twitter
    For Quick Alerts
    ALLOW NOTIFICATIONS  
    For Daily Alerts

    ಭ್ರಮೆಯಲ್ಲಿರುವ ಬುದ್ಧಿವಂತರಿಗೆ ರಾಕೇಶ್ ಅಡಿಗ ರ್‍ಯಾಪ್ ಎಚ್ಚರಿಕೆ

    By ಫಿಲ್ಮಿಬೀಟ್ ಡೆಸ್ಕ್
    |

    ಕನ್ನಡದ ಮೊದಲ rapperಗಳಲ್ಲಿ ಒಬ್ಬರಾದ ರಾಕೇಶ್ ಅಡಿಗ ಬಹು ಸಮಯದ ಬಳಿಕ ಮತ್ತೆ ರ್‍ಯಾಪ್ ದುನಿಯಾಕ್ಕೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ನಿನ್ನೆಯಷ್ಟೆ (ಸೆಪ್ಟೆಂಬರ್ 21) ಹೊಸ rap ಹಾಡು ಬಿಡುಗಡೆ ಮಾಡಿದ್ದಾರೆ ರಾಕೇಶ್.

    ವ್ಯಕ್ತಿ, ವ್ಯಕ್ತಿತ್ವ, ಸಮಾಜದ ಬದಲಾವಣೆಗೆ ರ್‍ಯಾಪ್ ಸಂಗೀತ ಮಾದರಿ ಬಳಕೆ ಆಗಬೇಕೆಂದು ಪ್ರತಿಪಾದಿಸುವ ರಾಕೇಶ್ ಅಡಿಗ ಅದೇ ಪ್ರಯತ್ನವನ್ನು ತಮ್ಮ ಹೊಸ 'ಫ್ರೀ ಸ್ಪಿರಿಟ್' ಹೆಸರಿನ ರ್‍ಯಾಪ್ ಮೂಲಕ ಮಾಡಿದ್ದಾರೆ.

    ತನ್ನ ಅರಿವಿಗೆ ಬರದೆ ಮನದ ಮೂಲೆಯಲ್ಲಿ ಕೂತಿರುವ ಭ್ರಮೆಗಳನ್ನು ಎತ್ತಿ ತೋರಿಸುವ, ಸಮಾಜದಲ್ಲಿನ ಹುಳುಕುಗಳಿಗೆ ಎದುರುಗೊಳಿಸುವ ಹಾಡೊಂದನ್ನು ರಾಕೇಶ್ ರಚಿಸಿದ್ದು, ರ್‍ಯಾಪ್ ಮಾದರಿಯಲ್ಲಿ ಜನರ ಮುಂದೆ ಪ್ರೆಸೆಂಟ್ ಮಾಡಿದ್ದಾರೆ. ಹಾಡಿನ ಗೂಢಾರ್ಥಕ್ಕೆ ತಕ್ಕಂತೆ ಅಮೂರ್ತ (ಅಬ್‌ಸ್ಟ್ರಾಕ್) ಮಾದರಿಯ ನಿರ್ದೇಶನವೂ ಹಾಡಿಗೆ ಇದೆ.

    ರ್‍ಯಾಪ್ ಮೂಲಕ ಸಮಾಜಕ್ಕೆ ಕನ್ನಡಿ ಹಿಡಿವ ಯತ್ನ

    ರ್‍ಯಾಪ್ ಮೂಲಕ ಸಮಾಜಕ್ಕೆ ಕನ್ನಡಿ ಹಿಡಿವ ಯತ್ನ

    ಸಮಾಜದಲ್ಲಿ ಪ್ರಸ್ತುತ ನಡೆಯುತ್ತಿರುವ ಹಲವು ವಿಷಯಗಳನ್ನು ರಾಕೇಶ್ ಅಡಿಗ ತಮ್ಮ ಹಾಡಿನ ಮೂಲಕ 'ಅಡ್ರೆಸ್' ಮಾಡಿದ್ದಾರೆ. ವೀಕ್ಷಕರ ತೆಲೆಗೆ ಭೀತಿ, ಸುಳ್ಳು ತುಂಬುತ್ತಿರುವ ನ್ಯೂಸ್‌ ಚಾನೆಲ್‌ಗಳ ಪ್ರೈಂ ಟೈಮ್, ಖಾಸಗಿಯವರಿಗೆ ಹಣ ಮಾಡಿಕೊಡಲು ನೈಸರ್ಗಿಕ ಉತ್ಪನ್ನಗಳನ್ನು ಬ್ಯಾನ್ ಮಾಡಿರುವ ಸರ್ಕಾರದ ನಡೆ, ಎಡ-ಬಲ ಪಂಥಗಳವರ ಕಿತ್ತಾಟ, ಕೊರೊನಾ ಕಾಲದ ಭ್ರಷ್ಟಾಚಾರ, ಜಾತಿ ರಾಜಕಾರಣ, ಧರ್ಮಾಂಧತೆ ಇನ್ನೂ ಹಲವು ವಿಷಯಗಳನ್ನು ರಾಕೇಶ್ ಅಡಿಗರ 'ಫ್ರೀ ಸ್ಪಿರಿಟ್' ಹಾಡಿನಲ್ಲಿ ಟೀಕಿಸಿದ್ದಾರೆ. ಸಾಮಾನ್ಯರನ್ನು ಎಚ್ಚರಿಸಿದ್ದಾರೆ.

    ಹೊಸ ಪ್ರಯತ್ನ ಮಾಡಿದೆ ರಾಕೇಶ್ ಹಾಗೂ ತಂಡ

    ಹೊಸ ಪ್ರಯತ್ನ ಮಾಡಿದೆ ರಾಕೇಶ್ ಹಾಗೂ ತಂಡ

    ಹಾಡಿನಲ್ಲಿ ಹಲವು ಅವತಾರಗಳಲ್ಲಿ ರಾಕೇಶ್ ಕಾಣಿಸಿಕೊಂಡಿದ್ದಾರೆ, ಡೀಮನ್ (ಆಂತರ್ಯದ ರಾಕ್ಷಸ), ಸಮಾಜದ ವಿವಿಧ ಪ್ರಮುಖ ಹುದ್ದೆಗಳಾದ ಪೊಲೀಸ್, ವೈದ್ಯ, ವಕೀಲ, ಪತ್ರಕರ್ತ, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಹೀಗೆ ಹಲವು ವೇಷಗಳ ಮೂಲಕ ಹಾಡನ್ನು ಹೆಚ್ಚು ಪರಿಣಾಮಕಾರಿ ಮನಮುಟ್ಟುವಂತೆ ಮಾಡಿದ್ದಾರೆ. ಹಾಡಿನಲ್ಲಿ ರಾಕೇಶ್ ಅಡಿಗರ ಮೇಕಪ್‌ ಸಹ ಬಹುವಾಗಿ ಗಮನ ಸೆಳೆಯುತ್ತಿದೆ. ಟೋಪಿ, ಕಣ್ಣಿಗೆ ದುಬಾರಿ ಕನ್ನಡಕ, ದುಬಾರಿ ಉಡುಗಡೆ, ಕ್ಲೋಸ್ ಶಾಟ್, ಲೋ ಶಾಟ್‌, ಡ್ರೋನ್‌ ಶಾಟ್‌ಗಳ ಮೂಲಕವೇ ರ್‍ಯಾಪ್ ಹಾಡು ತೋರಿಸುತ್ತಿದ್ದವರ ನಡುವೆ 'ವಿಷ್ಯುವಲಿ' ಭಿನ್ನವಾದ ರ್‍ಯಾಪ್ ಅನ್ನು ರಾಕೇಶ್ ಹಾಗೂ ತಂಡ ಕಟ್ಟಿಕೊಟ್ಟಿದೆ. ಕನ್ನಡದ ಬಹುತೇಕ ರ್‍ಯಾಪರ್ ಗಳು ಒಂದೇ ಮಾದರಿಯ ರ್‍ಯಾಪ್ ಪ್ರಯತ್ನಿಸುತ್ತಿರುವಾಗ ರಾಕೇಶ್ ಹಾಗೂ ತಂಡ ಹೊಸ ಪ್ರಯೋಗವೊಂದನ್ನು ಜನರ ಮುಂದಿಟ್ಟಿದ್ದಾರೆ.

