»   » ಪ್ರೇಮಿಗಳಿಗಾಗಿ ಇಲ್ಲೊಂದು ವಿಶೇಷ Rap ಸಾಂಗ್

ಪ್ರೇಮಿಗಳಿಗಾಗಿ ಇಲ್ಲೊಂದು ವಿಶೇಷ Rap ಸಾಂಗ್

Posted By:
Subscribe to Filmibeat Kannada

ಕನ್ನಡ ಇಂಡಸ್ಟ್ರಿಯಲ್ಲಿ ಸದ್ಯ Rap ಸಂಗೀತದ ಅಲೆ ಜೋರಾಗಿದೆ. ಪ್ರತಿಭಾನ್ವಿತ ಯುವಕರು ತಮ್ಮದೇ ಆದ ಗುಂಪು ಕಟ್ಟಿಕೊಂಡು, ತಮ್ಮ ಪ್ರತಿಭೆಯನ್ನ ಪ್ರದರ್ಶಿಸುತ್ತಿದ್ದಾರೆ. ಇಂತವರ ಸಾಲಿಗೆ ಈಗ Lazy B ತಂಡವೂ ಸೇರಿದೆ.

ಪ್ರೇಮಿಗಳ ದಿನದ ವಿಶೇಷವಾಗಿ ಹೊಸ Rap ಸಾಂಗ್ ಮಾಡಿರುವ ಈ ತಂಡ ಯೂಟ್ಯೂಬ್ ನಲ್ಲಿ ಹೊಸ ಹಾಡನ್ನ ರಿಲೀಸ್ ಮಾಡಿದೆ. ಲವ್ ಥೀಮ್ ನಲ್ಲಿ ಸಾಹಿತ್ಯ ರಚನೆಯಾಗಿದೆ. ಯುವಕ ಮತ್ತು ಯುವತಿಯ ಪ್ರೀತಿ ಮತ್ತು ಬ್ರೇಕ್ ಅಪ್ ಕುರಿತು ಈ ಹಾಡು ಮೂಡಿ ಬಂದಿದ್ದು, ಯೂತ್ ಜನಾಂಗಕ್ಕೆ ಇಷ್ಟವಾಗುವಂತಿದೆ.

ಅಂದ್ಹಾಗೆ, ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿರುವುದು ಭರತ್ ಕುಮಾರ್ (LAZY B). ಜೊತೆಗೆ ಅನುಷ್ಕಾ ನಾರಾಯಣ್ ಕೂಡ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

Rap Song from Lazy B Nenapu

ಸದ್ಯ, ಯೂಟ್ಯೂಬ್ ನಲ್ಲಿ ತೆರೆಕಂಡಿರುವ ಈ ಹಾಡಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಲಾವಿದರ ಅಭಿನಯ ಮತ್ತು ಸಂಗೀತಕ್ಕೆ ಹೆಚ್ಚು ಮರುಳಾಗಿರುವ ಸಂಗೀತ ಪ್ರಿಯರು 'ನೆನಪು' ಹಾಡು ಕೇಳಿ ಸಖತ್ ಖುಷಿಯಾಗಿದ್ದಾರೆ.

English summary
Watch Full HD Kannada Rap Song from Lazy B Nenapu. Starring ft Sri Raksha Achar, Anushka in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada