ತಮನ್ನಾ, ರಾಶಿ ಖನ್ನಾ ಹಾಟ್ ಹಾಟ್ ಸ್ಟೆಪ್ಸ್.. ಪಡ್ಡೆ ಹುಡುಗ್ರು ಕ್ಲೀನ್ ಬೋಲ್ಡ್

ಬರ್ತಾ ಬರ್ತಾ ಐಟಂ ಸಾಂಗ್ ಕ್ರೇಜ್ ಕಮ್ಮಿ ಆಗುತ್ತಿದೆ. ಆದರೂ ಸ್ಟಾರ್ ನಟಿಯರನ್ನು ಬಿಂದಾಸ್ ಆಗಿ ಕುಣಿಸಿ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾತ್ರ ನಿಲ್ಲುತ್ತಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ.. ರಾಶಿ ಖನ್ನಾ. ಇಬ್ಬರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬಿಂದಾಸ್ ಸ್ಟೆಪ್ಸ್ಟ್ ಹಾಕಿದ್ದಾರೆ. ಇದೀಗ ಇಬ್ಬರು ಒಟ್ಟೊಟ್ಟಿಗೆ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

ಸುಂದರ್.ಸಿ ನಿರ್ದೇಶನದ ತಮಿಳಿನ 'ಅರಣ್ಮನೈ- 4' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಚಿತ್ರದಲ್ಲಿ ತಮನ್ನಾ ಹಾಗೂ ರಾಶಿ ಖನ್ನಾ ಕೂಡ ನಟಿಸಿದ್ದಾರೆ. ಚಿತ್ರದ ಪ್ರಚಾರಕ್ಕಾಗಿ ಸ್ಪೆಷಲ್ ಸಾಂಗ್ ಮಾಡಿದ್ದು ಇಬ್ಬರೂ ಸಖತ್ ಹಾಟ್ ಆಗಿ ಹೆಜ್ಜೆ ಹಾಕಿದ್ದಾರೆ. ಹಿಪ್‌ಹಾಪ್ ತಮಿಳ ಸಂಗೀತದ ಹಾಡಿಗೆ ವಿಘ್ನೇಶ್ ಶ್ರೀಕಾಂತ್ ಸಾಹಿತ್ಯ ಬರೆದಿದ್ದಾರೆ. ಖರೇಸ್ಮಾ ರವಿಚಂದ್ರನ್ ಹಾಡನ್ನು ಹಾಡಿದ್ದಾರೆ.

Raashii Khanna Tamannaah shake a leg in hiphop Achacho song

ಕಾಮಿಡಿ ಹಾರರ್ 'ಅರಣ್ಮನೈ' ಸರಣಿಯ ಹಿಂದಿನ 3 ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿತ್ತು. ಇದೀಗ ನಾಲ್ಕನೇ ಸಿನಿಮಾ ಏಪ್ರಿಲ್ 26ಕ್ಕೆ ತೆರೆಗಪ್ಪಳಿಸಲಿದೆ. ತಮಿಳಿನ ಜೊತೆಗೆ ತೆಲುಗಿಗೂ ಡಬ್ ಆಗಿ ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಚಿತ್ರದ ಒಂದೊಂದೇ ಹಾಡು ರಿಲೀಸ್ ಮಾಡಿ ಹೈಪ್ ಕ್ರಿಯೇಟ್ ಮಾಡಲಾಗುತ್ತಿದೆ. ಇದೀಗ 'ಅಚ್ಚೋ ಅಚ್ಚೋ' ಎಂದು ಶುರುವಾಗುವ ಪ್ರಮೋಷನಲ್ ಸಾಂಗ್ ಸದ್ದು ಮಾಡ್ತಿದೆ.

ಮುಂಬೈ ಬ್ಯೂಟಿ ತಮನ್ನಾ ಹಾಗೂ ದೆಹಲಿ ಬ್ಯೂಟಿ ರಾಶಿ ಖನ್ನಾ ತಮ್ಮ ಸೌಂದರ್ಯ ರಾಶಿಯನ್ನು ಕ್ಯಾಮರಾ ಮುಂದೆ ತೆರೆದಿಟ್ಟಿದ್ದಾರೆ. ಹಿಪ್‌ಹಾಪ್ ಸ್ಟೈಲ್ ಸಾಂಗ್‌ಗೆ ಹಾಟ್ ಹಾಟ್ ಸ್ಟೆಪ್ಸ್ ಹಾಕಿದ್ದಾರೆ. ಚಿತ್ರದ ಒಂದಷ್ಟು ದೃಶ್ಯಗಳನ್ನು ಮಿಕ್ಸ್ ಮಾಡಿ 'ಅಚ್ಚೋ ಅಚ್ಚೋ' ವೀಡಿಯೋ ಸಾಂಗ್ ರಿಲೀಸ್ ಮಾಡಿದ್ದಾರೆ. ಪಡ್ಡೆ ಹುಡುಗರಂತೂ ಚೆಲುವೆಯರ ಬೋಲ್ಡ್ ಅವತಾರ ಕಂಡು ಫಿದಾ ಆಗಿದ್ದಾರೆ.

