ಶರಣ್ ಡ್ಯಾನ್ಸ್ ನೋಡಿ ಶೇಕ್ ಆಯ್ತು ಸ್ಯಾಂಡಲ್ ವುಡ್!
Recommended Video

ನಟ ಶರಣ್ ನಿನ್ನೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರ ಈ ವರ್ಷದ ಹುಟ್ಟುಹಬ್ಬದ ವಿಶೇಷವಾಗಿ 'ರಾಂಬೋ 2' ಸಿನಿಮಾದ ಒಂದು ಹಾಡಿನ ಟೀಸರ್ ರಿಲೀಸ್ ಆಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡು ದೊಡ್ಡ ಜನಪ್ರಿಯತೆ ಗಳಿಸುತ್ತಿದೆ.
ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದ ಶರಣ್ 'ರಾಂಬೋ' ಸಿನಿಮಾದ ಮೂಲಕ ಹೀರೋ ಆದರು. ಈಗ 'ರಾಂಬೋ 2' ಮೂಲಕ ಅವರ ನಟನ ಸಾಮರ್ಥ್ಯ ಮತ್ತಷ್ಟು ಜಾಸ್ತಿಯಾಗಿದೆ. ಶರಣ್ ಡ್ಯಾನ್ಸ್ ನಿಜಕ್ಕೂ ಯಾವ ಸ್ಟಾರ್ ಹೀರೋಗಳಿಗೂ ಕಡಿಮೆ ಇಲ್ಲದೆ ರೀತಿ ಇದೆ.
ಈ ಹಿಂದಿನ 'ರಾಜ್ ವಿಷ್ಣು' ಸಿನಿಮಾದಲ್ಲಿಯೂ ಶರಣ್ ಸಖತ್ ಸ್ಟೆಪ್ ಹಾಕಿದ್ದರು. ಈಗಲೂ ಶರಣ್ ತಮ್ಮ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಶರಣ್ ಡ್ಯಾನ್ಸ್ ನೋಡಿ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದ್ದಾರೆ. ಮುಂದೆ ಓದಿ...

'ರಾಂಬೋ 2' ಹಾಡು
ಶರಣ್ ಅವರ ಹುಟ್ಟುಹಬ್ಬದ ವಿಶೇಷವಾಗಿ 'ರಾಂಬೋ 2' ಸಿನಿಮಾದ 'ಯವ್ವ ಯವ್ವ...' ಎಂಬ ಹಾಡು ರಿಲೀಸ್ ಆಗಿದೆ. ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ವಿಜಯ ಪ್ರಕಾಶ್ ಹಾಡಿದ್ದಾರೆ.

ಸೂಪರ್ ಕ್ವಾಲಿಟಿ
ಈ ಹಾಡಿನ ಕ್ವಾಲಿಟಿ ತುಂಬ ಚೆನ್ನಾಗಿದೆ. 4K ಕ್ವಾಲಿಟಿ ಯಲ್ಲಿ ಹಾಡನ್ನು ಹೊರತಂದಿದ್ದಾರೆ. ಹಾಡಿಗೆ ಹಾಕಿರುವ ಸೆಟ್, ಕಾಸ್ಟೂಮ್ ಎಲ್ಲವೂ ಸಖತ್ ರಿಚ್ ಆಗಿದೆ. ಇವೆಲ್ಲದರಿಂದ ಹಾಡನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ.

ಡ್ಯಾನ್ಸ್ ಹೈಲೆಟ್
ಹಾಡಿನಲ್ಲಿ ಡ್ಯಾನ್ಸ್ ಹೈಲೆಟ್ ಆಗಿದೆ. ಶರಣ್ ಮತ್ತು ಆಶಿಕಾ ಅವರ ಡ್ಯಾನ್ಸ್ ನೋಡಿ ಅಭಿಮಾನಿಗಳು ಕ್ವೀನ್ ಬೋಲ್ಡ್ ಆಗಿದ್ದಾರೆ. ಇಬ್ಬರು ಲುಕ್ ಕೂಡ ಸಖತ್ ಆಗಿದೆ. 'ಎಬಿಸಿಡಿ' ಖ್ಯಾತಿಯ ಬಾಲಿವುಡ್ ಡ್ಯಾನ್ಸ್ ಮಾಸ್ಟರ್ ಶ್ರಾಯ್ ಖನ್ನಾ ಮೊದಲ ಬಾರಿಗೆ ಕನ್ನಡಕ್ಕೆ ಬಂದಿದ್ದಾರೆ.

ಅಭಿಮಾನಿಗಳ ಕಮೆಂಟ್ಸ್
ಯೂ ಟ್ಯೂಬ್ ನಲ್ಲಿ ಈ ಹಾಡು ನೋಡಿ ಖುಷಿ ಆಗಿರುವ ಅಭಿಮಾನಿಗಳು ಶರಣ್ ಡ್ಯಾನ್ ಕಂಡು ಫಿದಾ ಆಗಿದ್ದಾರೆ. ಸಾಕಷ್ಟು ಜನರು ಡ್ಯಾನ್ಸ್ ಬಗ್ಗೆ ಪಾಸಿಟಿವ್ ಆಗಿ ಕಮೆಂಟ್ಸ್ ಮಾಡಿದ್ದಾರೆ.

ಚಿತ್ರದ ಬಗ್ಗೆ
'ರಾಂಬೋ 2' ಸಿನಿಮಾ ಒಂದು ಕಾಮಿಡಿ ಸಿನಿಮಾವಾಗಿದೆ. ಅನಿಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಶರಣ್ ಮತ್ತು ಆಶಿಕಾ ಜೋಡಿಯಾಗಿದ್ದಾರೆ. ಚಿಕ್ಕಣ್ಣ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿದ್ದಾರೆ.


Click it and Unblock the Notifications











