'ಪುಷ್ಪ' ಎರಡನೇ ಹಾಡಿನ ಬಿಡುಗಡೆಗೆ ಚಿತ್ರತಂಡ ಪ್ಲಾನಿಂಗ್!

By ರವೀಂದ್ರ ಕೊಟಕಿ

ದಕ್ಷಿಣ ಭಾರತದ ಮೂರು ಚಿತ್ರಗಳ ಮೇಲೆ ಇಡೀ ಭಾರತೀಯ ಸಿನಿಮಾ ರಂಗ ಕಣ್ಣಿಟ್ಟಿದೆ. ಕೆಜಿಎಫ್-2, ಆರ್ ಆರ್ ಆರ್ ಮತ್ತು ಪುಷ್ಪ ಚಿತ್ರಗಳ ಬಗ್ಗೆ ಬಾಲಿವುಡ್ನಲ್ಲಿ ಕೂಡ ಭಾರಿ ಚರ್ಚೆಯಾಗುತ್ತಿವೆ. ಕೆಜಿಎಫ್ 2 ಮುಂದಿನ ವರ್ಷದ ಎಪ್ರಿಲ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಆದರೆ ಇದರ ಹೊರತಾಗಿ ಬೇರೆ ಕೆಜಿಎಫ್ ಯಾವುದೇ ಅಪ್ಡೇಟ್‌ಗಳು ತಂಡದಿಂದ ಬರುತ್ತಿಲ್ಲ.

ಇದೇ ವರ್ಷದ ಅಕ್ಟೋಬರ್ 13 ಕ್ಕೆ ಬಿಡುಗಡೆಯಾಗಬೇಕಿದ್ದ 'ಆರ್ ಆರ್ ಆರ್' ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ. ಈಗಾಗಲೇ ಅದರ ಮೊದಲ ಹಾಡು 'ದೋಸ್ತಿ' ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಸುಕುಮಾರ್ ನಿರ್ದೇಶನದ 'ಪುಷ್ಪ' ಚಿತ್ರಕ್ಕೆ ಬಂದರೆ ಈಗಾಗಲೇ ಚಿತ್ರತಂಡ ಮೊದಲ ಹಾಡು 'ದಕ್ಕೋ ದಕ್ಕೋ ಮೇಕಾ' ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆ ಮಾಡಿದೆ.

ಚಿತ್ರತಂಡ ಈಗಾಗಲೇ ಒಂದು ಟೀಸರ್, ಹಾಡು ಜೊತೆಗೆ ಅಲ್ಲು ಅರ್ಜುನ್, ಫಹದ್ ಫಾಸಿಲ್, ಧನಂಜಯ್ ಅವರ ಫಸ್ಟ್ ಲುಕ್ ಮತ್ತು ಕ್ಯಾರೆಕ್ಟರ್ ಹೆಸರುಗಳ ಅನಾವರಣ ಕೂಡ ಮಾಡಿದೆ. ಚಿತ್ರದ ಫಸ್ಟ್ ಲುಕ್, ಟೀಸರ್, ಹಾಡಿನಲ್ಲಿ ಕೂಡ ನಾಯಕಿ ರಶ್ಮಿಕಾ ಮಂದಣ್ಣ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿಲ್ಲ. ಹೀಗಾಗಿ ಮುಂದಿನ ಸರದಿ ರಶ್ಮಿಕಾ ಮಂದಣ್ಣ ಅವರದೇ ಎಂಬುವುದು ಅವರ ಅಭಿಮಾನಿಗಳ ಭಾವಿಸುತ್ತಿದ್ದಾರೆ.

