ಮಕ್ಕಳ ಮುಂದೆ ಲಿಪ್‌ಲಾಕ್‌.. ಫ್ಲೈಟ್‌ನಲ್ಲೇ ಹನಿಮೂನು.. ಪದೇ ಪದೇ ರಣ್ಬೀರ್ ತುಟಿಗೆ ತುಟಿ ಬೆರೆಸಿದ ರಶ್ಮಿಕಾ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗು, ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ. ರಣ್‌ಬೀರ್ ಕಪೂರ್ ಜೋಡಿಯಾಗಿ ಬಾಲಿವುಡ್‌ನಲ್ಲಿ ನಟಿಸಿರುವ 'ಅನಿಮಲ್' ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಟೀಸರ್ ಬಳಿಕ ಚಿತ್ರದ ಸಾಂಗ್ ಹೊರಬಂದಿದೆ. ಹಾಡಿನ ತುಂಬಾ ರಣ್ಬೀರ್‌- ರಶ್ಮಿಕಾ ಲಿಪ್‌ಲಾಕ್ ದೃಶ್ಯಗಳು ಹೈಲೆಟ್ ಆಗಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಅನಿಮಲ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಡಿಸೆಂಬರ್ 1ಕ್ಕೆ ಸಿನಿಮಾ ಗ್ರ್ಯಾಂಡ್ ರಿಲೀಸ್‌ಗೆ ರೆಡಿಯಾಗಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗುತ್ತಿದೆ. ಜಾಮ್8 ಸಂಗೀತದ ಹಾಡನ್ನು ಪ್ರೀತಂ ಹಾಗೂ ರಾಘವ್ ಚೈತನ್ಯಾ ಹಾಡಿದ್ದಾರೆ. ವರದರಾಜ್ ಚಿಕ್ಕಬಳ್ಳಾಪುರ ಕನ್ನಡ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

Ranbir-Kapoo- Rashmika-Mandanna-animal-liplock

ಪೋಕಷರ ಒಪ್ಪಿಗೆ ಇಲ್ಲದೇ ಮದುವೆಯಾಗುವ ನಾಯಕ-ನಾಯಕಿ ಹನಿಮೂನ್‌ಗೆ ಹೋಗುವ 'ಅನಿಮಲ್' ಚಿತ್ರದ ಸನ್ನಿವೇಶದಲ್ಲಿ ಈ ಸಾಂಗ್ ಮೂಡಿ ಬಂದಿದೆ. ನಾಯಕಿಯ ಮನೆಯಲ್ಲಿ ಇಬ್ಬರ ಮದುವೆ ವಿಷಯ ಕೇಳಿ ಎಲ್ಲರೂ ಗರಂ ಆಗಿರುತ್ತಾರೆ. ಆದರೆ ಯಾವುದಕ್ಕೂ ಉತ್ತರಿಸದೇ ಇಬ್ಬರೂ ತುಟಿತುಟಿ ಸೇರಿಸಿ ಎಲ್ಲರ ಬಾಯಿ ಮುಚ್ಚಿಸುತ್ತಾರೆ. ಬಳಿಕ ಪ್ರೈವೇಟ್ ಜೆಟ್‌ನಲ್ಲಿ ಹನಿಮೂನ್‌ಗೆ ಹೊರಡುವ ಜೋಡಿ ಜೆಟ್ ಒಳಗೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿರುವುದನ್ನು ನೋಡಬಹುದು.

ಹಾಡಿನ ಉದ್ದಕ್ಕೂ ಪದೇ ಪದೆ ರಣ್ಬೀರ್- ರಶ್ಮಿಕಾ ತುಟಿಗೆ ತುಟಿ ಸೇರಿಸಿ ಚುಂಬಿಸಿರುವುದನ್ನು ನೋಡಬಹುದು. ಈ ಹಿಂದೆ 'ಗೀತಾ ಗೋವಿಂದಂ' ಹಾಗೂ 'ಡಿಯರ್ ಕಾಮ್ರೆಡ್' ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಲಿಪ್‌ಲಾಕ್ ಮಾಡಿದ್ದು ಭಾರೀ ಸುದ್ದಿ ಆಗಿತ್ತು. ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಎಂಗೇಜ್‌ಮೆಂಟ್ ಮುರಿದು ಬೀಳಲು ಇದೇ ಕಾರಣ ಎನ್ನುವಂತೆ ಕೆಲವರು ಮಾತನಾಡಿದ್ದರು. ಇದೀಗ ಮತ್ತೊಮ್ಮೆ ರಶ್ಮಿಕಾ ಲಿಪ್‌ಲಾಕ್ ಸೀನ್ ಹಾಟ್ ಟಾಪಿಕ್ ಆಗಿದೆ.

