ಬರಲಿದೆ 'ನಂಗನ್ಸಿದ್ದು 2'; ಈ ಬಾರಿ ರಾಹುಲ್ ಡಿಟೊ ಹಾಡಿನ ಬಾಣ ಯಾರ ಕಡೆ?

2018ರ ಫೆಬ್ರವರಿ 1ರಂದು ಕನ್ನಡದ ರಾಪರ್‌ಗಳಲ್ಲಿ ಓರ್ವರಾದ ಆಲ್ ಓಕೆ ಯುಟ್ಯೂಬ್ ಚಾನೆಲ್‌ನಲ್ಲಿ 'ನಂಗನ್ಸಿದ್ದು' ಎಂಬ ಹಾಡು ಅಪ್‌ಲೋಡ್ ಆಗಿತ್ತು. ಈ ಹಾಡನ್ನು ರಚಿಸಿ ಹಾಡಿದ್ದರು ಆಗತಾನೇ ರಾಪ್ ದುನಿಯಾಗೆ ಎಂಟ್ರಿ ಕೊಟ್ಟಿದ್ದ ರಾಹುಲ್ ಡಿಟೊ. ಇನ್ನು ರಾಹುಲ್ ಡಿಟೊ ಅವರ ಈ ಹಾಡಿನ ಲಿರಿಕ್ಸ್ ನೇರವಾಗಿ ಚಂದನ್ ಶೆಟ್ಟಿಗೆ ನೀಡಿದ ಟಾಂಗ್ ಎಂದು ದೊಡ್ಡ ಮಟ್ಟದಲ್ಲಿಯೇ ನೆಟ್ಟಿಗರು ಟ್ರೋಲ್ ಮಾಡಿದ್ದರು. ಇನ್ನು ಕೆಲ ದಿನಗಳ ಕಾಲ ಈ ವಿಡಿಯೊದ ಕಾಮೆಂಟ್ ಆಫ್ ಕೂಡ ಆಗಿತ್ತು. ಅಷ್ಟರ ಮಟ್ಟಿಗೆ ರಾಹುಲ್ ಡಿಟೊ ವಿರುದ್ಧ ಕೆಂಡ ಕಾರಿದ್ರು ವೀಕ್ಷಕರು.

ಇನ್ನು ಈ ಹಾಡನ್ನು ಮಾಡುವಾಗ ಒಂದೇ ತಂಡದಲ್ಲಿದ್ದ ಆಲ್ ಓಕೆ ಹಾಗೂ ರಾಹುಲ್ ಡಿಟೊ ಬಳಿಕ ಬೇರೆ ಬೇರೆಯಾದರು. ಆದರೆ ಇದಕ್ಕೆ ಕಾರಣ ಮಾತ್ರ ಇನ್ನೂ ನಿಗೂಢ. ಇನ್ನು ನಂಗನ್ಸಿದ್ದು ಹಾಡು ಬಿಡುಗಡೆಯಾದ ಮರು ವರ್ಷ 'ತಗೊ' ಎಂಬ ಮತ್ತೊಂದು ಹಾಡನ್ನು ರಚಿಸಿ ಹಾಡಿ ಆಲ್ ಓಕೆ ಟೀಮ್ ತೊರೆದು ತಮ್ಮದೇ ಹೊಸ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ರು ರಾಹುಲ್ ಡಿಟೊ. ನಂಗನ್ಸಿದ್ದು ಹಾಡಿನಲ್ಲಿ ತನ್ನನ್ನು ತಾನು ರಾಪರ್ ಎಂದು ಹೇಳಿಕೊಂಡು ಓಡಾಡುವ ರಾಪ್ ಬಾರದ ಸಿಂಗರ್‌ಗಳಿಗೆ ಚಾಟಿ ಬೀಸಿದ್ದ ರಾಹುಲ್ ಡಿಟೊ ತಗೊ ಹಾಡಿನ ಮೂಲಕ ನಂಗನ್ಸಿದ್ದು ಬಿಡುಗಡೆಯಾದಾಗ ತನ್ನನ್ನು ಟೀಕಿಸಿದವರಿಗೆ ಗುನ್ನಾ ಇಟ್ಟಿದ್ದರು.

ಈ ಹಾಡು ಬಿಡುಗಡೆಯಾದ ಬಳಿಕ ರಾಹುಲ್ ಡಿಟೊಗೆ ಇದ್ದ ವಿರೋಧಿ ಬಳಗದಲ್ಲಿ ಕುಸಿತವೂ ಕಂಡಿತು. ಹೀಗೆ ಅಂದು ಅಭಿಮಾನಿಗಳನ್ನು ಪಡೆಯಲು ಆರಂಭಿಸಿದ ರಾಹುಲ್ ಡಿಟೊ ಈಗ ಸ್ಟಾರ್ ರಾಪರ್ ಆಗಿದ್ದಾರೆ. ಹಲವಾರು ಹಾಡುಗಳನ್ನು ಮಾಡಿರುವ ರಾಹುಲ್ ಡಿಟೊ ಬೆಳವಣಿಗೆಯಲ್ಲಿ ಹಾಗೂ ರೀಚ್‌ನಲ್ಲಿ ಮುಂದಿದ್ದ ಹಲವರನ್ನು ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

Rahul Dit-o gives update about his most awaited song Nangansiddu part 2

ಇನ್ನು ಭಿನ್ನ ವಿಭಿನ್ನ ಹಾಡುಗಳನ್ನು ಸಂಯೋಜಿಸುತ್ತಿರುವ ರಾಹುಲ್ ಡಿಟೊ ವಿರೋಧಿಗಳಿಗೆ ಟಾಂಗ್ ನೀಡುವಂತಹ ಹಾಡುಗಳನ್ನು ಸಂಯೋಜಿಸಿ ನಾಲ್ಕೈದು ವರ್ಷಗಳು ಕಳೆದಿದ್ದು, ಮತ್ಯಾವಾಗ ಅಂತಹ ಲಿರಿಕ್ ಉಳ್ಳ ಹಾಡು ಬಿಡುಗಡೆಯಾಗಲಿದೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು. ಇದೀಗ ಅದರ ಕುರಿತಾಗಿ ಸ್ವತಃ ರಾಹುಲ್ ಡಿಟೊ ಅವರೇ ಪೋಸ್ಟ್ ಮಾಡಿದ್ದು, 'ನಂಗನ್ಸಿದ್ದು 2' ಶೀಘ್ರದಲ್ಲೇ ಬರಲಿದೆ ಎಂದು ಬರೆದುಕೊಂಡಿದ್ದಾರೆ. ಎಂದೂ ಹೇಳಿರದ ಸತ್ಯವನ್ನು ಹೇಳುತ್ತೇನೆ, ವಿನಾಶವಾಗುವುದು ಖಚಿತ ಎಂದುಕೊಳ್ಳಿ ಎಂದು ಉಲ್ಲೇಖಿಸಿರುವ ರಾಹುಲ್ ಡಿಟೊ ತಮ್ಮ ಅಭಿಮಾನಿಗಳಲ್ಲಿ ನಿರೀಕ್ಷೆಯ ಕಿಡಿ ಹೊತ್ತಿಸಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ರಾಹುಲ್ ಡಿಟೊ ಮಾತಿನ ಬಾಣಗಳು ಯಾರಿಗೆ ಗುರಿಯಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Rahul Dit-o gives update about his most awaited song Nangansiddu part 2. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X