ಈ ಬಾರಿ ರೋಮ್ಯಾಂಟಿಕ್ ಸಾಂಗ್

ಈ ಬಾರಿ ರೋಮ್ಯಾಂಟಿಕ್ ಸಾಂಗ್

ರಶ್ಮಿಕಾ ಅಭಿಮಾನಿಗಳ ಬಯಸಿದಂತೆ ಈ ಬಾರಿ ಪುಷ್ಪ ತಂಡ ಒಂದು ರೋಮ್ಯಾಂಟಿಕ್ ಸಾಂಗ್ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಸಹಜವಾಗಿಯೇ ರೊಮ್ಯಾಂಟಿಕ್ ಹಾಡು ಅಂದಾಗ ನಾಯಕಿಗೆ ಅದರಲ್ಲಿ ಹೆಚ್ಚಿನ ಸ್ಕೋಪ್ ಇರುತ್ತದೆ. ದೇವಿ ಶ್ರೀ ಪ್ರಸಾದ್ ಅವರು ಅದ್ಭುತವಾದ ಸಂಗೀತ ನೀಡಿದ್ದು ಈ ರೋಮ್ಯಾಂಟಿಕ್ ಸಾಂಗ್ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತದೆoತ ಚಿತ್ರತಂಡದಲ್ಲಿ ಮಾತುಗಳು ಕೇಳಿಬಂದಿದೆ. ಒಟ್ಟಿನಲ್ಲಿ ಅತಿಶೀಘ್ರದಲ್ಲೇ 'ಪುಷ್ಪ' ಚಿತ್ರದ ಎರಡನೇ ಹಾಡನ್ನು ಕೇಳುವ ಅವಕಾಶ ಸಂಗೀತ ಪ್ರೇಮಿಗಳಿಗೆ ಮತ್ತು ರಶ್ಮಿಕಾ ಅಭಿಮಾನಿಗಳಿಗೆ ದೊರೆಯಲಿದೆ.

ಅಲ್ಲು V/s ಅಮೀರ್ ಖಾನ್

ಅಲ್ಲು V/s ಅಮೀರ್ ಖಾನ್

ಸುಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಪುಷ್ಪ' ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಈಗಾಗಲೇ ಚಿತ್ರತಂಡ ಡಿಸೆಂಬರ್ 25ರಂದು 'ಪುಷ್ಪ -1' ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಬಾಲಿವುಡ್ ನಲ್ಲಿ ಬಹುನಿರೀಕ್ಷಿತ ಅಮೀರ್ ಖಾನ್ ಅವರ 'ಲಾಲ್ ಸಿಂಗ್ ಚಡ್ಡಾ' ಕೂಡ ಅದೇ ದಿನ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಅಲ್ಲು ಅರ್ಜುನ್ ಮಾತ್ರ 'ತಗ್ಗೆದೆ ಲೇ ' ಅನ್ನುತ್ತಿದ್ದಾರೆ. ಪುಷ್ಪ ಒಂದು ಮಾಸ್ ಎಂಟರ್ಟೈನ್ಮೆಂಟ್ ಆಗಿದ್ದು ಇದು ಕೇವಲ ದಕ್ಷಿಣ ಭಾರತದಲ್ಲಿ

ಉತ್ತರ ಭಾರತದಲ್ಲೂ ಕೂಡ ಸಾಕಷ್ಟು ಕ್ರೇಜ್ ಸಂಪಾದಿಸಿಕೊಂಡಿದೆ. ಬಾಲಿವುಡ್‌ನಲ್ಲಿ ಅಮೀರ್ ಖಾನ್ ಸಿನಿಮಾ ಎದುರಿಗೆ ಸಾಧಾರಣವಾಗಿ ಯಾವುದೇ ನಟರೂ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಆದರೆ ಇದೇ ಮೊದಲ ಬಾರಿಗೆ ಅಮೀರ್ ಚಿತ್ರಕ್ಕೆ ದಕ್ಷಿಣ ಭಾರತದ ಸಿನಿಮಾ ಒಂದು ಸಾಕಷ್ಟು ಟಕ್ಕರ್ ಕೊಡ್ತಾ ಇದೆ.

