ರಶ್ಮಿಕಾ ಮಂದಣ್ಣ ಮೇಲೆ ಹಣ ಸುರಿದ ಜನ: ಕಾರಣವೇನು?
ಬಾಲಿವುಡ್‌ನಲ್ಲಿ ನೆಲೆ ನಿಲ್ಲಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಸಹ ರಶ್ಮಿಕಾ ಮಂದಣ್ಣ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ, ಇದೀಗ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.
ಕೇವಲ ಹಿಂದಿ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ, ಹೆಚ್ಚು ಮಂದಿ ಹಿಂದಿ ಸಿನಿಮಾ ವೀಕ್ಷಕರಿಗೆ ಪರಿಚಯವಾಗುವ ಕಾರಣಕ್ಕೆ ಒಂದರ ಹಿಂದೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಹಿಂದಿ ಮೀಡಿಯಾಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಹಿಂದಿ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ.
ಇದೀಗ ದೊಡ್ಡ ಲೈವ್ ಶೋ ಒಂದರಲ್ಲಿ ನಟಿ ರಶ್ಮಿಕಾ ಮಂದಣ್ಣ, ವೇದಿಕೆ ಮೇಲೆ ಗಾಯಕಿಯೊಂದಿಗೆ ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಹಾಗೂ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ನವರಾತ್ರಿ ಆರಂಭವಾಗಿದ್ದು ದೇಶದೆಲ್ಲೆಡೆ ಪ್ರದೇಶವಾರು ವಿವಿಧ ರೀತಿಯಲ್ಲಿ ಹಬ್ಬಗಳನ್ನು ಆಚರಿಸಲಾಗುತ್ತಿದೆ. ನವರಾತ್ರಿ ಬಂತೆಂದರೆ ಉತ್ತರ ಭಾರತದಲ್ಲಿ 'ಗರ್ಬಾ' ಕಾರ್ಯಕ್ರಮಗಳು ಪ್ರಾರಂಭವಾಗುತ್ತವೆ. ಜನರೆಲ್ಲ ಸೇರಿ ಒಟ್ಟಿಗೆ ನೃತ್ಯ ಮಾಡುವುದನ್ನು ಗರ್ಬಾ ಎನ್ನುತ್ತಾರೆ ಒಂದು ರೀತಿಯ ಕೋಲಾಟದಂತಿರುತ್ತದೆ. ತುಸು ಹಣವುಳ್ಳವರು ದೊಡ್ಡ ಸಂಗಿತಗಾರರನ್ನು ಕರೆಸಿ 'ಗರ್ಬಾ ನೈಟ್' ಕಾರ್ಯಕ್ರಮ ಮಾಡಿಸುವುದೂ ಇದೆ.

ಗರ್ಬಾ ನೈಟ್‌ನಲ್ಲಿ ಅತಿಥಿಯಾಗಿ ರಶ್ಮಿಕಾ
ಮುಂಬೈ, ಕೊಲ್ಕತ್ತ, ಬೆಂಗಳೂರು, ದೆಹಲಿ, ಹೈದರಾಬಾದ್, ಸೂರತ್, ವಡೋದರಾ ಇನ್ನೂ ಹಲವು ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ಗರ್ಬಾ ನೈಟ್‌ಗಳು ಅದ್ಧೂರಿಯಾಗಿ ನಡೆಯುತ್ತವೆ. ಅದರಲ್ಲಿಯೂ ಮತ್ತರ ಭಾರತದ ನಗರಗಳಲ್ಲಿ ಭಾರಿ ಅದ್ಧೂರಿಯಾಗಿ ಗರ್ಬಾ ನೈಟ್ ನಡೆಯುತ್ತದೆ. ನಿನ್ನೆ ಮುಂಬೈನಲ್ಲಿ ನಡೆದ ಅದ್ಧೂರಿ ಗರ್ಬಾ ನೈಟ್‌ನಲ್ಲಿ ಅತಿಥಿಯಾಗಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ ಅದೂ ಗರ್ಬಾ ಕ್ವೀನ್ ಫಲ್ಗುಣಿ ಪಾಟಕ್ ಜೊತೆಗೆ.

