For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಎಫೆಕ್ಟ್: ಗಾಯಕಿಯಾದ RJ ರಾಪಿಡ್ ರಶ್ಮಿ

  |

  'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಗಮನ ಸೆಳೆದ ಸ್ಪರ್ಧಿಗಳ ಪೈಕಿ ರಾಪಿಡ್ ರಶ್ಮಿ ಕೂಡ ಒಬ್ಬರು. ಬಾಯಿ ತೆಗೆದರೆ ಪಟ ಪಟ ಅಂತ ಮಾತನಾಡುವ ರಾಪಿಡ್ ರಶ್ಮಿ ಆರ್.ಜೆ ಅಂತ ಎಲ್ಲರಿಗೂ ಗೊತ್ತಿತ್ತು. ಆದ್ರೆ ರಾಪಿಡ್ ರಶ್ಮಿ ಉತ್ತಮ ಸಿಂಗರ್ ಕೂಡ ಹೌದು ಅನ್ನೋದು 'ಬಿಗ್ ಬಾಸ್' ಮನೆಯಲ್ಲಿ ಸಾಬೀತಾಗಿತ್ತು.

  ಗಾಯಕ ಮತ್ತು ಸಂಗೀತ ಸಂಯೋಜಕ ನವೀನ್ ಸಜ್ಜು ಜೊತೆಗೂಡಿ 'ಬಿಗ್ ಬಾಸ್' ಮನೆಯಲ್ಲಿ ರಾಪಿಡ್ ರಶ್ಮಿ ಗಾನಸುಧೆಯನ್ನು ಹರಿಸುತ್ತಿದ್ದರು. ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿರುವ ರಾಪಿಡ್ ರಶ್ಮಿಯ ಗಾಯನ ಕೇಳಿ ಕಿಚ್ಚ ಸುದೀಪ್ ಕೂಡ ಬೆರಗಾಗಿದ್ದರು.

  ಇದೀಗ 'ಬಿಗ್ ಬಾಸ್' ಕಾರ್ಯಕ್ರಮ ಮುಗಿದ ಮೇಲೆ ರಾಪಿಡ್ ರಶ್ಮಿ ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. ತಮ್ಮದೇ ಸಾಹಿತ್ಯ ಹಾಗೂ ಗಾಯನದಲ್ಲಿ ಹೊಸ ವಿಡಿಯೋ ಹಾಡನ್ನು ಹೊರತರಲು ರಾಪಿಡ್ ರಶ್ಮಿ ಮುಂದಾಗಿದ್ದಾರೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

  ರಾಪಿಡ್ ರಶ್ಮಿಯ 'ಇಂಡಿಪೆಂಡೆಂಟು' ಹಾಡು

  ರಾಪಿಡ್ ರಶ್ಮಿಯ 'ಇಂಡಿಪೆಂಡೆಂಟು' ಹಾಡು

  ಮಹಿಳೆಯರ ಪರ ದನಿ ಎತ್ತುವ ರಾಪಿಡ್ ರಶ್ಮಿ ಇದೀಗ 'ಇಂಡಿಪೆಂಡೆಂಟು' ಎಂಬ ಹಾಡನ್ನು ಹೊರತರಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಎಲ್ಲಾ ವರ್ಗದ ಹೆಣ್ಣು ಮಕ್ಕಳಿಗೆ ಟಚ್ ಆಗುವ ಹಾಡು ಇದಾಗಿದ್ದು, ಹುಡುಗಿಯರ ಲೈಫಿಗೆ ಈ ಹಾಡು ಖಂಡಿತ ಪಂಪ್ ಕೊಡುತ್ತೆ ಅಂತಾರೆ ರಾಪಿಡ್ ರಶ್ಮಿ.

  ರಾಪಿಡ್ ರಶ್ಮಿಯ ಮುರಿದು ಬಿದ್ದ ಮೊದಲ ಮದುವೆಯ ಕಹಿ ಅಧ್ಯಾಯ 'ಬಿಗ್' ಮನೆಯಲ್ಲಿ ಬಯಲು.!ರಾಪಿಡ್ ರಶ್ಮಿಯ ಮುರಿದು ಬಿದ್ದ ಮೊದಲ ಮದುವೆಯ ಕಹಿ ಅಧ್ಯಾಯ 'ಬಿಗ್' ಮನೆಯಲ್ಲಿ ಬಯಲು.!

