ಚಿತ್ರರಂಗ ಪ್ರವೇಶಿಸಿದ ರಾಮ್ ಗೋಪಾಲ್ ವರ್ಮಾ ಸೋದರ ಸೊಸೆ

ಭಾರತೀಯ ಚಿತ್ರರಂಗದಲ್ಲಿ ವಿವಾದಾತ್ಮಕ ನಿರ್ದೇಶಕ ಅಂತಾನೇ ಗುರುತಿಸಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಬಹುತೇಕ ಎಲ್ಲ ಭಾಷೆಯಲ್ಲಿ ಸಿನಿಮಾ ಮಾಡಿದ್ದಾರೆ. ನೈಜ ಘಟನೆ ಆಧಾರಿತ ಚಿತ್ರಗಳಿಗೆ ಹೆಚ್ಚು ಖ್ಯಾತಿ ಹೊಂದಿರುವ ವರ್ಮಾ, ಜೊತೆ ಜೊತೆಗೆ ವಿವಾದವನ್ನ ತನ್ನ ಬ್ರಾಂಡ್ ಆಗಿ ಬೆಳಸಿಕೊಂಡು ಬಂದಿದ್ದಾರೆ.

ರಾಮ್ ಗೋಪಾಲ್ ವರ್ಮಾ ಬಿಟ್ಟರೇ ತನ್ನ ಕುಟುಂಬದಿಂದ ಬೇರೆ ಯಾರೂ ಸಿನಿಮಾರಂಗದಲ್ಲಿ ಇರುವ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ, ಆರ್.ಜಿ.ವಿಯ ಸೋದರ ಸೊಸೆ ಶ್ರಾವ್ಯ ಶರ್ಮಾ ಅಧಿಕೃತವಾಗಿ ಸಿನಿಮಾ ಲೋಕಕ್ಕೆ ಪ್ರವೇಶ ಮಾಡುತ್ತಿದ್ದಾರೆ.

ಈ ಹಿಂದೆ ರಾಮ್ ಗೋಪಾಲ್ ವರ್ಮಾ ಜೊತೆ ಸಿನಿಮಾ ಮೇಕಿಂಗ್ ವೇಳೆ ಕಾಣಿಸಿಕೊಂಡಿದ್ದ ಶ್ರಾವ್ಯ ಸದ್ಯದಲ್ಲೇ ಬಣ್ಣದ ಜಗತ್ತಿಗೆ ಕಾಲಿಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ಸುದ್ದಿ ಈಗ ನಿಜವಾಗಿದೆ. ಆದರೆ, ಶ್ರಾವ್ಯ ವರ್ಮಾ ಇಂಡಸ್ಟ್ರಿ ಪ್ರವೇಶ ಮಾಡುತ್ತಿರುವುದು ನಟಿಯಾಗಲ್ಲ. ನಿರ್ಮಾಪಕಿಯಾಗಿ ತನ್ನ ಸಿನಿ ಜರ್ನಿ ಆರಂಭಿಸಿದ್ದಾರೆ.

Ram gopal varma niece shravya varma enters film industry

'ಮಹಾನಟಿ' ಸಿನಿಮಾದಿಂದ ಮತ್ತಷ್ಟು ಖ್ಯಾತಿ ಗಳಿಸಿಕೊಂಡ ಕೀರ್ತಿ ಸುರೇಶ್ ನಟಿಸುತ್ತಿರುವ ಮುಂದಿನ ಚಿತ್ರಕ್ಕೆ ಶ್ರಾವ್ಯ ವರ್ಮಾ ಬಂಡವಾಳ ಹಾಕುತ್ತಿದ್ದಾರೆ. ನಾಗೇಶ್ ಕುಕುನೂರ್ ಈ ಚಿತ್ರವನ್ನ ನಿರ್ದೇಶನ ಮಾಡಲಿದ್ದು, ದಿಲ್ ರಾಜು ಕೂಡ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ.

Ram gopal varma niece shravya varma enters film industry

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಸಂತಸ ಹಂಚಿಕೊಂಡಿರುವ ಶ್ರಾವ್ಯ ವರ್ಮಾ, ''ನನ್ನ ಮೊದಲ ಪ್ರಯತ್ನದ ಬಗ್ಗೆ ನಾನು ತುಂಬಾ ನರ್ವಸ್ ಆಗಿದ್ದೇನೆ. ನನ್ನ ಕನಸಿನ ತಂಡದ ಜೊತೆ ಮೊದಲ ಸಿನಿಮಾ ಮಾಡುತ್ತಿದ್ದೇನೆ. ಇದಕ್ಕಿಂತ ಒಳ್ಳೆಯ ಆರಂಭ ನನಗೆ ಸಿಗಲ್ಲ ಅನಿಸುತ್ತಿದೆ'' ಎಂದು ಹೇಳಿದ್ದಾರೆ.

ಇನ್ನು ತನ್ನ ಸೋದರ ಸೊಸೆ ನಿರ್ಮಾಪಕಿಯಾಗಿ ಇಂಡಸ್ಟ್ರಿಗೆ ಬರುತ್ತಿರುವುದನ್ನ ರಾಮ್ ಗೋಪಾಲ್ ವರ್ಮಾ ಸ್ವಾಗತಿಸಿ, ಶುಭ ಕೋರಿದ್ದಾರೆ. ''ಒಳ್ಳೆಯದಾಗಲಿ, ಇದಕ್ಕಿಂತ ಒಳ್ಳೆಯ ಆರಂಭ ನಿನಗೆ ಸಿಗಲ್ಲ ಎಂದು ನಾನು ಕೂಡ ಒಪ್ಪುತ್ತೇನೆ'' ಎಂದಿದ್ದಾರೆ.

More from Filmibeat

English summary
Indian Famous director Ram gopal varma's niece shravya varma enters film industry. she producing keerthi suresh upcoming movie. directed by nagesh kukunoor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X