twitter
    For Quick Alerts
    ALLOW NOTIFICATIONS  
    For Daily Alerts

    ಈ 'RRR' ಹೀರೋಗೆ 'ಕೆಜಿಎಫ್' ಸಂಗೀತ ಜೀವನ ಪೂರ್ತಿ ಜೊತೆಯಾಗಿರಬೇಕಂತೆ!

    |

    ಪ್ರಾದೇಶಿಕ ಸಿನಿಮಾಗಳು ಎಂಬ ಗಡಿಯನ್ನು ಪ್ಯಾನ್ ಇಂಡಿಯಾ ಸಿನಿಮಾಗಳು ತೆಗೆದು ಹಾಕಿವೆ. ಪ್ಯಾನ್ ಇಂಡಿಯಾ ಸಿನಿಮಾಗಳಿಂದಾಗಿ ಎಲ್ಲರ ಸಿನಿಮಾಗಳನ್ನು ಎಲ್ಲರೂ ನೋಡುವಂತಾಗಿದೆ. ಒಳ್ಳೆಯ ಸಿನಿಮಾಗಳನ್ನು ಮೆಚ್ಚುವಂತಾಗಿದೆ.

    ಹೀಗೆ ಸಿನಿಮಾಗಳಿಗಿದ್ದ ಭಾಷೆ, ಪ್ರದೇಶದ ಗಡಿಗಳನ್ನು ಒಡೆಯುವಲ್ಲಿ ಮುಖ್ಯ ಪಾತ್ರವಹಿಸಿದ ಸಿನಿಮಾಗಳಲ್ಲಿ ಕನ್ನಡದ 'ಕೆಜಿಎಫ್' ಸಹ ಒಂದು.

    KG Chapter 2 Censor : ಸೆನ್ಸಾರ್ ಪಾಸ್ ಆಯ್ತು 'ಕೆಜಿಎಫ್ 2', 6000 ಸ್ಕ್ರೀನ್‌ಗಳಲ್ಲಿ ಅಬ್ಬರ! ಸಿನಿಮಾದ ಅವಧಿ ಎಷ್ಟು?KG Chapter 2 Censor : ಸೆನ್ಸಾರ್ ಪಾಸ್ ಆಯ್ತು 'ಕೆಜಿಎಫ್ 2', 6000 ಸ್ಕ್ರೀನ್‌ಗಳಲ್ಲಿ ಅಬ್ಬರ! ಸಿನಿಮಾದ ಅವಧಿ ಎಷ್ಟು?

    'ಕೆಜಿಎಫ್' ಸಿನಿಮಾಕ್ಕೆ ಕನ್ನಡದಲ್ಲಿ ಮಾತ್ರವಲ್ಲ ದೇಶದೆಲ್ಲೆಡೆ ಅಭಿಮಾನಿಗಳು ಇರುವುದು ಹೊಸ ಸಂಗತಿಯೇನಲ್ಲ. ಆದರೆ ಪ್ರೇಕ್ಷಕರು ಮಾತ್ರವಲ್ಲ ನೆರೆ ರಾಜ್ಯಗಳ ದೊಡ್ಡ-ದೊಡ್ಡ ಸ್ಟಾರ್‌ಗಳು ಸಹ ಸಿನಿಮಾಕ್ಕೆ ಮಾರು ಹೋಗಿದ್ದಾರೆ. ಕೇವಲ ಇಷ್ಟಪಡುವುದು ಮಾತ್ರವಲ್ಲ ಸಿನಿಮಾದ ಅಭಿಮಾನಿಗಳೇ ಆಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಇತ್ತೀಚೆಗೆ ಬಿಡುಗಡೆ ಆದ 'RRR' ಸಿನಿಮಾದ ಇಬ್ಬರು ನಾಯಕರಲ್ಲಿ ಒಬ್ಬರು ತಮಗೆ ಜೀವನ ಪರ್ಯಂತ 'ಕೆಜಿಎಫ್' ಸಿನಿಮಾದ ಸಂಗೀತ ಹಿನ್ನೆಲೆ ಸಂಗೀತವಾಗಿರಬೇಕು ಎಂದಿರುವುದು ಸಾಕ್ಷಿ.