'ಅರ್ಜುನ್ ರೆಡ್ಡಿ' ಸಿನಿಮಾ ಕಟ್ಟಿಕೊಟ್ಟಿದ್ದ ಸಂದೀಪ್ ರೆಡ್ಡಿ ವಂಗಾ 'ಅನಿಮಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆ ಸಿನಿಮಾ ವಿಜಯ್ ದೇವರಕೊಂಡ ಹೀರೊ ಆಗಿ ನಟಿಸಿದ್ದರು. ಸಿಕ್ಕಾಪಟ್ಟೆ ಬೋಲ್ಡ್ ದೃಶ್ಯಗಳಿಂದ ಸಿನಿಮಾ ಸದ್ದು ಮಾಡಿತ್ತು. ಅದೇ ರೀತಿ 'ಅನಿಮಲ್' ಸಿನಿಮಾ ಕೂಡ ಸದ್ದು ಮಾಡುವ ಸುಳಿವು ಸಿಗುತ್ತಿದೆ.

Ranbir-Kapoo- Rashmika-Mandanna-animal-liplock

'ಅನಿಮಲ್' ತಂದೆ ಮಗನ ಸಂಬಂಧದ ಸುತ್ತಾ ಸುತ್ತುವ ಕತೆ. ಚಿತ್ರದಲ್ಲಿ ಅನಿಲ್ ಕಪೂರ್, ರಣ್‌ಬೀರ್ ತಂದೆ ಪಾತ್ರದಲ್ಲಿ ನಟಿಸಿದ್ದಾರೆ. ಮಗನನ್ನು ತಂದೆ ಬಹಳ ಕಟ್ಟುನಿಟ್ಟಾಗಿ ಬೆಳೆಸುತ್ತಾನೆ. ಆದರೆ ಅದೊಂದು ಘಟನೆ ಮಗನನ್ನು ಕ್ರೂರ ಸೈಕೋಪಾತ್ ಆಗುವಂತೆ ಮಾಡಿಬಿಡುತ್ತದೆ. ಅದು ಏನು ಎನ್ನುವುದನ್ನು ತೆರೆಮೇಲೆ ನೋಡಬೇಕು. 'ಅನಿಮಲ್' ಚಿತ್ರದ ಹಾಡುಗಳಿಗೆ ಏಳೆಂಟು ಜನ ಸಂಗೀತ ಸಂಯೋಜನೆ ಮಾಡಿದ್ದಾರೆ.

ಟೀ ಸೀರಿಸ್, ಭದ್ರಕಾಳಿ ಪಿಕ್ಚರ್ಸ್ ಹಾಗೂ ಸಿನಿ1 ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ 'ಅನಿಮಲ್' ಸಿನಿಮಾ ನಿರ್ಮಾಣ ಮಾಡಿವೆ. ಈ ಗ್ಯಾಂಗ್‌ಸ್ಟರ್ ಚಿತ್ರ ಆಗಸ್ಟ್ 11ಕ್ಕೆ ರಿಲೀಸ್ ಆಗಬೇಕಿತ್ತು. ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಬಾಬಿ ಡಿಯೋಲ್, ಶಕ್ತಿ ಕಪೂರ್, ಸುರೇಶ್ ಓಬಿರಾಯ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

'ಅನಿಮಲ್' ಚಿತ್ರ ಕನ್ನಡಕ್ಕೆ ಡಬ್ ಆಗ್ತಿದ್ದು ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಸ್ವತಃ ರಶ್ಮಿಕಾ ಡಬ್ಬಿಂಗ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಕೆಲ ಪರಭಾಷೆ ಸಿನಿಮಾಗಳಿಗೆ ಆಕೆ ಕನ್ನಡದಲ್ಲಿ ಡಬ್ ಮಾಡಲು ಅಸಡ್ಡೆ ತೋರಿಸಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. 100 ಕೋಟಿ ರೂ. ಬಜೆಟ್‌ನಲ್ಲಿ 'ಅನಿಮಲ್' ಸಿನಿಮಾ ನಿರ್ಮಾಣವಾಗಿದ್ದು ದೊಡ್ಡಮಟ್ಟದಲ್ಲೇ ತೆರೆಗಪ್ಪಳಿಸುತ್ತಿದೆ.

More from Filmibeat

English summary
Ranbir Kapoor, Rashmika liplock in animal song goes viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X