ಚಂದನ್ ಶೆಟ್ಟಿ ವಿರುದ್ಧ ಎತ್ತಿಕಟ್ಟಿ ದುಡ್ಡು ಕೊಡದೇ ನವರಂಗಿ ನಾಟಕ ಮಾಡಿದ; ಆಲ್ಓಕೆ ವಿರುದ್ಧ ಡಿಟ್ಟೋ ಕೆಂಡ!

ಚಿತ್ರರಂಗಗಳಲ್ಲಿ ಸ್ಟಾರ್ ನಟರ ನಡುವೆ ಹೇಗೆ ಪೈಪೋಟಿ ಇರುತ್ತೋ, ಅದೇ ರೀತಿ ರ‍್ಯಾಪ್ ದುನಿಯಾದಲ್ಲಿಯೂ ಸಹ ರ‍್ಯಾಪರ್‌ಗಳ ನಡುವೆ ಪೈಪೋಟಿ ಇರುತ್ತೆ. ಒಬ್ಬ ಸಿಂಗರ್ ಕುರಿತು ಮತ್ತೊಬ್ಬ ಸಿಂಗರ್ ತನ್ನ ಹಾಡಿನ ಸಾಲುಗಳ ಮುನ್ನವೇ ಗುನ್ನಾ ಇಡುವುದು ಕಾಮನ್. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಕನ್ನಡದ ರ‍್ಯಾಪ್ ಹಾಡು ನಂಗನ್ಸಿದ್ದು. ಹೌದು, 2018ರ ಫೆಬ್ರವರಿ ಒಂದರಂದು ನಂಗನ್ಸಿದ್ದು ಎಂಬ ರ‍್ಯಾಪ್ ಹಾಡು ಬಿಡುಗಡೆಯಾಗಿತ್ತು.

ರ‍್ಯಾಪರ್ ರಾಹುಲ್ ಡಿಟ್ಟೋ ಈ ಹಾಡಿನ ಮೂಲಕ ರ‍್ಯಾಪ್ ಮಾಡುವುದು ಬಾರದಿದ್ದರೂ ತಾನು ರ‍್ಯಾಪರ್ ಎಂದು ಹೇಳಿಕೊಂಡು ಓಡಾಡುವ ಗಾಯಕನ ಕಾಲೆಳೆದಿದ್ದರು. ಇನ್ನು ಅಂದಿಗೆ ಈ ಸಾಲುಗಳು ಗಾಯಕ ಚಂದನ್ ಶೆಟ್ಟಿಗೆ ಬರೆದ ಹಾಗಿತ್ತು. ಹೌದು, ನಂಗನ್ಸಿದ್ದು ಹಾಡನ್ನು ಕೇಳಿದ ಪ್ರತಿಯೊಬ್ಬರೂ ಇದು ಚಂದನ್ ಶೆಟ್ಟಿ ವಿರುದ್ಧವಾಗಿ ಮಾಡಿರುವ ಹಾಡು ಎಂದು ಊಹಿಸಿದ್ದರು.

Rahul Dit-o slams singer All Ok with his new rap song Nangansiddu 2

ಈ ಹಾಡು ಬಿಡುಗಡೆಯಾದಾಗ ಸಿಕ್ಕಾಪಟ್ಟೆ ನೆಗೆಟಿವ್ ಪ್ರತಿಕ್ರಿಯೆ ಪಡೆದುಕೊಂಡಿತು ಹಾಗೂ ಡಿಟ್ಟೋ ತೀವ್ರ ಟ್ರೋಲ್ ಆದರು. ಬಳಿಕ ತಗೋ ಹಾಡಿನ ಮೂಲಕ ಟ್ರೋಲ್ ಮಾಡಿದವರಿಗೂ, ಮಾಡಿಸಿದವರಿಗೂ ಗುನ್ನಾ ಇಟ್ಟಿದ್ದ ರಾಹುಲ್ ಡಿಟ್ಟೋ ಇದೀಗ 'ನಂಗನ್ಸಿದ್ದು 2' ಹಾಡನ್ನು ಬಿಡುಗಡೆಗೊಳಿಸಿದ್ದಾರೆ. ನಂಗನ್ಸಿದ್ದು ಹಾಡನ್ನು ಆಲ್ ಓಕೆ ಚಾನೆಲ್‌ನಲ್ಲಿಯೇ ಬಿಡುಗಡೆ ಮಾಡಿ ಆಲ್ ಓಕೆ ಜತೆ ಚೆನ್ನಾಗಿಯೇ ಇದ್ದ ರಾಹುಲ್ ಡಿಟ್ಟೋ ಬಳಿಕ ದೂರಾದರು. ಹೀಗೆ ಈ ಇಬ್ಬರು ದೂರಾಗಲು ಕಾರಣವೇನು, ನಂಗನ್ಸಿದ್ದು ಹಾಡೇ ಇದಕ್ಕೆ ಕಾರಣವಾಯ್ತಾ ಎಂಬೆಲ್ಲಾ ಅನುಮಾನಗಳು ಎದ್ದಿದ್ದವು.

