ಅಂಬಿ ಬಗ್ಗೆ ಪ್ರೇಮ್ ಬರೆದ ಮುದ್ದಾದ ಸಾಹಿತ್ಯಕ್ಕೆ ಬಹುಪರಾಕ್ ಹೇಳಿದ ರಕ್ಷಿತಾ.!
Recommended Video

ಸ್ಯಾಂಡಲ್ ವುಡ್ ನಲ್ಲೀಗ ಏನಿದ್ರೂ, ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆನೇ ಕ್ರೇಜು, ಸೆನ್ಸೇಷನ್ಸು.! ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದೆ. 'ಜೋಗಿ' ಪ್ರೇಮ್ ಬರೆದಿರುವ 'ಹೇ ಜಲೀಲ.. ಕನ್ವರ್ ಲಾಲಾ..' ಹಾಡು ಯೂಟ್ಯೂಬಲ್ಲಿ ಟ್ರೆಂಡಿಂಗ್ ನಲ್ಲಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ 'ಹೇ ಜಲೀಲ..' ಹಾಡು ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅರ್ಜುನ್ ಜನ್ಯ ಸಂಗೀತ, ವಿಜಯ್ ಪ್ರಕಾಶ್ ಗಾಯನದಿಂದ 'ಜಲೀಲ..' ಎಲ್ಲಾ ಕಡೆ ಮಿಂಚುತ್ತಿದ್ದಾನೆ.

'ಹೇ ಜಲೀಲ..' ಹಾಡಿಗೆ ರಕ್ಷಿತಾ ಪ್ರೇಮ್ ಕೂಡ ಫಿದಾ ಆಗಿದ್ದಾರೆ. ''ಪ್ರೇಮ್ ಬರೆದಿರುವ ಮುದ್ದಾದ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ ಹಾಗೂ ವಿಜಯ್ ಪ್ರಕಾಶ್ ಗಾಯನದಿಂದ 'ಹೇ ಜಲೀಲ' ಹಾಡು ಚೆನ್ನಾಗಿ ಮೂಡಿಬಂದಿದೆ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್. ಹಾಡಲ್ಲಿ ಅಂಬಿ ಮಾಮ ರಾಕ್ ಸ್ಟಾರ್ ತರಹ ಕಾಣ್ತಾರೆ'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ನಟಿ, ನಿರ್ಮಾಪಕಿ ರಕ್ಷಿತಾ ಪ್ರೇಮ್.
ತಮಿಳಿನ 'ಪವರ್ ಪಾಂಡಿ' ಚಿತ್ರದ ರೀಮೇಕ್ ಈ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ. ಗುರುದತ್ ಗಣಿಗ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಅಂಬರೀಶ್, ಸುದೀಪ್, ಶ್ರುತಿ ಹರಿಹರನ್, ದೊಡ್ಡಣ್ಣ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಸದ್ಯ ಟ್ರೆಂಡಿಂಗ್ ಆಗಿರುವ 'ಹೇ ಜಲೀಲ...' ಹಾಡಿನ ಸಾಹಿತ್ಯ ಇಲ್ಲಿದೆ...
''ಓ... ಹೋ...
ಫುಲ್ ಬಾಟ್ಲು ವಿಸ್ಕಿ ಈಗ ಕುಡ್ದಂಗ್ ಆಗದೆ
ಆಕಾಶ ಕೈಗೆ ಬಾಯಿಗೆ ಸಿಗ್ದಂಗ್ ಆಗದೆ
ಮಂಡ್ಯಾದ ಗೌಡ್ರು ನಡಿಗೆ ಝೂಮಲ್ಲಿದೆ
ವಯಸ್ಸಾದ್ರೂ ನೋಡೋ ನೋಟ ರಾಕೆಟ್ಟಂಗಿದೆ
ನಂಗೆ ಈಗ.. ನಾಟಿ ಕೋಳಿ ಮುದ್ದೆ ಸಾರು ಉಂಡಂಗಾಗದೆ
ಹೇ ಜಲೀಲ, ಕನ್ವರ್ ಲಾಲಾ..''
''ಓ... ಹೋ...
ಇಸ್ಪೀಟಲ್ಲಿ ಮೂರು ಎಕ್ಕಾ ಬಿದ್ದಂಗಾಗದೆ
ಕುಬೇರಂಗೇನೇ ಸಾಲ ಕೊಟ್ಟಂಗಾಗದೆ
ನಿನ್ನಂಥ ಶೋಕಿ ಲಾಲಾ ಯಾರಿಲ್ಲ ಕಣೋ
ಬೈದ್ರೂನೂ ಪ್ರೀತಿಯಿಂದ ಬೈತಿಯಾ ಕಣೋ
ಯಾಕೋ, ಏನೋ.. ರೇಸ್ನಲ್ಲಿ ದುಡ್ಡು ಕಟ್ಟಿದ ಕುದುರೆ ಗೆದ್ದಂಗಾಗದೆ
ಹೇ ಜಲೀಲ, ಕನ್ವರ್ ಲಾಲಾ..''
''ಓ... ಹೋ...
ಅಂಬಿಕಾ ನನ್ನ ಲವ್ ಮಾಡ್ದಂಗಾಗದೆ
ಸುಮಾನ ನಾನು ಮದುವೆ ಆದಂಗಾಗದೆ
ಚಳಿ ಚಳಿ ಹಾಡು ನಿಂಗೆ ಜ್ಞಾಪಕ ಬಂದೈತಾ
ಸನ್ನಿ ಜೊತೆ ಮಳೆಲಿ ಕುಣಿಯೋ ಐಡಿಯಾ ಬಂದೈತಾ
ಯಾಕೋ, ಏನೋ.. ಸುಮ್ಕೆ ಇದ್ದೋನ ಕರ್ದು ಹೆಣ್ಣು ಕೊಟ್ಟಂಗಾಗದೆ
ಹೇ ಜಲೀಲ, ಕನ್ವರ್ ಲಾಲಾ..''


Click it and Unblock the Notifications