  ಕಾನ್ಫಿಡೆಂಟ್ ಆಗಿರಬೇಕು.!

  ಕಾನ್ಫಿಡೆಂಟ್ ಆಗಿರಬೇಕು.!

  ''ಲೈಫಲ್ಲಿ ಇಂಡಿಪೆಂಡೆಂಟ್ ಆಗಿರಬೇಕೆಂದರೆ ಕಾನ್ಫಿಡೆಂಟ್ ಆಗಿರಬೇಕು ಎಂಬ ಪದಗಳ ಜೊತೆ ಆಟ ಆಡಿರುವ ಹಾಡಿದು. ಇದನ್ನ ಕೇಳಿದ್ರೆ ಹೆಣ್ಣು ಮಕ್ಕಳಿಗೆ ಬೂಸ್ಟ್ ಸಿಗುತ್ತದೆ. ಎಲ್ಲರೂ ತಮ್ಮನ್ನು ತಾವು ಕನೆಕ್ಟ್ ಮಾಡಿಕೊಳ್ಳುತ್ತಾರೆ'' ಎಂಬ ನಂಬಿಕೆ ರಾಪಿಡ್ ರಶ್ಮಿಗಿದೆ.

  'ಬಿಗ್ ಬಾಸ್' ಮೇಲೆಯೇ ರಾಪಿಡ್ ರಶ್ಮಿಗೆ ಬೇಜಾರು.! ಯಾಕ್ಗೊತ್ತಾ.?'ಬಿಗ್ ಬಾಸ್' ಮೇಲೆಯೇ ರಾಪಿಡ್ ರಶ್ಮಿಗೆ ಬೇಜಾರು.! ಯಾಕ್ಗೊತ್ತಾ.?

   ತಾಯಿಯೇ ಸ್ಫೂರ್ತಿ

  ತಾಯಿಯೇ ಸ್ಫೂರ್ತಿ

  'ಇಂಡಿಪೆಂಡೆಂಟು' ಎಂಬ ಹಾಡನ್ನು ಹೊರಗೆ ತರಲು ರಾಪಿಡ್ ರಶ್ಮಿಗೆ ಅವರ ತಾಯಿಯೇ ಸ್ಫೂರ್ತಿಯಂತೆ. ಮನೆಯ ಜವಾಬ್ದಾರಿಯನ್ನು ಹೊತ್ತು ಸ್ವಾವಲಂಬಿಯಾಗಿ ಬದುಕಿದ ತಮ್ಮ ತಾಯಿಗೆ ಈ ಹಾಡನ್ನು ಡೆಡಿಕೇಟ್ ಮಾಡ್ತಾರಂತೆ ರಾಪಿಡ್ ರಶ್ಮಿ.

   ಸಾಂಗ್ ರಿಲೀಸ್ ಯಾವಾಗ.?

  ಸಾಂಗ್ ರಿಲೀಸ್ ಯಾವಾಗ.?

  ಸದ್ಯಕ್ಕೆ ಹಾಡಿನ ಸಾಹಿತ್ಯ ರೆಡಿ ಇದ್ದು, ಗಾಯನವನ್ನು ಮಾಡಿ ಮುಗಿಸಿದ್ದಾರೆ ರಾಪಿಡ್ ರಶ್ಮಿ. ಹಾಡಿನ ಚಿತ್ರೀಕರಣ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಮಾರ್ಚ್ ಅಂತ್ಯದ ವೇಳೆಗೆ 'ಇಂಡಿಪೆಂಡೆಂಟು' ನಿಮ್ಮ ಕಣ್ ಮುಂದೆ ಬರಲಿದೆ.

  English summary
  Bigg Boss Kannada 6 contestant, RJ Rapid Rashmi has come up with a solo video song 'Independentu' which will release by end of March.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X