    ಮತ್ತೆ ಬಿಡುಗಡೆ ಆಗ್ತಿದೆ 'ಕೆಜಿಎಫ್; ಚಾಪ್ಟರ್ 1': ಎಂದು? ಎಲ್ಲೆಲ್ಲಿ ?ಮತ್ತೆ ಬಿಡುಗಡೆ ಆಗ್ತಿದೆ 'ಕೆಜಿಎಫ್; ಚಾಪ್ಟರ್ 1': ಎಂದು? ಎಲ್ಲೆಲ್ಲಿ ?

    ನಿಜ ಜೀವನದ ಹಿನ್ನೆಲೆ ಸಂಗೀತ ಯಾವುದಾಗಿರಬೇಕು?

    ನಿಜ ಜೀವನದ ಹಿನ್ನೆಲೆ ಸಂಗೀತ ಯಾವುದಾಗಿರಬೇಕು?

    'RRR' ಸಿನಿಮಾ ಕಳೆದ ಶುಕ್ರವಾರ ಬಿಡುಗಡೆ ಆಯ್ತು. ಸಿನಿಮಾ ಬಿಡುಗಡೆಗೆ ಮುನ್ನ ರಾಜಮೌಳಿ, ಜೂ ಎನ್‌ಟಿಆರ್ ಹಾಗೂ ರಾಮ್ ಚರಣ್ ಅವರುಗಳು ಹಲವೆಡೆ ಸಂದರ್ಶನಗಳಲ್ಲಿ ಪಾಲ್ಗೊಂಡರು. ಇಂಥಹಾ ಸಂದರ್ಶನಗಳಲ್ಲೊಂದರಲ್ಲಿ ಸಂದರ್ಶಕಿ, ರಾಮ್ ಚರಣ್ ತೇಜ ಅವರನ್ನುದ್ದೇಶಿಸಿ, 'ನಿಮ್ಮ ನಿಜ ಜೀವನದಲ್ಲಿ ನಿಮಗೆ ಒಂದು ಹಿನ್ನೆಲೆ ಸಂಗೀತ ಇರಬೇಕಾದರೆ ಅದು ಯಾವ ಸಂಗೀತ ಅಥವಾ ಹಾಡು ಆಗಿರುತ್ತದೆ. ಆ ಹಾಡು ನೀವು ಹೋದಲ್ಲೆಲ್ಲ ನಿಮ್ಮ ಹಿನ್ನೆಲೆ ಸಂಗೀತ ಆಗಿರುತ್ತದೆ. ಅದನ್ನು ಬದಲಾಯಿಸಲಾರಿರಿ ಎನ್ನುವುದಾದರೆ ಯಾವ ಹಾಡನ್ನು ನೀವು ಆರಿಸಿಕೊಳ್ಳುತ್ತೀರಿ'' ಎಂದು ಪ್ರಶ್ನೆ ಮಾಡುತ್ತಾರೆ.

    'ಮಗಧೀರ' ಹಾಡು ಸ್ಲೋ ಎಂದ ರಾಮ್ ಚರಣ್

    'ಮಗಧೀರ' ಹಾಡು ಸ್ಲೋ ಎಂದ ರಾಮ್ ಚರಣ್

    ರಾಮ್ ಚರಣ್ ಪ್ರಶ್ನೆಗೆ ಉತ್ತರ ಯೋಚಿಸುತ್ತಿರಬೇಕಾದರೆ, ಪಕ್ಕದಲ್ಲೇ ಇದ್ದ ಜೂ ಎನ್‌ಟಿಆರ್, ರಾಮ್ ಚರಣ್ ನಟಿಸಿರುವ ಸೂಪರ್ ಹಿಟ್ ಸಿನಿಮಾ 'ಮಗಧೀರ'ದ 'ಧೀರ ಧೀರ ಧೀರ' ಹಾಡು ನೆನಪಿಸುತ್ತಾರೆ. ಆಗ ರಾಮ್ ಚರಣ್ 'ಹೇ ಅದು ಬೇಡ ನಾನು ನಿಜ ಜೀವನದಲ್ಲಿ ಅಷ್ಟು ಸ್ಲೋ ಅಲ್ಲ' ಎನ್ನುತ್ತಾರೆ. ಬಳಿಕ ಇನ್ನು ಸ್ವಲ್ಪ ಯೋಚಿಸಿ, 'ಕೆಜಿಎಫ್' ಸಿನಿಮಾದ ಹಿನ್ನೆಲೆ ಸಂಗೀತ ಇದೆಯಲ್ಲ ಅದು ನನ್ನ ಜೀವನದ ಹಿನ್ನೆಲೆ ಸಂಗೀತ ಆಗಿರಬೇಕು ಎಂದುಕೊಳ್ಳುತ್ತೇನೆ. ಆ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ನಾನು ಹೋದಲ್ಲೆಲ್ಲ ನನ್ನ ಹಿನ್ನೆಲೆ ಸಂಗೀತವಾಗಿ ಅದು ಗುನುಗುತ್ತಿರಬೇಕು'' ಎಂದಿದ್ದಾರೆ.

