For Quick Alerts
  ALLOW NOTIFICATIONS  
  For Daily Alerts

  100 ಮಿಲಿಯನ್ ವೀಕ್ಷಣೆ ಕಂಡ ಕಿರಿಕ್ ಪಾರ್ಟಿಯ 'ಬೆಳಗೆದ್ದು..' ಹಾಡು: ಧನ್ಯವಾದ ತಿಳಿಸಿದ ರಕ್ಷಿತ್ ಶೆಟ್ಟಿ

  |

  ಸ್ಯಾಂಡಲ್ ವುಡ್ ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕಾಂಬಿನೇಷನ್ ನಲ್ಲಿ ಮೂಡಿಬಂದ ಕಿರಿಕ್ ಪಾರ್ಟಿ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಚಿತ್ರದ ಕಥೆ, ಪಾತ್ರವರ್ಗ, ಸಂಗೀತ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಕಿರಿಕ್ ಪಾರ್ಟಿ ಕನ್ನಡ ಸಿನಿಮಾ ಪ್ರಿಯರ ಗಮನ ಸೆಳೆದಿದ್ದು.

  ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಲ್ಲದೇ, ದೊಡ್ಡ ನಟಿಯಾಗಿ ಹೊರಹೊಮ್ಮಿದರು. ಇದೀಗ ರಶ್ಮಿಕಾ ಬೇರೆ ಬೇರೆ ಭಾಷೆಯಲ್ಲೂ ಮಿಂಚುತ್ತಿದ್ದಾರೆ. ಕನ್ನಡದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದಾಗಿರುವ ಕಿರಿಕ್ ಪಾರ್ಟಿ ಸಿನಿಮಾದ, ಬೆಳಗೆದ್ದು ಯಾರ ಮುಖವಾ ನಾನು ನೋಡಲಿ...ಹಾಡು ಯೂಟ್ಯೂಬ್ ನಲ್ಲಿ 100 ಮಿಲಿಯನ್ (10 ಕೋಟಿ) ವೀಕ್ಷಣೆ ಪಡೆದುಕೊಂಡಿದೆ.

  ದಾಖಲೆ ಪುಟ ಸೇರಿದ 'ರೌಡಿ ಬೇಬಿ': ದಕ್ಷಿಣ ಭಾರತದಲ್ಲೇ ಮೊದಲ ಹಾಡು!ದಾಖಲೆ ಪುಟ ಸೇರಿದ 'ರೌಡಿ ಬೇಬಿ': ದಕ್ಷಿಣ ಭಾರತದಲ್ಲೇ ಮೊದಲ ಹಾಡು!

  ಈ ಬಗ್ಗೆ ರಕ್ಷಿತ್ ಶೆಟ್ಟಿ ಮತ್ತು ತಂಡ ಸಾಮಾಜಿಕ ಜಾಲತಾಣದ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. 'ನಿಮ್ಮ ಪ್ರೀತಿ ಮತ್ತು ಆರಾಧನೆಯಿಂದ ಬೆಳಗೆದ್ದು ಹಾಡು ಯೂಟ್ಯೂಬ್ ನಲ್ಲಿ 100 ಮಿಲಿಯನ್ ವೀಕ್ಷಣೆ ಪಡೆದಿದೆ. ಈ ಅದ್ಭುತ ಹಾಡಿನ ಸೃಷ್ಟಿಕರ್ತ ಅಜನೀಶ್ ಅವರಿಗೆ ನನ್ನ ಮೆಚ್ಚುಗೆ' ಎಂದು ಹೇಳಿದ್ದಾರೆ.

  ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಸೇರಿದಂತೆ ಅನೇಕರು ಈ ಸುಂದರ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಧನಂಜಯ್ ರಂಜನ್ ಎನ್ನುವವರು ಸಾಹಿತ್ಯ ರಚಿಸಿದ್ದಾರೆ.

  ಇನ್ನೂ ಕನ್ನನಡದಲ್ಲಿ 100 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದ ಹಾಡಿದ ಸಾಲಿನಲ್ಲಿ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ 'ಖರಾಬು..' ಹಾಡು ಮೊದಲ ಸ್ಥಾನದಲ್ಲಿದೆ. 180ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ರಿಲೀಸ್ ಗೂ ಮೊದಲೇ 'ಖರಾಬು..' ಸಾಂಗ್ ಯೂಟ್ಯೂಬ್ ನಲ್ಲಿ ದಾಖಲೆ ನಿರ್ಮಿಸಿದೆ.

  ' Yuvarathnaa ' ನಿಗಾಗಿ ಒಂದಾದ, Rakshit Shetty, Vijay Devarakonda | Filmibeat Kannnada

  ಇನ್ನೂ ಶರಣ್ ಮತ್ತು ಆಶಿಕಾ ರಂಗನಾಥ್ ನಟನೆಯ 'ಚುಟು ಚುಟು..' ಸಾಂಗ್ ಕೂಡ ದಾಖಲೆ ವೀಕ್ಷಣೆ ಪಡೆದುಕೊಂಡಿದೆ. ಇದೀಗ ಅದೇ ಸಾಲಿಗೆ ಕಿರಿಕ್ ಪಾರ್ಟಿ ಸಾಂಗ್ ಸಹ ಸೇರಿದೆ. ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆಗಿದೆ 4 ವರ್ಷಗಳಾಗಿದೆ. ಇಂದಿಗೂ ಹಾಡುಗಳನ್ನು ಗಾನಪ್ರಿಯರು ಗುನುಗುತ್ತಿದ್ದಾರೆ.

  English summary
  Kannada Actor Rakshith Shetty and Rashmika Mandanna starrer Kirik party song crossed 100 million views on youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X