twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರಲ್ಲಿ ಕ್ಷಮೆ ಕೇಳಿ ಹಾಡು ಬಿಡುಗಡೆ ಮಾಡಿದ ರಾಜಮೌಳಿ

    |

    ಭಾರತದ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ ಇಂದು ಬೆಂಗಳೂರಿಗೆ ಆಗಮಿಸಿದ್ದರು. ತಮ್ಮ ಮುಂದಿನ ಸಿನಿಮಾ 'ಆರ್ಆರ್ಆರ್' ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು.

    ಭಾರತದ ಬಹುನಿರೀಕ್ಷಿತ 'ಆರ್ಆರ್ಆರ್' ಸಿನಿಮಾದ ಮುಖ್ಯ ಹಾಡೊಂದನ್ನು ಕನ್ನಡ ಭಾಷೆಯಲ್ಲಿ ರಾಜಮೌಳಿ ಇಂದು ಬಿಡುಗಡೆ ಮಾಡಿದರು.

    ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಮೌಳಿ ಮೊದಲಿಗೆ ''ಎರಡು ವಿಷಯಕ್ಕಾಗಿ ಕನ್ನಡಿಗರು ನನ್ನ ಕ್ಷಮಿಸಬೇಕು'' ಎಂದರು.

    ''ನನಗೆ ಕನ್ನಡ ಸರಿಯಾಗಿ ಬರುವುದಿಲ್ಲ. ನನ್ನ ಕನ್ನಡ ಅಷ್ಟೋಂದು ಚೆನ್ನಾಗಿಲ್ಲ. ಬಹಳ ಕಷ್ಟಪಟ್ಟು ಕನ್ನಡದಲ್ಲಿ ಮಾತನಾಡುತ್ತಿದ್ದೇನೆ. ದಯವಿಟ್ಟು ಅಡ್ಜಸ್ಟ್‌ ಮಾಡಿಕೊಳ್ಳಿ'' ಎಂದು ಕನ್ನಡದಲ್ಲಿಯೇ ಕೇಳಿದರು ರಾಜಮೌಳಿ. ಮಾತು ಮುಂದುವರೆಸಿ, ''ಇದು ಸಿನಿಮಾದ ಪ್ರಚಾರ ಕಾರ್ಯಕ್ರಮ ಅಲ್ಲ, ಹಾಡು ಬಿಡುಗಡೆ ಕಾರ್ಯಕ್ರಮವೂ ಅಲ್ಲ. ಇಲ್ಲಿ ನಿಮಗೆ (ಪತ್ರಕರ್ತರಿಗೆ) ಪ್ರಶ್ನೆ ಕೇಳಲು ಅವಕಾಶವಿಲ್ಲ. ಇಲ್ಲಿ ನಾನಷ್ಟೆ ಮಾತನಾಡುತ್ತೇನೆ. ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಾನು ಮತ್ತೊಮ್ಮೆ ನನ್ನ ಇಡೀ ಚಿತ್ರತಂಡವನ್ನು, ಸ್ಟಾರ್ ಕಾಸ್ಟ್ ಅನ್ನು ಕರೆದುಕೊಂಡು ಬರುತ್ತೇನೆ. ಅಂದು ಎಷ್ಟಾದರೂ ಪ್ರಶ್ನೆ ಕೇಳಿ'' ಎಂದರು ರಾಜಮೌಳಿ.

    ಆರಂಭದಲ್ಲಿ ಕನ್ನಡದಲ್ಲಿಯೇ ಮಾತನಾಡಿದ ರಾಜಮೌಳಿ ನಂತರ ತಾವು ಬಿಡುಗಡೆ ಮಾಡಲಿರುವ 'ಜನನಿ' ಹಾಡಿನ ಬಗ್ಗೆ ಮಾತನಾಡುವಾಗಿ ಇಂಗ್ಲೀಷ್‌ಗೆ ಭಾಷೆ ಬದಲಾಯಿಸಿಕೊಂಡರು. ''ಜನನಿ ಹಾಡು ನಮ್ಮ ಸಿನಿಮಾದ ಆತ್ಮ'' ಎಂದು ರಾಜಮೌಳಿ ಹಾಡು ಬಿಡುಗಡೆ ಮಾಡಿದರು. ಇಂದು ಬೆಂಗಳೂರಿನಲ್ಲಿ ಹಾಡು ಬಿಡುಗಡೆ ಆದ ಬಳಿಕವೇ ಯೂಟ್ಯೂಬ್‌ನಲ್ಲಿಯೂ 'ಜನನಿ' ಹಾಡನ್ನು ಬಿಡುಗಡೆ ಮಾಡಲಾಗಿದೆ.

