For Quick Alerts
  ALLOW NOTIFICATIONS  
  For Daily Alerts

  ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್‌: ಸೋನು ನಿಗಮ್ ದನಿಯಲಿ, 'ಪಳ ಪಳ ಕಣ್ಣಲಿ'

  |

  'ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್' ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ. ಸೋನು ನಿಗಮ್ ಹಾಡಿರುವ ಈ ಹಾಡು ಗಮನ ಸೆಳೆಯುತ್ತಿದೆ.

  'ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್' ಸಿನಿಮಾದ ಚಿತ್ರೀಕರಣ ಕಳೆದ ವರ್ಷದ ಆರಂಭದಲ್ಲಿಯೇ ಮುಗಿದಿದ್ದು, ಸಿನಿಮಾವು ಬಿಡುಗಡೆಗಾಗಿ ಕಾಯುತ್ತಿದೆ. ಕೊರೊನಾ ಕಾರಣದಿಂದಾಗಿ ಬಿಡುಗಡೆ ತಡವಾಗುತ್ತಲೇ ಸಾಗುತ್ತಿದೆ. ಇದೀಗ ಸಿನಿಮಾದ ಸುಮಧುರ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

  'ಪಳ ಪಳ ಕಣ್ಣಲ್ಲೇ, ಕಿಲ ಕಿಲ ನಗೆಯಲ್ಲೇ ಮಾಡಿದೆ ಮೋಡಿ' ಎಂಬ ಈ ಯುಗಳ ಗೀತೆಯನ್ನು ಸೋನು ನಿಗಮ್ ಹಾಡಿದ್ದು, ದೊತೆಗೆ ದಾಮಿನಿ ಭಟ್ಲ ಸಹ ದನಿ ನೀಡಿದ್ದಾರೆ.

  'ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್' ಸಿನಿಮಾವು ಸಸ್ಪೆನ್ಸ್ ಕತೆಯುಳ್ಳ ಸಿನಿಮಾ ಆಗಿದೆ. ಈ ಸಿನಿಮಾದ ಮೂಲಕ ರಾಘವ್ ಹೀರೋ ಆಗಿದ್ದಾರೆ. ಎಂ ಎನ್ ಶ್ರೀಕಾಂತ್ ನಿರ್ದೇಶಕ ಮಾಡಿದ್ದಾರೆ. ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಎಂ.ಎನ್.ಶ್ರೀಕಾಂತ್.

  ರಾಘವ್ ಅವರದ್ದು ಕಾಲೇಜು ಯುವಕನ ಪಾತ್ರವಾಗಿದ್ದು. ಈ ಸಿನಿಮಾದ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಕ್ಟಿಂಗ್, ಡ್ಯಾನ್ಸ್ ಕಲಿತಿದ್ದಾರೆ. ತಿಂಗಳುಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ.

  'ರಾಧಾ ಸರ್ಚಿಂಗ್, ರಮಣ ಮಿಸ್ಸಿಂಗ್' ಮಹಿಳಾ ಪ್ರಧಾನ ಸಿನಿಮಾ ಆಗಿದೆ. ಸಿನಿಮಾದಲ್ಲಿ ಅಂತರ್ಧಮೀಯ ಪ್ರೇಮಕತೆ ಸಹ ಇದೆ. ಸಿನಿಮಾದ ನಾಯಕ ಹಿಂದು, ನಾಯಕಿ ಕ್ರಿಶ್ಚಿಯನ್.

  Radha Searching Ramana Missing Movies New Song Released

  ಇಬ್ಬರೂ ಪ್ರೀತಿಸುತ್ತಿರುತ್ತಾರೆ, ಆಗ ದುರುಳರ ಕಣ್ಣು ಇವರ ಪ್ರೀತಿಯ ಮೇಲೆ ಬೀಳುತ್ತದೆ. ನಾಯಕನ ಅಪಹರಣವಾಗುತ್ತದೆ. ನಾಯಕನ ಅಪಹರಣ ಮಾಡಲು ಕಾರಣವೇನು? ನಾಯಕನನ್ನು ಅಪಹರಣ ಮಾಡಿದ್ದು ಯಾರು? ಏಕೆ? ರಮಣ ಅಪಹರಣವಾದ ಮೇಲೆ ರಾಧಾ ಪಡುವ ಪಾಡೇನು? ಅವನ್ನು ಹೇಗೆ ಬಿಡಿಸಿಕೊಂಡು ಬರುತ್ತಾಳೆ ಎಂಬುದು ಸಿನಿಮಾದ ಕತೆ.

  ಸಿನಿಮಾವನ್ನು ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹಾಸನಗಳಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದಲ್ಲಿ ತೆಲುಗಿನ ಗೋಪಿನಾಥ್ ಭಟ್, ಯಮನಾ ಶ್ರೀನಿಧಿ, ರೇಖಾ, ಜಾನ್, ಪ್ರದೀಪ್ ತಿಪಟೂರು, ಚಿರಾಗ್ ಗೌಡ, ಗರು ಹೆಗಡೆ ನಟಿಸಿದ್ದಾರೆ. ಸಿನಿಮಾದ ನಿರ್ದೇಶನದ ಜೊತೆಗೆ ಸಾಹಸ ನಿರ್ದೇಶನವೂ ಶ್ರೀಕಾಂತ್ ಅವರದ್ದೇ.

  ಯಶಸ್ವಿ ಶಂಕರ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಾಹಕರಾಗಿದ್ದಾರೆ. ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿಯೇ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಿನಿಮಾದ ಬಾಕಿ ಕೆಲಸಗಳು ಸಹ ಪೂರ್ತಿಯಾಗಿವೆ. ಆದರೆ ಕೊರೊನಾ ಕಾರಣದಿಂದಾಗಿ ಈವರೆಗೆ ಸಿನಿಮಾ ಬಿಡುಗಡೆ ಆಗಿಲ್ಲ.

  English summary
  Radha searching Ramana missing movie's new song released. Song sung by famous singer Sonu Nigam. Movie will release shortly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X