ಈ ಅನುಮಾನಗಳಿಗೆಲ್ಲಾ 'ನಂಗನ್ಸಿದ್ದು 2' ಉತ್ತರ ನೀಡಲಿದೆ ಎಂಬ ನಿರೀಕ್ಷೆ ಇತ್ತು. ನಿರೀಕ್ಷೆಯಂತೆ ಈ ಹಾಡನ್ನು ರಾಹುಲ್ ಡಿಟ್ಟೋ ಆಲ್‌ ಓಕೆ ವಿರುದ್ಧವಾಗಿಯೇ ಮಾಡಿದ್ದಾರೆ. ಹಳೆಯ ಹಾಡುಗಳಲ್ಲಿ ಪರೋಕ್ಷವಾಗಿ ತನ್ನ ವಿರೋಧಿಗಳ ಕಾಲೆಳೆಯುತ್ತಿದ್ದ ರಾಹುಲ್ ಡಿಟ್ಟೊ ಈ ಬಾರಿ ನೇರವಾಗಿಯೇ ಆಲ್ ಓಕೆ ವಿರುದ್ಧ ಹಾಡಿನ ಸಾಲುಗಳ ಮೂಲಕ ಕಿಡಿಕಾರಿದ್ದಾರೆ. 'ಈ ಹಾಡು ಕೇವಲ ನಿನಗೆ ಅನ್ವಯಿಸುತ್ತೆ. ಇನ್‌ಕೇಸ್ ಬೇರೆಯವ್ರಿಗೂ ಅನ್ವಯಿಸುತ್ತೆ ಅನ್ಸಿದ್ರೆ ನಾನೇನೂ ಮಾಡೋಕಾಗಲ್ಲ' ಎಂಬ ವಿಶೇಷ ಸೂಚನೆಯೊಂದಿಗೆ ಹಾಡನ್ನು ಶುರು ಮಾಡಿರುವ ಡಿಟ್ಟೋ 'ಆಲ್ ನಾಟ್ ಓಕೆ' ಎಂಬ ಶೀರ್ಷಿಕೆ ಮೂಲಕವೇ ಹಾಡು ಯಾರ ವಿರುದ್ಧ ಎಂಬುದನ್ನು ಬಿಚ್ಚಿಟ್ಟಿದ್ದಾರೆ.

Rahul Dit-o slams singer All Ok with his new rap song Nangansiddu 2

ನ್ಯಾಯಾಲಯದಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ಡಿಟ್ಟೋ ಕಟಕಟೆಯಲ್ಲಿ ನಿಂತು ರ‍್ಯಾಪ್ ಮಾಡುವ ಮೂಲಕ ತನಗನ್ನಿಸಿದ್ದನ್ನು ಆರೋಪಿಸಿದ್ದಾರೆ. ಇನ್ನು ಎದುರುಗಡೆ ಕಟಗಟೆಯಲ್ಲಿ ಆಲ್ ಓಕೆಯನ್ನೇ ಹೋಲುವಂತಹ ಓರ್ವನನ್ನು ನಿಲ್ಲಿಸಲಾಗಿದೆ. ಸತ್ಯವನ್ನೇ ಹೇಳುತ್ತೇನೆ, ಸತ್ಯವನ್ನು ಬಿಟ್ಟು ಬೇರೆ ಏನೂ ಹೇಳೋದಿಲ್ಲ, ನಂಗನ್ಸಿದ್ ಆದ್‌ಮೇಲೆ ಗೊತ್ತಾಗಿದ್ದು, ಯಾವನ್ ಸರಿ ಯಾವನ್ ಸರಿ ಇಲ್ಲ ಎಂಬ ಸಾಲಿನೊಂದಿಗೆ ಆರಂಭವಾಗುವ ಹಾಡಿನಲ್ಲಿ ನೀತಿ ನೀಯತ್ತನ್ನು ಮುಂದೆ ಇಟ್ಟುಕೊಂಡು ಇವನು ಮಾಡಿದ್ದು ನವರಂಗಿ ನಾಟಕ ಎಂಬ ಸಾಲೂ ಇದೆ.