Raashii Khanna Tamannaah shake a leg in hiphop Achacho song

ಕಲರ್‌ಫುಲ್ ಸೆಟ್‌ನಲ್ಲಿ ಸಾಂಗ್ ಶೂಟ್ ಮಾಡಿದ್ದು ವೆರೈಟಿ ವೆರೈಟಿ ಕಾಸ್ಟ್ಯೂಮ್‌ಗಳಲ್ಲಿ ಮದನಾರಿಯರಾಗಿ ಇಬ್ಬರು ಕುಣಿದಿದ್ದಾರೆ. ಬೃಂದಾ ಗೋಪಾಲ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದು ಒಂದು ಡ್ಯಾನ್ಸರ್ಸ್ ತಮನ್ನಾ, ರಾಶಿಗೆ ಸಾಥ್ ಕೊಟ್ಟಿದ್ದಾರೆ.

ಹನ್ಸಿಕಾ ಮೋಟ್ವಾನಿ, ಸುಂದರ್ ಸಿ., ವಿನಯ್ ರೈ ಹಾಗೂ ಆಂಡ್ರಿಯಾ ನಟನೆಯ 'ಅರಣ್ಮನೈ' ಸಿನಿಮಾ 2014ರಲ್ಲಿ ತೆರೆಕಂಡಿತ್ತು. ಸಿನಿಮಾ ಹಿಟ್ ಆದ ಬಳಿಕ ಈ ಹಾರರ್-ಕಾಮಿಡಿ ಸರಣಿ ಮುಂದುವರೆದಲಾಯಿತುಯ. ಹನ್ಸಿಕಾ, ಸುಂದರ್ ಜೊತೆಗೆ ಬೇರೆ ಕಲಾವಿದರನ್ನು ಬದಲಾಯಿಸಿ 'ಅರಣ್ಮನೈ'-2 ತೆರೆಗೆ ಬಂದಿತ್ತು. ಸಿದ್ದಾರ್ಥ್, ತ್ರಿಶಾ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಸರಣಿಯ 3ನೇ ಚಿತ್ರದಲ್ಲಿ ಸುಂದರ್, ಆಂಡ್ರಿಯಾ ಜೊತೆಗೆ ರಾಶಿ ಖನ್ನಾ ಸೇರಿಕೊಂಡಿದ್ದರು. 2021ರಲ್ಲಿ ಆ ಸಿನಿಮಾ ತೆರೆಗೆ ಬಂದಿತ್ತು. ಇದೀಗ 4ನೇ ಚಿತ್ರಕ್ಕೆ ತಮನ್ನಾ ಬಾಟಿಯಾ ಜೊತೆಯಾಗಿದ್ದಾರೆ. ಸುಂದರ್ ಸ್ವತಃ ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿ ನಟಿಸುತ್ತಿದ್ದಾರೆ. ಪತ್ನಿ ಖುಷ್ಬು ಕೂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

4 ತಿಂಗಳ ಹಿಂದೆಯೇ 'ಅರಣ್ಮನೈ'-4 ತೆರೆಗೆ ಬರಬೇಕಿತ್ತು. ಕಾರಣಾಂತರಗಳಿಂದ ತಡವಾಗಿದ್ದು ಅಂತೂ ಇಂತೂ ಶೀಘ್ರದಲ್ಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಇತ್ತೀಚೆಗೆ ರಾಶಿ ಖನ್ನಾ ಕ್ರೇಜ್ ಕಮ್ಮಿ ಆಗಿದ್ದು ಈ ಸಿನಿಮಾ ಮೂಲಕ ಮತ್ತೆ ರಂಜಿಸಲು ಮುಂದಾಗಿದ್ದಾರೆ.

More from Filmibeat

English summary
Tamannaah Bhatia, Raashii Khanna's Aranmanai 4 film Achacho song Released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X