For Quick Alerts
  ALLOW NOTIFICATIONS  
  For Daily Alerts

  ಯೂಟ್ಯೂಬಲ್ಲಿ ನಿಂಬೆಹುಳಿ ಹಾಡು ಸೂಪರ್ ಹಿಟ್

  By Rajendra
  |

  director Hemanth Hegde
  ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್ ನಲ್ಲಿ ಮತ್ತೊಂದು ಕನ್ನಡದ ಗೀತೆ ಸೂಪರ್ ಹಿಟ್ ಆಗಿದೆ. ಈ ಹಿಂದೆ ಕಾಮಿಡಿ ಸ್ಟಾರ್ ಕೋಮಲ್ ಅಭಿನಯದ 'ಗೋವಿಂದಾಯ ನಮಃ' ಚಿತ್ರದ "ಪ್ಯಾರ್ ಗೆ ಆಗ್ಬಿಟ್ಟೈತೆ..." ಹಾಡು ಸೂಪರ್ ಹಿಟ್ ಆಗಿತ್ತು. ಇದಕ್ಕೂ ಮುನ್ನ "ವೈ ದಿಸ್ ಕೊಲವೆರಿ ಡಿ.." ಎಂಬ ಹಾಡೂ ಅಷ್ಟೇ ಜನಪ್ರಿಯವಾಗಿತ್ತು.

  ಈಗ ಹೇಮಂತ್ ಹೆಗಡೆ ಅಭಿನಯದ 'ನಿಂಬೆಹುಳಿ' ಚಿತ್ರದ ಹಾಡು "ರಾಮ ರಾಮಾ ಶ್ರೀರಾಮ ಫಸ್ಟ್ ನೈಟೇ ಟ್ರಾಫಿಕ್ ಜಾಮಾ..." (ವಿಡಿಯೋ ನೋಡಿ) ಎಂಬ ಹಾಡು ಯೂಟ್ಯೂಬ್ ನಲ್ಲಿ ಹೊಸ ಹವಾ ಎಬ್ಬಿಸುತ್ತಿದೆ. ವೀರ್ ಸಮರ್ಥ್ ಸಂಗೀತ ಸಂಯೋಜಿಸಿರುವ ಈ ಹಾಡನ್ನು ಬರೆದವರು ಜನಪ್ರಿಯ ಹನಿಗವಿ ಎಚ್ ದುಂಡಿರಾಜ್.

  ಈಗಾಗಲೆ ಈ ಹಾಡು 80,000 ಹಿಟ್ಸ್ ದಾಖಲಿಸಿದೆ. ಚಿತ್ರ ಬಿಡುಗಡೆ ಹೊತ್ತಿಗೆ ಈ ಹಾಡು ಮತ್ತಷ್ಟು ಜನರನ್ನು ಸೆಳೆಯುವುದು ಖಂಡಿತ ಎನ್ನುತ್ತಾರೆ ಚಿತ್ರದ ನಿರ್ದೇಶಕರೂ ಆಗಿರುವ ಹೇಮಂತ್ ಹೆಗಡೆ. ಕಳೆದ ಮೂರು ತಿಂಗಳಿಂದ ಈ ಹಾಡು ಯೂಟ್ಯೂಬ್ ನಲ್ಲಿ ಹಂತಹಂತವಾಗಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

  ಈ ಚಿತ್ರದ ಮತ್ತೊಂದು ವಿಶೇಷ ಎಂದರೆ ಬಾಲಿವುಡ್ ನಟ ಅನುಪಮ್ ಖೇರ್ ಕನ್ನಡಕ್ಕೆ ಕರೆತರುತ್ತಿರುವುದು. 'ನಿಂಬೆಹುಳಿ' ಚಿತ್ರ ಕಳೆದ ವರ್ಷವೇ ಸೆಟ್ಟೇರಿದರೂ ಅನುಪಮ್ ಖೇರ್ ಅವರ ಕಾಲ್ ಶೀಟ್ ಗಾಗಿ ಚಿತ್ರತಂಡ ಕಾಯುತ್ತಿದೆಯಂತೆ. ಈ ಹಿಂದೆ ಅವರು ಡೇಟ್ಸ್ ಕೊಟ್ಟಿದ್ದರೂ ಕಾರಣಾಂತರಗಳಿಂದ ಕ್ಯಾನ್ಸಲ್ ಮಾಡಿಕೊಂಡಿದ್ದರು.

  ಪಕ್ಕಾ ಕಾಮಿಡಿ ಚಿತ್ರವಾದ ಇದರಲ್ಲಿ ಮೂವರು ನಾಯಕಿಯರು. ಮುಂಬೈ ಬೆಡಗಿಯರಾದ ಕೋಮಲ್ ಝಾ ಹಾಗೂ ಮಧುರಿಮಾ ಈಗಾಗಲೆ ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಚಿತ್ರದ ಮತ್ತೊಬ್ಬ ನಾಯಕಿ ನಿವೇದಿತಾ.

  ಪಿಆರ್ ಸೌಂದರರಾಜನ್ ಅವರ ಸಂಕಲನ ಹಾಗೂ ಸಂದೀಪ್ ಕುಮಾರ್ ಛಾಯಾಗ್ರಹಣ 'ನಿಂಬೆಹುಳಿ' ಚಿತ್ರಕ್ಕಿದೆ. ಈ ಹಿಂದೊಮ್ಮೆ ವಿಶಿಷ್ಟ ಬಗೆಯ ಕಾರ್ಟೂನ್ ಗಳಿಂದ 'ನಿಂಬೆಹುಳಿ' ಪತ್ರಿಕಾ ಜಾಹೀರಾತಿನಿಂದ ಹೇಮಂತ್ ಹೆಗಡೆ ಗಮನಸೆಳೆದಿದ್ದರು. ಆಗ ಸುದ್ದಿ ಮಾಡಿದ 'ನಿಂಬೆಹುಳಿ' ಚಿತ್ರ ಮತ್ತೆ ನಾಪತ್ತೆಯಾಗಿತ್ತು. ಇದೀಗ ಮತ್ತೊಮ್ಮೆ ಯೂಟ್ಯೂಬ್ ನಲ್ಲಿ ಸುದ್ದಿ ಮಾಡುತ್ತಿದೆ. (ಏಜೆನ್ಸೀಸ್)

  English summary
  Rama Rama Song of Nimbe Huli starring Hemanth Hegde, Madhurima Tuli, Smitha and komalja and Anupam kher has reached over 80000 hits on You Tube. Music by Veer Samarth
 lyrics by Dundiraj and direction by Hemanth Hegde.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X