»   » 1 ಮಿಲಿಯನ್ ಹೃದಯ ಗೆದ್ದ ರಾಂಬೋ 2 ಚಿತ್ರದ 'ಚುಟ್ಟು ಚುಟ್ಟು..' ಹಾಡು

1 ಮಿಲಿಯನ್ ಹೃದಯ ಗೆದ್ದ ರಾಂಬೋ 2 ಚಿತ್ರದ 'ಚುಟ್ಟು ಚುಟ್ಟು..' ಹಾಡು

Posted By:
Subscribe to Filmibeat Kannada
ರಾಂಬೋ 2 ಚಿತ್ರದ 'ಚುಟ್ಟು ಚುಟ್ಟು' ಹಾಡಿನ ವಿಶೇಷವೇನು ? | Filmibeat Kannada

'ರಾಂಬೋ 2' ಸಿನಿಮಾ ಹಾಡುಗಳ ಮೂಲಕ ದೊಡ್ಡ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಸದ್ಯ ಮೂರು ಹಾಡುಗಳು ಬಿಡುಗಡೆಯಾಗಿದ್ದು, ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ. ಅದರಲ್ಲಿಯೂ ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ 'ಚುಟ್ಟು ಚುಟ್ಟು..' ಹಾಡು ಇದೀಗ ಯೂಟ್ಯೂಬ್ ನಲ್ಲಿ ಸಂಚಲನವನ್ನು ಸೃಷ್ಟಿ ಮಾಡಿದೆ.

'ಚುಟು ಚುಟು ಎನ್ನುತೈತಿ...' ಹಾಡು ರಿಲೀಸ್ ಆದ ಒಂದು ವಾರದ ಒಳಗೆ ಯೂ ಟ್ಯೂಬ್ ನಲ್ಲಿ 1 ಮಿಲಿಯನ್ ಹಿಟ್ಸ್ ಪಡೆದಿದೆ. ಪಕ್ಕಾ ಉತ್ತರ ಕರ್ನಾಟಕದ ಜವಾರಿ ಶೈಲಿಯ ಈ ಹಾಡಿಗೆ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರತಂಡಕ್ಕೆ ಹಾಡುಗಳಿಗೆ ಸಿಕ್ಕ ಪ್ರತಿಕ್ರಿಯೆ ಕಂಡು ಸಿಕ್ಕಾಪಟ್ಟೆ ಖುಷಿ ಆಗಿದೆ. ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ತರುಣ್ ಸುಧೀರ್ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಸಿನಿಮಾದ 'ಬೇಡ ಮಗ ದಮ್ಮು..' ಹಾಡನ್ನು ಸಹ ಒಂದು ಮಿಲಿಯನ್ ಗೂ ಅಧಿಕ ಜನರು ವೀಕ್ಷಿಸಿದ್ದಾರೆ.

ಟ್ರೆಂಡ್ ಆಯ್ತು ಶರಣ್ ಹಾಡಿದ ಉತ್ತರ ಕರ್ನಾಟಕದ ಜವಾರಿ ಹಾಡು

ಉತ್ತರ ಕರ್ನಾಟಕ ಭಾಗದಲ್ಲಿ ದಿನನಿತ್ಯ ಬಳಸುವ ಪದಗಳನ್ನು ಬಳಸಿ ಸಖತ್ ಮಜಾ ಕೊಡುವ ಈ ಹಾಡನ್ನು ಮಾಡಲಾಗಿದೆ. ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಶಿವು ಬೆರ್ಗಿ ಸಾಹಿತ್ಯ ಬರೆದಿದ್ದಾರೆ. ಶಮಿತಾ ಮಲ್ನಾಡ್ ಮತ್ತು ರವೀಂದ್ರ ಸೊರ್ಗವಿ ಹಾಡಿದ್ದಾರೆ. ಹಾಡಿನ ಎಲ್ಲ ಅಂಶಗಳ ಸೂಪರ್ ಆಗಿದೆ. ಟಪ್ಪಾಗುಂಚಿ ಹಾಡುಗಳ ಪ್ರಿಯರಿಗೆ ಈ ಹಾಡು ಬಹಳ ಇಷ್ಟ ಆಗಿದೆ. 'ರಾಂಬೋ 2' ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನ ಮಾಡಿದ್ದರೆ.

Rambo 2 kannada movie Chutuchutu song crossed 1 million views in youtube

ಈ ಹಾಡಿನಲ್ಲಿ ಗಮನ ಸೆಳೆಯುವ ಅಂಶಗಳಲ್ಲಿ ಪ್ರಮುಖವಾಗಿರುವುದು ಶರಣ್ ಮತ್ತು ಆಶಿಕಾ ರಂಗನಾಥ್ ಡ್ಯಾನ್ಸ್. ಅದರಲ್ಲಿಯೂ ಶರಣ್ ನೃತ್ಯದ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಒಬ್ಬ ಕಾಮಿಡಿ ನಟನಾಗಿದ್ದ ಶರಣ್ ಹೀರೋ ಆದ ನಂತರ ಈ ಮಟ್ಟಕ್ಕೆ ಡ್ಯಾನ್ಸ್ ಮಾಡುತ್ತಾರೆ ಅಂದರೆ ಅದನ್ನು ಎಲ್ಲರೂ ಮೆಚ್ಚಿಕೊಳ್ಳಬೇಕು. ಇನ್ನು ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅನೇಕ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದ ಭೂಷಣ್ ಅವರ ಮೊದಲ ಸಿನಿಮಾ ಇದಾಗಿದೆ.

English summary
Actor Sharan's Rambo 2 kannada movie Chutuchutu song crossed 1 million views in youtube.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X