ಎಣ್ಣೆ ಬಾಟಲಿ ಹಿಡಿದು ದೇವರಿಗೆ ಪ್ರಶ್ನೆ ಮಾಡಿದ ರಚಿತಾ ರಾಮ್!

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ನಟಿ ರಚಿತಾ ರಾಮ್ ಅವರದ್ದೆ ಹವಾ. ರಚಿತಾ ರಾಮ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಇದ್ದಾರೆ. ಹಾಗಾಗಿ ಅವರ ಚಿತ್ರಗಳ ಬಗ್ಗೆ ದಿನಕ್ಕೊಂದು ಅಪ್ಡೇಟ್ ಹೊರ ಬೀಳುತ್ತಿದೆ. ನಿತ್ಯ ರಚಿತಾ ರಾಮ್ ಅವರು ಅಭಿನಯದ ಒಂದಲ್ಲ ಒಂದು ಸಿನಿಮಾದ ಸುದ್ದಿ ಸಂಚಲನ ಮೂಡಿಸುತ್ತ ಇದೆ. ಯಾಕೆಂದರೆ ರಚಿತಾ ರಾಮ್ ಸಿನಿಮಾ ಆಯ್ಕೆಯಲ್ಲಿ ಸೀಮಿತ ಆಗಿಲ್ಲ. ರಚಿತಾ ರಾಮ್ ತಮ್ಮನ್ನು ಹುಡುಕಿಕೊಂಡು ಬರುವಂತಹ ಒಳ್ಳೆಯ ಪಾತ್ರಗಳನ್ನು ಮಿಸ್‌ ಮಾಡಿಕೊಳ್ಳದೆ ಒಪ್ಪಿಕೊಳ್ಳುತ್ತಾ ಇದ್ದಾರೆ. ವಿಭಿನ್ನ ಪಾತ್ರಗಳಿಗೆ ಜೀವ ತುಂಬಲು ಮುಂದಾಗಿದ್ದಾರೆ. ಹಾಗಾಗಿ ರಚಿತಾ ರಾಮ್ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಇದ್ದಾರೆ.

ಸದ್ಯ ಸುಮಾರು ಎಂಟು ಸಿನಿಮಾಗಳಲ್ಲಿ ರಚಿತಾ ರಾಮ್ ಬ್ಯುಸಿ ಆಗಿದ್ದಾರೆ. ಹಾಗಾಗಿ ನಿತ್ಯ ಒಂದಲ್ಲ ಒಂದು ಸಿನಿಮಾದ ಅಪ್ಡೇಟ್ ರಚಿತಾ ರಾಮ್ ಕಡೆಯಿಂದ ಹೊರ ಬೀಳುತ್ತಿದೆ. ಸದ್ಯ ರಚಿತಾ ರಾಮ್ ಅಭಿನಯದ ಲವ್ ಯು ರಚ್ಚು ಮತ್ತು ಏಕ್‌ ಲವ್‌ ಯಾ ಸಿನಿಮಾದ ಹಾಡುಗಳು ಸದ್ದು ಮಾಡುತ್ತಿವೆ. ಲವ್ ಯು ಅಚ್ಚು ಸಿನಿಮಾದ ಮುದ್ದು ನೀನು ಹಾಡಿನ ಪೋಸ್ಟರ್‌ನಲ್ಲಿ ರಚಿತಾ ಹಾಟ್‌ ಆಗಿ ಕಾಣಿಸಿಕೊಂಡು ಸುದ್ದಿ ಆಗಿದ್ದರು. ಇದೀಗ ಏಕ್‌ ಲವ್‌ ಯಾ ಚಿತ್ರದ ಹಾಡಿನಲ್ಲಿ ಎಣ್ಣೆ ಬಾಟಲ್ ಹಿಡಿದು ಪ್ರತ್ಯಕ್ಷ ಆಗಿದ್ದಾರೆ.

ಲವ್ ಯು ಸಿನಿಮಾದ ಮುದ್ದು ನೀನು ಹಾಡಿನ ಪೋಸ್ಟರ್‌ನಲ್ಲಿ ರಚಿತಾ ಹಾಟ್‌ ಆಗಿ ಕಾಣಿಸಿ ಕೊಂಡಿದ್ದರು. ಇದೀಗ ಪೂರ್ತಿ ಹಾಡು ರಿಲೀಸ್‌ ಆಗಿದೆ. ಹಾಡಿನಲ್ಲಿ ರಚಿತಾ ಗೃಹಿಣಿ ಆಗಿ ಕ್ಯೂಟ್ ಲುಕ್ ನಲ್ಲಿ ಕಾಣಿಸಿ ಕೊಂಡಿದ್ದಾರೆ. ಹಾಡಿನ ಆರಂಭದಲ್ಲಿ ನಾಯಕ ನಟ ಅಜಯ್ ರಾವ್ ರಚಿತಾ ರಾಮ್ ಅವರನ್ನು ನೋಡುತ್ತಾರೆ. ನಟನಿಗೆ ಲವ್ ಅಟ್ ಫಸ್ಟ್ ಸೈಟ್ ಅದಂತೆ ನಾಯಕಿ ಜೊತೆಗೆ ಮದುವೆ ಆಗಿ ಸಂಸಾರ ಮಾಡುವ ಕನಸು ಕಾಣುತ್ತಾರೆ. ರಚಿತಾ ರಾಮ್ ಮತ್ತು ಅಜಯ್ ರಾವ್ ಮುದ್ದು ಜೋಡಿಯಂತೆ ಕಾಣಿಸಿ ಕೊಂಡಿದ್ದಾರೆ. ಇನ್ನು ಈ ಹಾಡು ಸಿನಿಮಾದಲ್ಲಿ ಯಾವ ಸಂದರ್ಭದಲ್ಲಿ ಬರುತ್ತೆ. ಇದು ನಾಯಕ ನಟನ ಕನಸೋ ಅಥವಾ ನನಸೋ ಎನ್ನುವುದು ಚಿತ್ರ ರಿಲೀಸ್ ಆದ ಬಳಿಕ ಗೊತ್ತಾಗಲಿದೆ. ಈ ಹಾಡಿಗೆ ಪ್ರಸಿದ್ಧ ಗಾಯಕ ಸಿದ್ ಶ್ರೀರಾಮ್ ಧ್ವನಿ ನೀಡಿದ್ದು. ಸಿನಿ ಪ್ರಿಯರ ಮನ ಗೆದ್ದಿದೆ.