ಉತ್ತರಭಾರತದಲ್ಲೂ ಅಲ್ಲು ಅಭಿಮಾನಿಗಳಿದ್ದಾರೆ

ಉತ್ತರಭಾರತದಲ್ಲೂ ಅಲ್ಲು ಅಭಿಮಾನಿಗಳಿದ್ದಾರೆ

ಅಲ್ಲುಅರ್ಜುನ್ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಉತ್ತರ ಭಾರತದಲ್ಲೂ ಸಾಕಷ್ಟು ಕ್ರೇಜ್ ಹೊಂದಿರುವ ನಟ. ಇವರ ಡ್ಯಾನ್ಸ್ ಮತ್ತು ಆಕ್ಷನ್ ಶೈಲಿಗಳಿಗೆ ಉತ್ತರಭಾರತೀಯರು ಫಿದಾ ಆಗಿದ್ದಾರೆ ಯೂಟ್ಯೂಬಿನಲ್ಲಿ ಇವರ ಚಿತ್ರ 'ಸರೈನೋಡು' ಹಿಂದಿ ಡಬ್ಬಿಂಗ್ ಇದುವರೆಗೆ ದೇಶದಲ್ಲಿ ಅತಿ ಹೆಚ್ಚು ಯೂಟ್ಯೂಬ್ ಪ್ರೇಕ್ಷಕರು ನೋಡಿರುವ ಚಿತ್ರವಾಗಿದೆ. ವಿಶೇಷವಾಗಿ ಉತ್ತರ ಪ್ರದೇಶ ಮತ್ತು ಬಿಹಾರ ಪ್ರಾಂತದಲ್ಲಿ ದಕ್ಷಿಣ ಭಾರತೀಯ ಆಕ್ಷನ್ ಚಿತ್ರಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಆ ಭಾಗಗಳಲ್ಲಿ 'ಪುಷ್ಪ' ಕ್ರೇಜ್ ಸಾಕಷ್ಟು ಇದ್ದು ಅಮೀರ್ ಖಾನ್ ಅವರಿಗೆ ಸಾಕಷ್ಟು ಪೈಪೋಟಿಯನ್ನು ಪುಷ್ಪ ನೀಡುವ ಸಾಧ್ಯತೆ ಇದೆ.

ಬಾಲಿವುಡ್ ಸ್ಟಾರ್‌ಗಳಿಗೆ ಸೌತ್ ಸಿನಿಮಾಗಳ ಭಯ

ಬಾಲಿವುಡ್ ಸ್ಟಾರ್‌ಗಳಿಗೆ ಸೌತ್ ಸಿನಿಮಾಗಳ ಭಯ

ಸೌತ್ ಸಿನಿಮಾ ದಿನೇ ದಿನೇ ತನ್ನ ಕ್ಷೇತ್ರವನ್ನು ವಿಸ್ತರಿಸಿಕೊಂಡು ಬಾಲಿವುಡ್ಡನ್ನು ಮೆಟ್ಟಿ ನಿಂತಿದೆ. ಮೇಕಿಂಗ್ ,ಗ್ರಾಫಿಕ್ಸ್, ಕಥೆ ಹೀಗೆ ಎಲ್ಲಾ ವಿಭಾಗದಲ್ಲೂ ಈಗ ಸೌತ್ ಬಾಲಿವುಡ್ ಗಿಂತ ಸಾಕಷ್ಟು ಮುಂದಿದೆ. ಸೌತ್ ನ ಪ್ರತಿ ಪ್ಯಾನ್ ಇಂಡಿಯಾ ಸಿನಿಮಾ ಬಾಲಿವುಡ್ ಮಂದಿಯ ನಿದ್ದೆಗೆಡಿಸುತ್ತಿದೆ. ಮುಂಬರುವ ದಿನಗಳಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಗಳು ಖಂಡಿತ ದಕ್ಷಿಣ ಭಾರತದ ಸೂಪರ್ ಸ್ಟಾರ್ ಗಳ ಪ್ರತಿ ಸಿನಿಮಾವನ್ನೂ

ಎದುರಿಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಆರ್ ಆರ್ ಆರ್, ಕೆಜಿಎಫ್-2 ಚಿತ್ರಗಳ ಬಿಡುಗಡೆಯ ಸಮಯದಲ್ಲಿ ಯಾವುದೇ ಬಾಲಿವುಡ್ನ ಸ್ಟಾರ್ ನಟರು ತಮ್ಮ ಸಿನಿಮಾ ಬಿಡುಗಡೆ ಮಾಡುವುದಿಲ್ಲ. ಸುಕುಮಾರ್ ನಿರ್ದೇಶನದ 'ಪುಷ್ಪ' ಅಮೀರ್ ಖಾನ್ ಚಿತ್ರಕ್ಕೆ ಹೇಗೆ ಪೈಪೋಟಿ ನೀಡುತ್ತದೆ ಎಂಬುದರ ಮೇಲೆ ದಕ್ಷಿಣದ ಮುಂದಿನ ಚಿತ್ರಗಳು ಬಾಲಿವುಡ್ಡಿಗೆ ಹೇಗೆ ಸವಾಲೊಡ್ಡುತ್ತದೆ ಎಂಬುದು ತಿಳಿಯುತ್ತದೆ.

More from Filmibeat

English summary
Allu Arjun, Rashmika Mandanna starer Pushpa movie team planing to release second song of the movie. They already released one song.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X