ಅಲ್ಲದೇ ನಿನಗೆ ದುಡ್ಡು, ದವಲತ್ತು ಹಾಗೂ ಹೆಸರು ಮಾತ್ರ ಬೇಕಿರೋದು, ನನ್ನ ಬಳಿ ಅವರು ಹಾಗೆ ಇವರು ಹಾಗೆ ಎಂದು ಚಾಡಿ ಹೇಳಿದೆ, ಜತೆಗಿರುವವರ ನಡುವೆ ಅನೇಕ ಬಾರಿ ತಂದಿಟ್ಟೆ ಎಂದೂ ಸಹ ಆರೋಪಿಸಿರುವ ಡಿಟ್ಟೋ ತಂಡ ಸೇರಿದ್ದು ಕೇವಲ ಮತ್ತೋರ್ವ ರ‍್ಯಾಪರ್ ಬಿಜು ಕರೆದಿದ್ದಕ್ಕೆ ಎಂದಿದ್ದಾರೆ. ಇನ್ನು ಎಲ್ಲರೂ ಚೆನ್ನಾಗಿದ್ದಾಗ ಕೆಎ01 ಎಂಬ ಹಾಡುಗಳ ಸರಣಿಯನ್ನು ಆಲ್ ಓಕೆ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದ್ದರು. ಇದರ ಬಗ್ಗೆನೂ ಸಹ ಉಲ್ಲೇಖಿಸಿರುವ ರಾಹುಲ್ ಡಿಟ್ಟೋ ಈ ಹಾಡುಗಳ ಸರಣಿಯಲ್ಲಿ ತಾನು ಹಾಡಿದ್ದ 'ನಾನ್ ಕನ್ನಡಿಗ' ಹಾಡಿಗೆ ಹೆಚ್ಚು ವೀಕ್ಷಣೆ ಬಂದಿದೆ ಎಂದೂ ಸಹ ಟಾಂಗ್ ನೀಡಿದ್ದಾರೆ.

ಇನ್ನು ಇದಾದ ಬಳಿಕ ಆಲ್‌ಓಕೆ ಚಾನೆಲ್‌ನಲ್ಲಿ ತಾನು ಹಾಡಿದ ಇನ್ನೆರಡು ಹಾಡುಗಳಾದ ಹೌದಾ ಹಾಗೂ ನಂಗನ್ಸಿದ್ದು ಹಾಡುಗಳಿಂದ ಬಂದ ಹಣವನ್ನೂ ಸಹ ತನಗೆ ನೀಡಿಲ್ಲ, ಅದನ್ನು ನೀನೇ ಭಿಕ್ಷೆ ಅಂತ ನೀನೆ ಇಟ್ಕೊ ಎಂದಿರುವ ಡಿಟ್ಟೋ ಈ ಹಾಡಿಗೆ ಹಾಕಿದ್ದ ಬಂಡವಾಳ ಕೂಡ ಕಡಿಮೆಯೇ ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಈ ಹಿಂದೆ ತಾವು ಒಟ್ಟಾಗಿ ಲೈವ್ ಕನ್ಸರ್ಟ್‌ಗಳಲ್ಲಿ ಪ್ರದರ್ಶನ ನೀಡಿದಾಗ 50% ಹಣವನ್ನು ನೀನು ಇಟ್ಟುಕೊಂಡು ಉಳಿದ 50% ಹಣವನ್ನು ತಾನು, ಬಿಜು, ಮಾರ್ಟಿನ್ ಯೋ, ಎಸ್‌ಐಡಿ ಹಾಗೂ ಡಿಜೆ ಲೆಥಲ್ಎಗೆ ಹಂಚಿಕೊಳ್ಳುವಂತೆ ನೀಡ್ತಿದ್ದೆ ಎಂದು ಹಣದ ವಿಷಯವನ್ನೂ ಸಹ ಡಿಟ್ಟೋ ಬಿಚ್ಚಿಟ್ಟಿದ್ದಾರೆ.

