»   » ಹೃದಯಕ್ಕೆ ನೇರವಾಗಿ ಮುಟ್ಟುವ ಹೃದಯಶಿವ ಅವರ ಈ ಹಾಡು

ಹೃದಯಕ್ಕೆ ನೇರವಾಗಿ ಮುಟ್ಟುವ ಹೃದಯಶಿವ ಅವರ ಈ ಹಾಡು

Posted By:
Subscribe to Filmibeat Kannada

'ರಾಜು ಕನ್ನಡ ಮೀಡಿಯಂ' ಸಿನಿಮಾದ ಒಂದು ಹಾಡು ಈಗ ರಿಲೀಸ್ ಆಗಿದೆ. ಹೃದಯ ಶಿವ ಅವರು ಬರೆದಿರುವ ಈ ಹಾಡಿನ ಸಾಹಿತ್ಯ ಸೀದಾ ಹೃದಯಕ್ಕೆ ಮುಟ್ಟುವಂತಿದೆ.

ಈ ಹಿಂದೆ ಸಣ್ಣ ಟೀಸರ್ ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿದ್ದ ಚಿತ್ರತಂಡ ಈಗ 'ಕೋಡೆಯೊಂದರ ಅಡಿಯಲ್ಲಿ...' ಎಂಬ ಹಾಡನ್ನು ರಿಲೀಸ್ ಮಾಡಿದೆ. ಸಿನಿಮಾದ ಸಾಹಿತ್ಯ, ಸಂಗೀತ ಹಾಗೂ ಹಾಡಿನ ಚಿತ್ರೀಕರಣ ಮತ್ತೆ ಮತ್ತೆ ಹಾಡನ್ನು ಕೇಳುವಂತೆ ಮಾಡುತ್ತದೆ.

'Raju Kannada Medium' movie song released

ಹಾಡಿನಲ್ಲಿ ನಟ ಗುರುನಂದನ್ ಮತ್ತು ನಟಿ ಆಶಿಕಾ ಕಾಣಿಸಿಕೊಂಡಿದ್ದಾರೆ. ಅದರಲ್ಲಿಯೂ ನಟಿ ಆಶಿಕಾ ಲುಕ್ ಮತ್ತು ಅವರ ನೈಜ ಅಭಿನಯ ಎಲ್ಲರಿಗೂ ಬಹಳ ಇಷ್ಟ ಆಗುತ್ತದೆ.

ಅಂದಹಾಗೆ, ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ ನೀಡಿದ್ದಾರೆ. 'ಫಸ್ಟ್ ರಾಂಕ್ ರಾಜು' ಖ್ಯಾತಿಯ ನರೇಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, 'ಶಿವಲಿಂಗ' ಚಿತ್ರವನ್ನು ಮಾಡಿದ್ದ ಸುರೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. 'ರಾಜು ಕನ್ನಡ ಮೀಡಿಯಂ' ಸಿನಿಮಾದ ಈ ಹಾಡು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
'Raju Kannada Medium' movie song released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada