For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಆಲ್ಬಂ ಸಾಂಗ್ ನಲ್ಲಿ ಕಾಣಿಸಿಕೊಂಡ ರಶ್ಮಿಕಾ: ಫೋಟೋ ವೈರಲ್

  |

  ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಇದೀಗ ಬಾಲಿವುಡ್ ನಲ್ಲಿ ಹವಾ ಎಬ್ಬಿಸಲು ಸಜ್ಜಾಗಿದ್ದಾರೆ. ಈಗಾಗಲೇ ರಶ್ಮಿಕಾ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಹಾಗಂತ ಅವರು ಸಿನಿಮಾದಲ್ಲಿ ನಟಿಸುತ್ತಿಲ್ಲ. ಗೊತ್ತಿರುವ ಹಾಗೆ ರಶ್ಮಿಕಾ ಹಿಂದಿಯ ಆಲ್ಬಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಹಿಂದಿಯ ಖ್ಯಾತ ರ್ಯಾಪರ್ ಬಾದ್ ಷಾ ಹಾಡಿನಲ್ಲಿ ರಶ್ಮಿಕಾ ಹೆಜ್ಜೆ ಹಾಕುತ್ತಿದ್ದಾರೆ. ಸಿನಿಮಾ ಮೂಲಕ ಅಭಿಮಾನಿಗಳ ಮನಗೆದ್ದಿರುವ ರಶ್ಮಿಕಾ ಇದೀಗ ಮೊದಲ ಬಾರಿಗೆ ಆಲ್ಬಂ ಹಾಡಿನ ಮೂಲಕ ಮೋಡಿ ಮಾಡಲು ಸಿದ್ಧರಾಗಿದ್ದಾರೆ. ಈಗಾಗಲೇ ಹಾಡಿನ ಶೂಟಿಂಗ್ ಪ್ರಾರಂಭವಾಗಿದ್ದು, ಕೆಲವು ದಿನಗಳಿಂದ ಚಂಡೀಗಢದಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ.

  ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾದ ರಶ್ಮಿಕಾ; ಆದರೆ ಸಿನಿಮಾದಲ್ಲಿ ಅಲ್ಲ

  ಇದೀಗ ರಾಶ್ಮಿಕಾ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೋಲ್ಡ್ ಮತ್ತು ಪಿಂಕ್ ಬಣ್ಣದ ಕಾಸ್ಟ್ಯೂಮ್ ನಲ್ಲಿ ಹಾಡಿಗೆ ಹೆಜ್ಜೆ ಹಾಕಿರುವ ಫೋಟೋಗಳು ರಶ್ಮಿಕಾ ಫ್ಯಾನ್ಸ್ ಬಳಗದಲ್ಲಿ ಹರಿದಾಡುತ್ತಿದೆ. ಮೊದಲ ಬಾರಿಗೆ ರಶ್ಮಿಕಾ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂದು ನೋಡಲು ಕಾತರರಾಗಿದ್ದಾರೆ.

  ಅಂದಹಾಗೆ ಈ ಆಲ್ಬಂ ಹಾಡು ಬಿಗ್ ಬಜೆಟ್ ನಲ್ಲಿ ತಯಾರಾಗುತ್ತಿದ್ದು, ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ಸದ್ಯ ಲೀಕ್ ಆಗಿರುವ ಫೋಟೋಗಳು ಅಭಿಮಾನಿಗಳ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದ್ದು, ರಶ್ಮಿಕಾ ಮೊದಲ ಹಿಂದಿ ಆಲ್ಬಂ ಹಾಡು ಹೇಗಿರಲಿದೆ ಕಾಯುತ್ತಿದ್ದಾರೆ. ಅಂದಹಾಗೆ ಈ ಹಾಡು ಮುಂದಿನ ವರ್ಷ ರಿಲೀಸ್ ಆಗುವ ಸಾಧ್ಯತೆ ಇದೆ.

  ರಶ್ಮಿಕಾ ಸದ್ಯ ತೆಲುಗಿನ ಬಹುನಿರೀಕ್ಷೆಯ ಪುಷ್ಪಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲು ಅರ್ಜುನ್ ಅಭಿನಯದ ಈ ಸಿನಿಮಾದಲ್ಲಿ ರಶ್ಮಿಕಾ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ತೆಲುಗಿನ ಮತ್ತೊಂದು ಸಿನಿಮಾ ರಶ್ಮಿಕಾ ಕೈಯಲ್ಲಿದೆ. ಜೊತೆಗೆ ತಮಿಳು ಮತ್ತು ಕನ್ನಡದ ಒಂದೊಂದು ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸಿನಿಮಾ ಚಿತ್ರೀಕರಣದ ನಡುವೆಯೂ ರಶ್ಮಿಕಾ ಬಿಗ್ ಬಜೆಟ್ ನ ವಿಡಿಯೋ ಸಾಂಗ್ ನಲ್ಲಿ ಹೆಜ್ಜೆಹಾಕುವ ಮೂಲಕ ಮೋಡಿ ಮಾಡಲು ಸಿದ್ಧರಾಗಿದ್ದಾರೆ.

  English summary
  Actress Rashmika Mandanna with famous rapper Badshah photo viral of her first music video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X