ಅಲ್ಲದೇ ಆಗಿನ ಕಾಲಕ್ಕೆ ಟಾಪ್‌ನಲ್ಲಿದ್ದ ಚಂದನ್ ಶೆಟ್ಟಿಯನ್ನು ಕೆಳಗಿಳಿಸಿಸೋ ಯೋಜನೆ ನಿಂದಾಗಿತ್ತು, ನಿನ್ನ ಕೈನಲ್ಲಾಗದೇ ಇದ್ದಿದ್ದಕ್ಕೆ ನಾನು ಬೇಕಾಗಿತ್ತು, ಹೋದಲ್ಲೆಲ್ಲಾ ನಮಗಿಂತ ನಿನ್ನ ಹೆಸರು ಬರಬೇಕೆನ್ನುವ ಉದ್ದೇಶ ನಿನ್ನದಾಗಿತ್ತು, ಇದನ್ನೆಲ್ಲಾ ಅರಿತು ನಿನ್ನ ಬಿಟ್ಟು ಆಚೆ ಬಂದಿದ್ದಕ್ಕೆ ನನಗೆ ಒಳ್ಳೆದಾಗಿದ್ದು ಎಂಬ ಖಾರದ ಸಾಲುಗಳಿವೆ. ಇನ್ನು ನಂಗನ್ಸಿದ್ದು ಹಾಡು ಆದಮೇಲೆ ಚಂದನ್ ಶೆಟ್ಟಿ ಹಾಗೂ ಇಬ್ಬರು ಒಂದಾಗಿ ತಾನು ಜನರ ಕಣ್ಣಿಗೆ ವಿಲನ್ ಆದೆ ಎಂಬ ಸಾಲನ್ನೂ ಸಹ ಹೇಳಿರುವ ಡಿಟ್ಟೋ ಟ್ರೋಲ್‌ಗೆ ಒಳಗಾದೆ ಎಂದಿದ್ದಾರೆ.

ಹೀಗೆ ಹಾಡಿನ ಉದ್ದಕ್ಕೂ ಆಲ್ ಓಕೆ ವಿರುದ್ಧವಾಗಿಯೇ ಸಾಲುಗಳನ್ನು ಬಳಸಿರುವ ರಾಹುಲ್ ಡಿಟ್ಟೋ ಎಲ್ಲೆಡೆ ನೇರವಾಗಿಯೇ ಕಾಲೆಳೆದಿದ್ದಾರೆ. ಕೊನೆಯಲ್ಲಿ ಚಂದನ್ ಶೆಟ್ಟಿ ಹಾಗೂ ಆಲ್ ಓಕೆ ಒಂದಾಗಿದ್ದರ ಬಗ್ಗೆ ಸಹ ರಾಹುಲ್ ಡಿಟ್ಟೋ ಹಾಡಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಹಿಂದಿ ರ‍್ಯಾಪರ್‌ಗಳ ನಡುವೆ ಇದ್ದ ರ‍್ಯಾಪ್ ಯುದ್ಧ ಈಗ ಕನ್ನಡ ರ‍್ಯಾಪ್ ಪ್ರಪಂಚಕ್ಕೂ ಸಹ ಕಾಲಿಟ್ಟಿದ್ದು, ಈ ಹಾಡಿನ ಬಗ್ಗೆ ಆಲ್‌ಓಕೆ ಪ್ರತಿಕ್ರಿಯಿಸುತ್ತಾರಾ ಅಥವಾ ಈ ಹಿಂದಿನ ಹಾಗೆ ಸೈಲೆಂಟ್ ಆಗಿರುತ್ತಾರಾ ಎಂಬ ಕುತೂಹಲ ಈಗ ಮೂಡಿದೆ.

More from Filmibeat

English summary
Rahul Dit-o slams singer All Ok with his new rap song Nangansiddu 2. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X