    ಒಟ್ಟಾರೆ ಇವನಿಗೆ 'ಧೀರ' ಎಂದಿರಬೇಕು: ಜೂ ಎನ್‌ಟಿಆರ್

    ಒಟ್ಟಾರೆ ಇವನಿಗೆ 'ಧೀರ' ಎಂದಿರಬೇಕು: ಜೂ ಎನ್‌ಟಿಆರ್

    ಆಗ ಪಕ್ಕದಲ್ಲೇ ಇದ್ದ ಜೂ ಎನ್‌ಟಿಆರ್, 'ಧೀರ ಧೀರ ಧೀರ ಈ ಸುಲ್ತಾನ' ಎಂದು ಹಾಡುತ್ತಾರೆ. ನಂತರ ನೋಡಿ, ಇವನಿಗೆ ಒಟ್ಟಿನಲ್ಲಿ ಹಾಡಿನಲ್ಲಿ ಧೀರ ಎಂಬುದಿರಬೇಕು. 'ಮಗಧೀರ' ನಲ್ಲೂ 'ಕೆಜಿಎಫ್'ನಲ್ಲೂ ಧೀರ ಇದೆ'' ಎಂದು ಕಾಲೆಳೆಯುತ್ತಾರೆ. ರಾಮ್ ಹಾಗೂ ಜೂ ಎನ್‌ಟಿಆರ್ ಇಬ್ಬರೂ ಜೋರಾಗಿ ನಗುತ್ತಾರೆ. ಆಗ ಮತ್ತೊಮ್ಮೆ ರಾಮ್ ಚರಣ್, 'ಕೆಜಿಎಫ್' ಸಿನಿಮಾದ ಹಿನ್ನೆಲೆ ಸಂಗೀತ ಅದರಲ್ಲಿಯೂ ಆ 'ಧೀರ ಧೀರ ಧೀರ ಈ ಸುಲ್ತಾನ' ಹಾಡು ನನಗೆ ಬಹಳ ಇಷ್ಟ ಎನ್ನುತ್ತಾರೆ.

    'ಕೆಜಿಎಫ್' ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ

    'ಕೆಜಿಎಫ್' ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ

    'ಕೆಜಿಎಫ್' ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಸಿನಿಮಾದ ಹಾಡುಗಳು ಅದರಲ್ಲಿಯೂ ವಿಶೇಷವಾಗಿ ಸಿನಿಮಾದ ಹಿನ್ನೆಲೆ ಸಂಗೀತ ದೊಡ್ಡ ಹಿಟ್ ಆಗಿದೆ. ಇದೀಗ 'ಕೆಜಿಎಫ್ 2' ಸಿನಿಮಾಕ್ಕೂ ರವಿ ಬಸ್ರೂರು ಸಂಗೀತ ನೀಡಿದ್ದು, ಈಗಾಗಲೇ ಬಿಡುಗಡೆ ಆಗಿರುವ 'ತೂಫಾನ್' ಹಾಡು ದೊಡ್ಡ ಹಿಟ್ ಆಗಿದೆ. ಸಿನಿಮಾದ ಟ್ರೇಲರ್‌ನಲ್ಲಿ, ಟೀಸರ್‌ನಲ್ಲಿ ಈಗಾಗಲೇ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ. ಸಿನಿಮಾವು ಏಪ್ರಿಲ್ 14 ರಂದು ತೆರೆಗೆ ಬರಲಿದೆ.

    English summary
    Actor Ram Charan Tej likes KGF movie's background music. He said KGF's Dheera Dheera Sulthana music should be his background music for life time.
    Friday, April 1, 2022, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X