನ್ನು ಕನ್ನಡದಲ್ಲಿ ವಿಜಯಪ್ರಕಾಶ್ ಹಾಡಿದ್ದರು.

'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆದಾರನ ಕತೆಯನ್ನು ಹೊಂದಿದ್ದು, ಸಿನಿಮಾವನ್ನು ಸುಕುಮಾರ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗವಿದೆ. ವಿಲನ್ ಆಗಿ ಫಹಾದ್ ಫಾಸಿಲ್, ಸುನಿಲ್, ಜಗಪತಿ ಬಾಬು ನಟಿಸಿದ್ದಾರೆ. ಕನ್ನಡದ ಡಾಲಿ ಧನಂಜಯ್ ಸಹ ಇದ್ದಾರೆ.

'ಪುಷ್ಪ' ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದ್ದು, ಮೊದಲ ಭಾಗವು ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಎರಡನೇ ಭಾಗ ತೆರೆಗೆ ಬರುವ ಸಾಧ್ಯತೆ ಇದೆ. ಸಿನಿಮಾಕ್ಕೆ ಮೈತ್ರಿ ಮೂವೀಸ್ ಬಂಡವಾಳ ಹೂಡಿದೆ.

More from Filmibeat

English summary
Pushpa Movie's second song released in five languages. Song sung by Sid Sriram. Movie will release on December 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X