Rachita Ram Starrer Ek Love Ya Movie Song Promo Release

ಒಳಗೆ ಸೇರಿದರೆ ಗುಂಡು ಮಾಲಾಶ್ರೀಯನ್ನು ನೆನಪಿಸಿದ ರಚ್ಚು: ಎಣ್ಣೆ ಬಾಟಲಿ ಹಿಡಿದು ರಚಿತಾ ರಾಮ್‌ ಡಾನ್ಸ್

ಲವ್ ಯು ರಚ್ಚು ಚಿತ್ರದ ಹಾಡಿನ ಕಥೆ ಒಂದಾದರೆ, ಏಕ್‌ ಲವ್‌ ಯಾ ಸಿನಿಮಾದ ಹಾಡಿನ ಕಥೆಯೇ ಬೇರೆ. ಈ ಎಣ್ಣೆ ಹಾಡಿನ ಝಲಕ್ ರಿಲೀಸ್ ಆಗಿದೆ. ಹಾಡಿನ ಈ ಸಣ್ಣ ತುಣುಕಿನಲ್ಲಿ ರಚಿತಾ ರಾಮ್‌ ಕೈಯಲ್ಲಿ ಎಣ್ಣೆ ಬಾಟಲಿ ಹಿಡಿದು "ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೊ ಭಗವಂತ" ಅಂತ ಹಾಡಿದ್ದಾರೆ. ಈ ಹಿಂದೆ ಇದೇ ಚಿತ್ರದ ಪೋಸ್ಟರ್ ಒಂದರಲ್ಲಿ ರಚಿತಾ ರಾಮ್ ಕೈಯಲ್ಲಿ ಸಿಗರೇಟ್ ಹಿಡಿದು ಹೊಗೆ ಬಿಡುವ ಲುಕ್‌ನಲ್ಲಿ ಕಾಣಿಸಿ ಕೊಂಡಿದ್ದರು. ಈಗ ಕೈಯಲ್ಲಿ ಎಣ್ಣೆ ಬಾಟೆಲ್ ಹಿಡಿದು ಹಾಡುತ್ತಿದ್ದಾರೆ. ರಚಿತಾರ ಈ ಹಾಡು ಮಾಲಶ್ರೀ ಅವರ ಒಳಗೆ ಸೇರಿದರೆ ಗುಂಡು ಹಾಡನ್ನು ನೆನಪಿಸುತ್ತದೆ. ಯಾಕೆಂದರೆ ಎಣ್ಣೆ ಹಾಡು ಅಂತ ಬಂದಾಗ, ಅಲ್ಲಿ ನಾಯಕರೇ ಪ್ರಧಾನ ಆಗಿರುತ್ತಾರೆ. ನಾಯಕಿಯರಿಗಾಗಿ ಎಣ್ಣೆ ಹಾಡು ಬರುವುದು ಅತಿ ಅಪರೂಪ. ಈ ಹಾಡಿಗೆ ಧ್ವನಿ ಆಗಿದ್ದಾರೆ ಗಾಯಕಿ ಮಂಗ್ಲಿ. ರಾಬರ್ಟ್ ಸಿನಿಮಾದ ಕಣ್ಣೇ ಅದಿರಿಂದಿ ಹಾಡಿನ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದ ಮಂಗ್ಲಿ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ಹಾಡುತ್ತ ಇದ್ದಾರೆ. ಈಗ ಈ ಎಣ್ಣೆ ಹಾಡಿಗೂ ಧ್ವನಿ ನೀಡಿದ್ದು, ರಚಿತಾ ರಾಮ್ ಸ್ಟೆಪ್‌ಗೆ ಮಂಗ್ಲಿ ಧ್ವನಿ ಸೇರಿಕೊಂಡು ಹಾಡಿನ ರಂಗು ಹೆಚ್ಚಿಸಿದೆ. ನವೆಂಬರ್ 12ಕ್ಕೆ ಈ ಹಾಡಿನ ಸಂಪೂರ್ಣ ವಿಡೀಯೋ ರಿಲೀಸ್‌ ಆಗಲಿದೆ.

Rachita Ram Starrer Ek Love Ya Movie Song Promo Release

ಏಕ್‌ ಲವ್‌ ಯಾ ಚಿತ್ರದಲ್ಲಿ ನಟಿ ರಕ್ಷಿತಾ ಅವರ ಸಹೋದರ ರಾಣ ಅಭಿನಯಿಸುತ್ತಿದ್ದು, ರಚಿತಾ ರಾಮ್‌, ರೀಷ್ಮ ನಾನಯ್ಯ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಚಿತ್ರಕ್ಕಿದೆ. ನಿರ್ದೇಶಕ ಪ್ರೇಮ್‌ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ನಟಿ ರಕ್ಷಿತಾ ತಾವೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

More from Filmibeat

English summary
Rachita Ram In New Avathar In Ek Love ya Movie Song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X