For Quick Alerts
  ALLOW NOTIFICATIONS  
  For Daily Alerts

  ಹಾಡಹಗಲೆ ರೆಸ್ಟೊರೆಂಟ್‌ನಲ್ಲಿ ಗುಂಡಿಕ್ಕಿ ಗಾಯಕನ ಹತ್ಯೆ

  |

  ಗಾಯಕ ಸಿಧು ಮೂಸೆವಾಲಾ ಅನ್ನು ನಡುರಸ್ತೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯ ತನಿಖೆ ಮುಗಿಯುವ ಮುನ್ನವೇ ದೂರದ ಅಮೆರಿಕದಲ್ಲಿ ಅಂಥಹುದೇ ಒಂದು ಪ್ರಕರಣ ನಡೆದಿದೆ. ಜನಪ್ರಿಯ ರ್ಯಾಪ್ ಗಾಯಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

  ಪಿಎನ್‌ಬಿ ರಾಕ್ ಹೆಸರಿನಿಂದ ಖ್ಯಾತಿಗಳಿಸಿದ್ದ ರ್ಯಾಪರ್ ಅನ್ನು ಸೆಪ್ಟೆಂಬರ್ 12 ರಂದು ದಕ್ಷಿಣ ಲಾಸ್‌ಏಂಜಲ್ಸ್‌ನ ಜನಪ್ರಿಯ ರೆಸ್ಟೊರೆಂಟ್ ಒಂದರಲ್ಲಿ ಅಗಂತುಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

  ಸೆಪ್ಟೆಂಬರ್ 12 ರ ಮಧ್ಯಾಹ್ನ ಗಾಯಕ ಪಿಎನ್‌ಬಿ ರಾಕ್ ತನ್ನ ಗರ್ಲ್‌ಫ್ರೆಂಡ್ ಜೊತೆಗೆ ದಕ್ಷಿಣ ಲಾಸ್‌ಏಂಜಲ್ಸ್‌ನ ಮ್ಯಾಂಚೆಸ್ಟರ್ ಅವೆನ್ಯುನಲ್ಲಿರುವ ಜನಪ್ರಿಯ ರೋಶಿಯೋಸ್ ಚಿಕನ್ ಆಂಡ್ ವೇಫೆಲ್ಸ್‌ ರೆಸ್ಟೊರೆಂಟ್‌ಗೆ ಊಟಕ್ಕೆಂದು ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಅಗಂತುಕನೊಬ್ಬ ರೆಸ್ಟೊರೆಂಟ್ ಒಳಗೆ ನುಗ್ಗಿ ಪಿಎನ್‌ಬಿ ರಾಕ್ ಗೆ ಗುಂಡಿಕ್ಕಿ ಹತ್ಯೆ ಮಾಡಿ ಆತ ಧರಿಸಿದ್ದ ಆಭರಣಗಳನ್ನು ಹೊತ್ತೊಯ್ದಿದ್ದಾನೆ.

  ಪಿಎನ್‌ಬಿ ರಾಕ್, ಅಮೆರಿಕದ ಜನಪ್ರಿಯ ರ್ಯಾಪರ್‌ಗಳಲ್ಲಿ ಒಬ್ಬರು. ಪಿಎನ್‌ಬಿ ರಾಕ್ ಸಣ್ಣ ವಯಸ್ಸಿನಲ್ಲಿರುವಾಗ ಅವರ ತಂದೆಯೂ ಸಹ ಕೊಲೆಯಾಗಿದ್ದರು. ಆ ನಂತರ ಪಿಎನ್‌ಬಿ ರಾಕ್ ಸಹ ಅಡ್ಡದಾರಿ ಹಿಡಿದು ಡ್ರಗ್ಸ್ ಮಾರಾಟ, ಹೊಡೆದಾಟ, ಕಳ್ಳತನ ಇನ್ನಿತರೆಗಳಲ್ಲಿ ತೊಡಗಿಕೊಂಡರು. ಬಳಿಕ ಅವರನ್ನು ಚಿಲ್ಡ್ರನ್ ರಿಫಾರ್ಪ್‌ ಸೆಂಟರ್‌ಗೆ ಸೇರಿಸಲಾಗಿತ್ತು. ಆ ನಂತರವೂ ಅವರು ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಂಡು ಜೈಲು ಶಿಕ್ಷೆ ಅನುಭವಿಸಿದರು.

  ಜೈಲಿನಲ್ಲಿರುವಾಗ ರ್ಯಾಪ್ ಬರೆಯಲು ಆರಂಭಿಸಿದ ಪಿಎನ್‌ಬಿ ರಾಕ್ ಆ ಬಳಿಕ ತಮ್ಮ ಹಾಡುಗಳಿಂದ ಜನಪ್ರಿಯರಾದರು. ಅವರ 'ಸೆಲ್ಫಿಶ್' ಹಾಡು ಅಮೆರಿಕದ 2016 ರ ಅತ್ಯುತ್ತಮ 100 ಹಾಡುಗಳಲ್ಲಿ 51 ನೇ ಸ್ಥಾನಗಳಿಸಿತ್ತು. ಹತ್ತು ಅತ್ಯುತ್ತಮ ಉದಯೋನ್ಮುಖ ಗಾಯಕರ ಪಟ್ಟಿಯಲ್ಲಿ ಸಹ ಪಿಎನ್‌ಬಿ ಹೆಸರು ಸೇರಿತ್ತು. ಆದರೆ ಈಗ ಅಗಂತುಕನ ಗುಂಡಿಗೆ ಬಲಿಯಾಗಿದ್ದಾರೆ.

  ಈ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ, ಹಣ ದೂಚುವ ಉದ್ದೇಶದಿಂದ ದಾಳಿಕೋರ ಗನ್ ತೆಗೆದುಕೊಂಡು ರೆಸ್ಟೊರೆಂಟ್ ಒಳಗೆ ಬಂದಿದ್ದ. ಪಿಎನ್‌ಬಿ ರಾಕ್ ಧರಿಸಿದ್ದ ಆಭರಣಗಳನ್ನು ಕಂಡು ಆತನನ್ನು ತನ್ನ ಗುರಿ ಮಾಡಿಕೊಂಡು ಗುಂಡು ಹೊಡೆದು ಆಭರಣಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ನಾವು ಸೆಕ್ಯುರಿಟಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ'' ಎಂದಿದ್ದಾರೆ.

  ಪಿಎನ್‌ಬಿ ರಾಕ್ ನಿಧನಕ್ಕೆ ಅಮೆರಿಕದ ಹಲವು ಸೆಲೆಬ್ರಿಟಿಗಳು, ರ್ಯಾಪರ್‌ಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

  English summary
  America's famous Raper PnB Rock killed in a restorant on September 12 in Los Angeles.
  Wednesday, September 14, 2022, 10:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X