    ಪಾತ್ರಗಳ ಮೇಲಾಗುವ ದೌರ್ಜನ್ಯ ತೋರಿಸಲಾಗಿದೆ

    ಪಾತ್ರಗಳ ಮೇಲಾಗುವ ದೌರ್ಜನ್ಯ ತೋರಿಸಲಾಗಿದೆ

    'ಜನನಿ' ವಿಡಿಯೋ ಹಾಡು ಇಂದು ಬಿಡುಗಡೆ ಆಗಿದೆ. ಸಿನಿಮಾದ ನಾಯಕ ಪಾತ್ರಗಳು ಅಥವಾ ಪ್ರಧಾನ ಪಾತ್ರಗಳ ಮೇಲಾಗುವ ದೌರ್ಜನ್ಯವನ್ನು ಹಾಡಿನಲ್ಲಿ ತೋರಿಸಲಾಗಿದೆ. 'ಜನನಿ' ಭಾವುಕವಾಗಿ ಹಾಡಾಗಿದ್ದು, 'ಆರ್ಆರ್ಆರ್' ಸಿನಿಮಾದಲ್ಲಿ ಹಲವು ಸನ್ನಿವೇಶಗಳಲ್ಲಿ ಈ ಹಾಡು ಬಳಕೆಯಾಗಿದೆ ಎಂದು ಸುಲಭಕ್ಕೆ ಊಹಿಸಬಹುದಾಗಿದೆ. ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಮೌಳಿ ''ಈ ಹಾಡು ಸಿನಿಮಾದ ಆತ್ಮವಾಗಿದೆ. ಎಲ್ಲ ಭಾವನೆಗಳು, ಎಮೋಷನ್‌ಗಳು ಈ ಹಾಡಿನಲ್ಲಿ ಅಡಕವಾಗಿದೆ'' ಎಂದರು.

    ಅಜಯ್ ದೇವಗನ್ ಡೈಲಾಗ್

    ಅಜಯ್ ದೇವಗನ್ ಡೈಲಾಗ್

    ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಲಾಗಿದ್ದ ಟೀಸರ್‌ನಲ್ಲಿ ಪ್ರಧಾನ ಪಾತ್ರಗಳ ಆಕ್ಷನ್ ವೈಭವವನ್ನು ತೋರಿಸಿದ್ದರು ರಾಜಮೌಳಿ ಆದರೆ ಈ ಹಾಡಿನ ವಿಡಿಯೋದಲ್ಲಿ ಅವರ ಮೇಲಾಗುವ ದೌರ್ಜನ್ಯ, ಅವರಿಗಾಗುವ ನೋವನ್ನು ತೋರಿಸಿದ್ದಾರೆ. ಹಾಡಿನ ವಿಡಿಯೋದಲ್ಲಿ ಅಜಯ್ ದೇವಗನ್ ಹಾಗೂ ಶ್ರೆಯಾ ಶಿರಿನ್ ಗಮನ ಸೆಳೆಯತ್ತಾರೆ, ಹಾಡಿನ ನಡುವೆ ಅಜಯ್‌ ದೇವಗನ್‌ ಹೊಡೆವ ಡೈಲಾಗ್, ಹೋರಾಟದ ಗುಣವುಳ್ಳವರ ಎದೆಗೆ ನಾಟುತ್ತದೆ.

    ಎಂಎಂ ಕೀರವಾಣಿ ಸಂಗೀತ

    ಎಂಎಂ ಕೀರವಾಣಿ ಸಂಗೀತ

    'ಆರ್ಆರ್ಆರ್' ಸಿನಿಮಾಕ್ಕೆ ಎಂಎಂ ಕೀರವಾಣಿ ಸಂಗೀತ ನೀಡಿದ್ದಾರೆ. 'ಜನನಿ' ಹಾಡು ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಿದೆ. ತಮಿಳು ಹೊರತಾಗಿ ಇನ್ನೆಲ್ಲ ಭಾಷೆಗಳಲ್ಲಿ 'ಜನನಿ' ಎಂದೇ ಹಾಡು ಪ್ರಾರಂಭವಾಗುತ್ತದೆ. ತಮಿಳಿನಲ್ಲಿ 'ಉಯಿರೆ' ಎಂದು ಪ್ರಾರಂಭವಾಗುತ್ತದೆ. ತೆಲುಗಿನಲ್ಲಿ ಎಂಎಂ ಕೀರವಾಣಿಯವರೇ ಬರೆದ ಸಾಲುಗಳನ್ನು ಎಲ್ಲ ಭಾಷೆಗಳಿಗೆ ಯಥಾವತ್ತು ತರ್ಜುಮೆ ಮಾಡಲಾಗಿದೆ.

    ಹಿಂದೊಮ್ಮೆ ಕ್ಷಮೆ ಕೇಳಿದ್ದ ರಾಜಮೌಳಿ

    ಹಿಂದೊಮ್ಮೆ ಕ್ಷಮೆ ಕೇಳಿದ್ದ ರಾಜಮೌಳಿ

    ಇಂದು ಸಜ್ಜನಿಕೆಯಿಂದ ಅಥವಾ ಬಾಯುಪಚಾರಕ್ಕೆ ರಾಜಮೌಳಿ ಕ್ಷಮೆ ಕೇಳಿದರಾದರೂ, ಹಿಂದೊಮ್ಮೆ ಗಂಭೀರವಾಗಿಯೇ ರಾಜಮೌಳಿ ಕನ್ನಡಿಗರ ಕ್ಷಮೆ ಕೇಳಿದ್ದರು. ರಾಜಮೌಳಿ ನಿರ್ದೇಶನದ 'ಬಾಹುಬಲಿ' ಸಿನಿಮಾ ಬಿಡುಗಡೆ ಆಗುವ ಸಮಯಕ್ಕೆ ಸರಿಯಾಗಿ 'ಬಾಹುಬಲಿ' ಸಿನಿಮಾದಲ್ಲಿ ನಟಿಸಿದ್ದ ಸತ್ಯರಾಜ್ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶಿತಗೊಂಡಿದ್ದವು. ಸತ್ಯಪ್ರಕಾಶ್, ಕಾವೇರಿ ಹೋರಾಟದ ಸಮಯದಲ್ಲಿ ಕನ್ನಡಿಗರ ಬಗ್ಗೆ ತುಚ್ಛವಾಗಿ ಮಾತನಾಡಿದ್ದ ಹಾಗಾಗಿ 'ಬಾಹುಬಲಿ' ಸಿನಿಮಾದ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಆಗ ವಿಡಿಯೋ ಪ್ರಕಟಿಸಿದ್ದ ರಾಜಮೌಳಿ, ಸತ್ಯರಾಜ್ ಪರವಾಗಿ ಕನ್ನಡಿಗರ ಕ್ಷಮೆ ಕೇಳಿದ್ದರು. ಆ ನಂತರ ಸತ್ಯರಾಜ್ ಸಹ ವಿಷಾದ ವ್ಯಕ್ತಪಡಿಸಿದರು. ಬಳಿಕ ಯಾವುದೇ ಅಡೆ-ತಡೆ ಇಲ್ಲದೆ 'ಬಾಹುಬಲಿ' ಸಿನಿಮಾ ಬಿಡುಗಡೆ ಆಯಿತು.

    English summary
    RRR movie director Rajamouli asked apology from Kannada people before releasing RRR movie's new song Janani.
    Saturday, November 27, 2021, 10:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X