    ಹಾಲಿ ರ್‍ಯಾಪರ್ ಗಳ ಬಗ್ಗೆಯೂ ಉಲ್ಲೇಖ

    ಹಾಲಿ ರ್‍ಯಾಪರ್ ಗಳ ಬಗ್ಗೆಯೂ ಉಲ್ಲೇಖ

    ಹಾಲಿ ರ್‍ಯಾಪರ್ ಗಳ ಬಗ್ಗೆಯೂ ರಾಕೇಶ್ ಅಡಿಗ ತಮ್ಮ ಹಾಡಿನಲ್ಲಿ ಉಲ್ಲೇಖ ಮಾಡಿದ್ದಾರೆ. ''ಹೌದು ನಾನು ಓಲ್ಡ್ ಸ್ಕೂಲು, ರ್ಯಾಪ್ ಗಾಡ್ ಅನ್ನಿಸಿಕೊಳ್ಳೋ ಆಸೆಯೂ ನನಗಿಲ್ಲ. ಕಾಸು ಕೊಟ್ಟು ಯೂಟ್ಯೂಬ್‌ನಲ್ಲಿ ಲೈಕ್ ಪಡೆಯುವವನು ನಾನಲ್ಲ, ಶೇರ್-ಕೇರ್ ಸಹ ನನಗೆ ಬೇಕಿಲ್ಲ'' ಎಂದು ಬಿಂದಾಸ್ ಆಗಿ ಹೇಳಿದ್ದಾರೆ ರಾಕೇಶ್ ಅಡಿಗ. ಆ ಮೂಲಕ ಕೇಳುಗರ ಮೇಲೆ ಹಾಡಿನ ಪರಿಣಾಮದ ಬಗ್ಗೆ ಕಾಳಜಿ ಹೊಂದಿರುವುದಕ್ಕಿಂತಲೂ ಲೈಕು, ವೀವ್ಸ್‌ ಬಗ್ಗೆ ವ್ಯಾಕುಲವಾಗ ಬಹುತೇಕ ರ್‍ಯಾಪರ್ ಗಳ ಕಾಲೆಳೆದಿದ್ದಾರೆ ರಾಕೇಶ್.

    ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ

    ರಾಕೇಶ್ ಅಡಿಗರ ಈ 'ಫ್ರೀ ಸ್ಪಿರಿಟ್' ಹಾಡನ್ನು ನಿರ್ದೇಶನ ಮಾಡಿರುವುದು ಆನಂದ್ ಕುವರ, ನೃತ್ಯ ಸಂಯೋಜನೆ ಲಕ್ಷ್ಮಿ ದೇವರಾಜು, ಮೇಕಪ್‌ ಪ್ರಿಯಾಂಕಾ ದವಳಗಿ, ಸಂಗೀತ ಸಮೀರ್ ಕುಲಕರ್ಣಿ, ಕ್ಯಾಮೆರಾ ಕೆಲಸ ವಿಶ್ವಜಿತ್ ರಾವ್. ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆ ಆದ ಕೇವಲ 20 ಗಂಟೆಗಳಲ್ಲಿ 14 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. 1800ಕ್ಕೂ ಹೆಚ್ಚು ಲೈಕ್ಸ್‌ಗಳನ್ನು ಪಡೆದುಕೊಂಡಿದೆ. ಯೂಟ್ಯೂಬ್‌ನಲ್ಲಿ ಹಲವರು ಹಾಡಿಗೆ ಧನಾತ್ಮಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ''ರಾಕೇಶ್ ಅಡಿಗ ಬರುವ ಮುಂಚೆ ಎಲ್ಲರೂ ರ್‍ಯಾಪರ್ ಗಳೇ, ಆದರೆ ನಿಜವಾದ ರ್ಯಾಪರ್ ರಾಕೇಶ್ ಅಡಿಗ'' ಎಂದಿದ್ದಾರೆ ಒಬ್ಬ ವೀಕ್ಷಕರು. ಇಂಥಹಾ ಹಲವು ಧನಾತ್ಮಕ ಕಮೆಂಟ್‌ಗಳು ರಾಕೇಶ್ ಅಡಿಗರ 'ಫ್ರೀ ಸ್ಪಿರಿಟ್' ಹಾಡಿಗೆ ಧಕ್ಕಿದೆ.

    English summary
    Kannada's first rapper Rakesh Adiga released his new rap song Free Spirit on YouTube. Song getting very good response.
    Wednesday, September 22, 2021, 15:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X