ಫಲ್ಗುಣಿ ಪಾಠಕ್ ಜೊತೆ ವೇದಿಕೆ ಹಂಚಿಕೊಂಡ ರಶ್ಮಿಕಾ
ಫಲ್ಗುಣಿ ಪಾಠಕ್, ಜನಪ್ರಿಯ ಹಾಡುಗಾರ್ತಿ ಅವರ ಟಿವಿ, ಕ್ಯಾಸೆಟ್ ಕಾಲದಲ್ಲಿಯೇ ಅವರ ಹಾಡುಗಳು ಬಹು ಜನಪ್ರಿಯತೆ ಗಳಿಸಿದ್ದವು. ಗರ್ಬಾ ಹಾಡುಗಳಿಗೆ ಫಲ್ಗುಣಿ ಪಾಠಕ್ ಬಹಳ ಜನಪ್ರಿಯ. ಮುಂಬೈನಲ್ಲಿ ನಿನ್ನೆ ನಡೆದ ಗರ್ಬಾ ನೈಟ್‌ನಲ್ಲಿ ಫಲ್ಗುಣಿ ಪಾಠಕ್ ಹಲವು ಹಾಡುಗಳನ್ನು ಹಾಡಿ ನೆರಿದಿದ್ದ ನೂರಾರು ಮಂದಿಯನ್ನು ರಂಜಿಸಿದ್ದಾರೆ. ಜೊತೆಗೆ ರಶ್ಮಿಕಾ ಮಂದಣ್ಣ ಸಹ ವೇದಿಕೆ ಏರಿ ಫಲ್ಗುಣಿ ಪಾಠಕ್ ಹಾಡುಗಳಿಗೆ ಗರ್ಬಾ ಮಾದರಿಯಲ್ಲಿ ಕೋಲು ಹಿಡಿದು ಕೋಲಾಟದ ಕೆಲವು ಸರಳ ಸ್ಟೆಪ್‌ಗಳನ್ನು ಹಾಕಿದ್ದಾರೆ. ವೇದಿಕೆ ಮೇಲಿಂದಲೆ ಬಿಡುಗಡೆ ಆಗಲಿರುವ ತಮ್ಮ ಮುಂದಿನ ಸಿನಿಮಾ 'ಗುಡ್ ಬೈ' ನೋಡಿರೆಂದು ಮನವಿ ಸಹ ಮಾಡಿದ್ದಾರೆ.

ಕಲಾವಿದರ ಮೇಲೆ ಹಣ ಚೆಲ್ಲುವ ಅಭ್ಯಾಸ
ಈ ರೀತಿಯ ಗರ್ಬಾ ನೈಟ್‌ಗಳಲ್ಲಿ ಗಾಯಕಿ ಮೇಲೆ ಹಣ ಚೆಲ್ಲುವುದು ಉತ್ತರ ಭಾರತದಲ್ಲಿ ಅಭ್ಯಾಸ. ಭಾರಿ ಶ್ರೀಮಂತರು ನಡೆಸುವ ಈ ಕಾರ್ಯಕ್ರಮಗಳಲ್ಲಿ ಹಾಡುಗಾರರು ತಮ್ಮಿಷ್ಟದ ಹಾಡುಗಳನ್ನು ಹೇಳಿದರೆ ನೆರೆದಿದ್ದವರು ಕಟ್ಟುಗಟ್ಟಲೆ ಹಣವನ್ನು ಹಾಡುಗಾರರ ಮೇಲೆ ಅಥವಾ ಸಂಗೀತ ಭಾರಿಸುವವರು ಅಥವಾ ಕುಣಿಯವವರ ಮೇಲೆ ಚೆಲ್ಲುತ್ತಾರೆ. ಅಂತೆಯೇ ನಿನ್ನೆ ಸಹ ಹಾಡುಗಾರ್ತಿ ಫಲ್ಗುಣಿ ಪಾಠಕ್ ಹಾಗೂ ನಟಿ ರಶ್ಮಿಕಾ ಮಂದಣ್ಣ ಮೇಲೆ ಹಣದ ಮಳೆಯನ್ನೇ ಜನ ಸುರಿಸಿದ್ದಾರೆ. ಗರ್ಬಾ ನೈಟ್‌ನ ಚಿತ್ರವೊಂದನ್ನು ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು ಚಿತ್ರದಲ್ಲಿ ರಶ್ಮಿಕಾ ನಿಂತಿರುವ ವೇದಿಕೆ ಮೇಲೆಲ್ಲ ನೋಟುಗಳು ಬಿದ್ದಿರುವುದು ಕಾಣಬಹುದಾಗಿದೆ.

ರಶ್ಮಿಕಾ ಮಂದಣ್ಣ ಮುಂದಿನ ಸಿನಿಮಾಗಳು
ರಶ್ಮಿಕಾ ಮಂದಣ್ಣ ಇದೀಗ ಎರಡು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ನಟಿಸಿರುವ ಮೊದಲ ಹಿಂದಿ ಸಿನಿಮಾ 'ಗುಡ್ ಬೈ' ಅಕ್ಟೋಬರ್ 7 ರಂದು ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ರಶ್ಮಿಕಾ ನಟಿಸಿರುವ ಮತ್ತೊಂದು ಹಿಂದಿ ಸಿನಿಮಾ 'ಮಿಷನ್ ಮಜ್ನು' ಇನ್ನಷ್ಟೆ ಬಿಡುಗಡೆ ಆಗಬೇಕಿದೆ. ಈ ನಡುವೆ ಟೈಗರ್ ಶ್ರಾಫ್ ಜೊತೆಗೆ 'ಸ್ಕ್ರೂ ಡೀಲಾ' ಸಿನಿಮಾವನ್ನು ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಇನ್ನು ತಮಿಳಿನಲ್ಲಿ ನಟ ವಿಜಯ್ ಜೊತೆ 'ವಾರಿಸು' ಸಿನಿಮಾದಲ್ಲಿರ ಶ್ಮಿಕಾ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆ 'ಪುಷ್ಪ 2' ಸಿನಿಮಾದಲ್ಲಿಯೂ ರಶ್ಮಿಕಾ ನಟಿಸುತ್ತಿದ್ದಾರೆ.


Click it and Unblock the Notifications











